ಸುದ್ದಿ

ಸ್ಟೇಷನ್‌ ಮಾಸ್ಟರ್‌ ನಿರ್ಲಕ್ಷ್ಯಕ್ಕೆ ರೈಲ್ವೇ ಸಿಬ್ಬಂದಿ ಬಲಿ…!

79

ರೈಲ್ವೆ ಹಳಿಯಲ್ಲಿ ನಿರ್ವಹಣೆ ಕೆಲಸ ಮಾಡುತ್ತಿದ್ದ ವೇಳೆ ಹೌರಾ- ಜಗದಾಲ್ಪುರ ಸಮಲೇಶ್ವರಿ ಎಕ್ಸ್‌ಪ್ರೆಸ್‌ ರೈಲು ಆಗಮಿಸಿದ್ದು ಅಪಘಾತಕ್ಕೆ ಕಾರಣವಾಗಿದೆ.

ರೈಲ್ವೆ ಹಳಿ ನಿರ್ವಹಣೆ ಮಾಡುವ ನಿರ್ವಹಣಾ ಕಾರಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅದೇ ದಾರಿಯಲ್ಲಿ ಸಮಲೇಶ್ವರಿ ಎಕ್ಸ್ ಪ್ರೆಸ್ ಬಂದಿದೆ.

ಈ ಘಟನೆಯಿಂದ ಸಮಲೇಶ್ವರಿ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿದ್ದು ಎಂಜಿನ್ ಗೆ ಹಾನಿಯಾಗಿದೆ. ಆದರೆ ರೈಲು ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ.

ರೈಲ್ವೆ ಹಳಿ ನಿರ್ವಹಣೆ ನಡೆಯುವಾಗಲೇ ರೈಲು ಸಂಚಾರಕ್ಕೆ ಸಿಗ್ನಲ್ ನೀಡಿದ್ದಕ್ಕಾಗಿ ಸಂಬಂಧಪಟ್ಟ ಸ್ಟೇಷನ್ ಮಾಸ್ಟರ್ ರನ್ನು ಅಮಾನತು ಮಾಡಲಾಗಿದ್ದು ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಈ ಘಟನೆಯಲ್ಲಿ ಸೀನಿಯರ್ ಸೆಕ್ಷನ್ ಎಂಜಿನಿಯರ್ ಸಾಗರ್, ಟೆಕ್ನಿಷಿಯನ್ ಗೌರಿ ನಾಯ್ಡು ಮತ್ತು ಸುರೇಶ್ ಜೀವ ಕಳೆದುಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸಾರ್ವಜನಿಕರ ಮುಂದೆಯೇ ಚಾಕುವಿನಿಂದ ಇರಿದು ಯುವತಿಯ ಬರ್ಬರ ಹತ್ಯೆ …!

    20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಭೋಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಆರೋಪಿ ಮತ್ತು ಮೃತ ಯುವತಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಮೊದಲಿಗೆ ಮೃತ ಯುವತಿಯ ಬಳಿ ಬಂದು ಮಾತನಾಡುತ್ತಿದ್ದನು. ಆದರೆ…

  • ಜ್ಯೋತಿಷ್ಯ

    ನಿಮ್ಮ ಮನೆ ಒಡೆಯದೇ ಈ ಸರಳ ಕ್ರಮಗಳಿಂದ ವಾಸ್ತುದೋಷ ನಿವಾರಣೆ ಮಾಡಿಕೊಳ್ಳಿ…ಹೇಗೆಂದು ತಿಳಿಯಲು ಈ ಲೇಖನ ಓದಿ…

    ವಾಸ್ತುದೋಷದಿಂದ ಸುಖ-ಸಮೃದ್ಧಿ ನಾಶವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾಸ್ತುದೋಷವಿದೆ ಎನ್ನುವ ಕಾರಣಕ್ಕೆ ಜನರು ಮನೆ ಒಡೆಯಲೂ ಮುಂದಾಗ್ತಾರೆ. ಆದ್ರೆ ಮನೆ ಒಡೆಯಬೇಕಾಗಿಲ್ಲ… ಕೆಲ ಸರಳ ಉಪಾಯಗಳನ್ನು ಅನುಸರಿಸಿ ವಾಸ್ತು ದೋಷವನ್ನು ಕಡಿಮೆ ಮಾಡಬಹುದು… *ದೇವರ ಪೂಜೆ ಮಾಡಿದ ಹೂವನ್ನು ದೇವರ ಮನೆಯಲ್ಲಿಡಬೇಡಿ. *ಈಶಾನ್ಯ ಮೂಲೆಯಲ್ಲಿ ಅಧಿಕ ತೂಕದ ವಸ್ತುಗಳನ್ನು ಇಡಬೇಡಿ. *ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನಿಡಿ. *ಮನೆಯ ಗೋಡೆ ಮೇಲೆ ಹಸಿರು, ಸುಂದರ ಫೋಟೋಗಳನ್ನು ಹಾಕಿ. *ನೀರಿಗೆ ಅರಿಶಿನವನ್ನು ಬೆರೆಸಿ ವೀಳ್ಯದೆಲೆ ಸಹಾಯದಿಂದ ಮನೆಗೆಲ್ಲ ಸಿಂಪಡಿಸಿ….

  • ಆಧ್ಯಾತ್ಮ

    ಕೃಷ್ಣನ ಜನ್ಮದ ಹಿಂದೆ ಅಡಗಿರುವ ಆ ರಹಸ್ಯ ಏನು ಗೊತ್ತಾ?ಕೃಷ್ಣ ಕಾರಾಗೃಹದಲ್ಲೇ ಜನಿದಿದ್ದು ಏಕೆ?ತಿಳಿಯಲು ಈ ಲೇಖನಿ ಓದಿ…

    ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ

  • ರಾಜಕೀಯ

    ನ್ಯಾಯ ಸಿಗದೇ ಆತ್ಮಹತ್ಯಗೆ ಪ್ರಯತ್ನಿಸಿ ಆಸ್ಪತ್ರೆ ಸೇರಿದ ಶಾಸಕ..!

    ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಶಿವಮೊಗ್ಗ  ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಜೊತೆ…

  • ಜೀವನಶೈಲಿ

    ಸರಿಯಾಗಿ “ನಿದ್ದೆಮಾಡಿಲ್ಲ” ಅಂದ್ರೆ ಏನಾಗುತ್ತೆ ಗೊತ್ತಾ? ಇದನ್ನು ಓದಿ ಶಾಕ್ ಆಗೋದು ಪಕ್ಕಾ!

    ನಮ್ಮ ಜೀವನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು ನಿದ್ದೆಗೆಡುವುದು ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ