ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೀಪಾವಳಿಯ ಹಿನ್ನೆಲೆಯಲ್ಲಿ ಕಂಪನಿಗಳ ಮಾರಾಟವು ಮತ್ತೆ ಚೇತರಿಸಿಕೊಂಡಿದೆ. ದೀಪಾವಳಿಗೆ ಜನರು ಹೊಸ ವಾಹನಗಳನ್ನು ಕೊಳ್ಳುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವಾಗಿರುವ ಕಾರಣಕ್ಕೆ ವಾಹನಗಳ ಮಾರಾಟವು ಹೆಚ್ಚಾಗಿದೆ.ಇದೇ ರೀತಿ ಮಧ್ಯ ಪ್ರದೇಶದಲ್ಲಿರುವ ಸಾತ್ನಾ ಜಿಲ್ಲೆಯ ರಾಕೇಶ್ ಕುಮಾರ್ ಗುಪ್ತಾರವರು ಸಹ ಹೊಸ ಸ್ಕೂಟರ್ ಖರೀದಿಸಲು ಬಯಸಿದ್ದಾರೆ. ಅದರಂತೆ ಇತ್ತೀಚಿನ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಲು ಡೀಲರ್ ಬಳಿ ಹೋಗಿದ್ದಾರೆ.
ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರೋದು ಇದರಲ್ಲೆ. ಎಲ್ಲರಂತೆ ರಾಕೇಶ್ ಕುಮಾರ್‍ರವರು ಚೆಕ್‍ನಲ್ಲೋ, ಡಿಡಿಯಲ್ಲೋ, ಇಎಂಐನಲ್ಲೊ ಅಥವಾ ನೂರು, ಇನ್ನೂರು, ಐನೂರು, ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ನೀಡಿ ಹೋಂಡಾ ಆಕ್ಟಿವಾ ಖರೀದಿಸಿದ್ದರೆ ಸುದ್ದಿಯಾಗುತ್ತಿರಲಿಲ್ಲ. ರಾಕೇಶ್‍ರವರು ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಸಾತ್ನಾದ ಪನ್ನಾ ನಾಗಾದಲ್ಲಿರುವ ಕೃಷ್ಣ ಹೋಂಡಾ ಡೀಲರ್‍ಶಿಪ್‍ನಿಂದ ಖರೀದಿಸಿದ್ದಾರೆ. ಖರೀದಿಸಲು ಪೂರ್ತಿ ಹಣವನ್ನೇ ನೀಡಿದ್ದಾರೆ. ಆದರೆ ಈ ಪೂರ್ತಿ ಹಣವು 5 ರೂಪಾಯಿ ಹಾಗೂ 10 ರೂಪಾಯಿ ನಾಣ್ಯಗಳಿಂದ ಕೂಡಿತ್ತು ಎಂಬುದು ವಿಶೇಷ.
ರಾಕೇಶ್‍ರವರು ನೀಡಿದ ಹಣವನ್ನು ನೋಡಿ ಡೀಲರ್ ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ. ಅವರು ನೀಡಿದ ಎಲ್ಲಾ ನಾಣ್ಯಗಳನ್ನು ಎಣಿಸಲು ಮೂರಕ್ಕೂ ಹೆಚ್ಚು ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಅಂದ ಹಾಗೆ ರಾಕೇಶ್‍ರವರು ಖರೀದಿಸಿದ್ದು, ಹೋಂಡಾ ಆಕ್ಟಿವಾ 125 ಸ್ಕೂಟರ್‍ನ ಟಾಪ್ ಎಂಡ್ ಮಾದರಿಯನ್ನು.ಈ ಮಾದರಿಯ ಸ್ಕೂಟರ್ ಡಿಸ್ಕ್ ಬ್ರೇಕ್ ಹಾಗೂ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಈ ಸ್ಕೂಟರಿನ ಬೆಲೆಯು ಮಧ್ಯ ಪ್ರದೇಶದ ಸಾತ್ನಾದ ಆನ್‍ರೋಡ್ ದರದಂತೆ ರೂ.83,000ಗಳಾಗುತ್ತದೆ. ಡೀಲರ್‍ಗಳ ಪುಣ್ಯಕ್ಕೆ ರಾಕೇಶ್‍ರವರು 5 ರೂಪಾಯಿ ಹಾಗೂ 10 ರೂಪಾಯಿ ನಾಣ್ಯಗಳನ್ನು ನೀಡಿದ್ದಾರೆ.
ಇವುಗಳ ಬದಲು ಒಂದು ರೂಪಾಯಿ ಹಾಗೂ ಎರಡು ರೂಪಾಯಿ ನಾಣ್ಯಗಳನ್ನು ನೀಡಲಿಲ್ಲವೆಂದು ಡೀಲರ್‍ಗಳು ನಿಟ್ಟುಸಿರು ಬಿಟ್ಟಿರುವುದು ಗ್ಯಾರಂಟಿ. ರಾಕೇಶ್ ಕುಮಾರ್ ಗುಪ್ತಾರವರು ಯಾವ ಕಾರಣಕ್ಕೆ ಈ ರೀತಿಯಾಗಿ ಹಣವನ್ನು ಪಾವತಿಸಿದರು ಎಂಬುದು ತಿಳಿದು ಬಂದಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ಸುಂದರವಾದ ಹಾಗೂ ಸದೃಢವಾದ ಕೂದಲನ್ನು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಕೂದಲು ಉದುರುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯಾಗಿ ಬದಲಾಗಿದೆ. ನೀವು ಕೂದಲಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ಇನ್ನೇನು ಚುನಾವಣಾ ಹತ್ತಿರ ಸಮೀಪಿಸುತ್ತಿದೆ.ಈಗಂತೂ ಎಲ್ಲಿ ನೋಡಿದರೂ ಚುನಾವಣಾ ಬಗ್ಗೆಯೇ ಮಾತುಗಳು.ಯಾರು ಗೆಲ್ತಾರೆ,ಯಾರು ಸೋಲ್ತಾರೆ ಎಂಬುದೇ ಚರ್ಚೆ ಒಂದು ಕಡೆ ಆಗಿದ್ದರೆ, ಮತ್ತೊಂದು ಕಡೆ ವೋಟರ್ IDಗೆ ಸಂಬಂದಪಟ್ಟ ಕೆಲಸಗಳು ಭರದಿಂದಲೇ ನಡೆಯುತ್ತಿದೆ.
ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ನಾಗಮಂಗಲ ತಾಲ್ಲೂಕಿನ ಚೀಣ್ಯ ಗ್ರಾಮದ ರಮೇಶ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ರಮೇಶ್, ಜೆಡಿಎಸ್ ಪರ ಪ್ರಚಾರಕ್ಕೆ ಜನರನ್ನು ಕರೆ ತರುವುದಾಗಿ ಹೇಳಿದ್ದಾರೆ. ಈ ಆಡಿಯೋ ನೋಡಿ… ಬೆಂಗಳೂರಿನಿಂದ ಪ್ರಚಾರಕ್ಕೆ ಜನರನ್ನು…
ಬಲು ದುಬಾರಿಯಾಗಿದ್ದ ಅಂಗಾಂಗ ಕಸಿ ಚಿಕಿತ್ಸೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಅಂಗಾಂಗ ಕಸಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಮತ್ತು ಔಷಧ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು ಸುಲಭವಾಗಿ ಹೃದಯ, ಕಿಡ್ನಿ, ಲಿವರ್ ಕಸಿ ಮಾಡಿಸಿಕೊಳ್ಳಬಹುದು. ಈ ಯೋಜನೆ ಅಡಿ ಕಿಡ್ನಿ ಕಸಿಗೆ 3 ಲಕ್ಷ ರೂ., ಹೃದಯ ಕಸಿಗೆ 11 ಲಕ್ಷ ರೂ., ಲಿವರ್ ಕಸಿಗೆ 12 ಲಕ್ಷ ರೂ. ನೆರವು ನೀಡಲಾಗುವುದು. ಕಳೆದ…