ಸುದ್ದಿ

ಕೊಟ್ಟ ಮಾತಿನಂತೆ ನಡೆದುಕೊಂಡ ನಟ ರಜನಿಕಾಂತ್‍,.ಇಷ್ಟಕ್ಕೂ ಆ ಮಾತಾದರೂ ಏನು ಗೊತ್ತಾ ,.??

28

ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ  ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಅಂತವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಮಾತಿನಂತೆ ತಮಿಳುನಾಡಿನ ನೆರೆ ಸಂತ್ರಸ್ತರಿಗೆ ಮನೆಯನ್ನು ನೀಡುವ ಮೂಲಕ  ಸಹಾಯವನ್ನು ಮಾಡಿದ್ದಾರೆ 

ಕಳೆದ ವರ್ಷ ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್‍ ಬಗ್ಗೆ ನಿಮಗೆ ತಿಳಿದೇ  ಇದೆ  ಜನರು ತತ್ತರಿಸಿ ಹೋಗಿದ್ದು, ನೂರಾರು ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ವೇಳೆ ಅನೇಕ ನಟರು ಅವರಿಗಾಗಿ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದರು. ಆದರೆ ರಜನಿಕಾಂತ್ ಅವರು ನೆರೆ ಸಂತ್ರಸ್ತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಮಾನವೀಯತೆಯನ್ನು  ಮೆರೆದಿದ್ದಾರೆ.

ರಜನಿಕಾಂತ್ ಅವರು ಇಂದು ತಮ್ಮ ಕಚೇರಿಯಲ್ಲಿ ನೆರೆ ಸಂತ್ರಸ್ತರಿಗೆ ಮನೆಯ ಹಕ್ಕು ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ರಜನಿಕಾಂತ್ ಸಂತ್ರಸ್ತರಿಗೆ ಮನೆಯ ಪತ್ರಗಳನ್ನು ನೀಡುತ್ತಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರ ಈ ಕೆಲಸ ನೋಡಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಮೆಚ್ಚುಗೆಯನ್ನು  ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ತಮ್ಮನ್ನು ಹೀರೋ ಮಾಡಿದ ನಿರ್ಮಾಪಕರಿಗೆ ಒಂದು ಕೋಟಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು. ರಜನಿಕಾಂತ್ ಮೊದಲ ಬಾರಿಗೆ 1978ರಲ್ಲಿ `ಭೈರವಿ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾವೂ ಸೂಪರ್ ಹಿಟ್ ಆಗಿದ್ದು, ನಿರ್ಮಾಪಕ ಕಲೈಜ್ಞಾನಂ ಚಿತ್ರವನ್ನು ನಿರ್ಮಿಸಿದ್ದರು. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದರೂ ಕಲೈಜ್ಞಾನಂ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗಾಗಿ ರಜನಿಕಾಂತ್ ನಿರ್ಮಾಪಕರಿಗೆ ಮನೆಯನ್ನು ಗಿಫ್ಟ್ ಆಗಿ ನೀಡಿದ್ದರು. ಇಷ್ಟೇ ಅಲ್ಲ ರಜನಿಕಾಂತ್ ಅವರು ಇನ್ನು ತುಂಬಾನೇ ಸಹಾಯವನ್ನು ಮಾಡುತ್ತಿದ್ದಾರೆ  ಅಂತವರ ಬಗ್ಗೆ ಎಷ್ಟು ಮಾತಾಡಿದರು ಅದು ಚಿಕ್ಕದೇ ಎಂದು ಅನಿಸುತ್ತದೆ ಏಕೆಂದರೆ ಅವರ ಅಭಿಮಾನ ಬಳಗ ಅಂತದ್ದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ