ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಚಿತಾ ರಾಮ್ ‘ಅನುಬಂಧ ಅವಾರ್ಡ್ಸ್2019’ರಲ್ಲಿ ಮೊದಲ ಬಾರಿಗೆ ನಿರೂಪಣೆಮಾಡುತ್ತಿದ್ದಾರೆ. ಚೆನ್ನಾಗಿದೆ ಅಂದ್ರೆ ಚೆನ್ನಾಗಿದೆ ಹೇಳಿ,ತಪ್ಪಿದ್ರೆ ಡಿಂಪಲ್ ನೋಡಿ ಕ್ಷಮಿಸಿಎಂದಿದ್ದರು. ಈಗ ಅವರು ಕೋಟ್ಯಧಿಪತಿಯಲ್ಲಿ ಪುನೀತ್ ಜಾಗವನ್ನು ಆಕ್ರಮಿಸಿಕೊಂಡರಾ? ಅಥವಾ ಅಪ್ಪು ಅವರೇಆ ಹುದ್ದೆ ಬಿಟ್ಟುಕೊಟ್ಟರಾ?ಎಂಬ ಪ್ರಶ್ನೆ ಮೂಡಬಹುದು. ಪುನೀತ್ ರಾಜ್‌ಕುಮಾರ್ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ನಿರೂಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ರಚಿತಾ ರಾಮ್ ಅಪ್ಪು ಜಾಗದಲ್ಲಿ ಕೂತು ಅಪ್ಪುಗೆ ಪ್ರಶ್ನೆ ಕೇಳುತ್ತಾರೆ, ಅದರ ಜೊತೆಗೆ ನಾಲ್ಕು ಆಪ್ಶನ್ ಕೊಡ್ತಾರೆ. ಹಾಟ್‌ಸೀಟ್ ಅಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳಿಗೆ ಹೇಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆಯೋ ಅದೇ ರೀತಿ ಪವರ್‌ಸ್ಟಾರ್‌ಗೂ ಕೂಡ ಪ್ರಶ್ನೆ ಕೇಳಲಾಗುತ್ತದೆ.

ರಚಿತಾ ರಾಮ್ ಸ್ಪೆಷಲ್ ಗೆಸ್ಟ್ ಆಗಿ ಕೋಟ್ಯಧಿಪತಿಯ ಈ ಸೀಸನ್‌ಗೆ ಆಗಮಿಸಿದ್ದಾರೆ. ಈ ಎಪಿಸೋಡ್‌ನ ಚಿತ್ರೀಕರಣ ನಡೆದಿದ್ದು, ನವೆಂಬರ್‌ನಲ್ಲಿ ಈ ಎಪಿಸೋಡ್ ಪ್ರಸಾರವಾಗಲಿದೆ. ಕೋಟ್ಯಧಿಪತಿ ಶೋ ಬಗ್ಗೆ, ಅವರ ಫ್ರೆಂಡ್‌ಶಿಪ್, ಸ್ಟಾರ್ಸ್ ,ಫ್ಯಾಮಿಲಿ, ಹವ್ಯಾಸಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದು ಕೇವಲ ಫನ್‌ಗಾಗಿ ಮಾತ್ರ. ಪುನೀತ್ ದುಡ್ಡಿಗಾಗಿ ಅಲ್ಲ, ಪ್ರೀತಿಗಾಗಿ ಆಡಲಿದ್ದಾರಂತೆ.

ಈ ಹಿಂದೆ ಜಗ್ಗೇಶ್ ಅವರು ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಟ್ ಸೀಟ್‌ನಲ್ಲಿ ಕುಳಿತಿದ್ದ ಅವರಿಗೆ ಅಪ್ಪು ಪ್ರಶ್ನೆ ಕೇಳುತ್ತಿದ್ದರು, ಅಪ್ಪು ಪ್ರಶ್ನೆಯಾದಮೇಲೆ ಅವರ ವೈಯಕ್ತಿಕ ಜೀವನ, ಸಿನಿಮಾ, ತಂದೆ-ತಾಯಿ ಬಗ್ಗೆ ಜಗ್ಗೇಶ್ ವಾಪಾಸ್ ಪುನೀತ್ ಅವರಿಗೆ ಪ್ರಶ್ನೆ ಕೇಳಿದ್ದರು. ಈ ವೇಳೆ ಪುನೀತ್ ಅವರ ಜಾತಕಫಲದ ಬಗ್ಗೆಯೂ ನವರಸನಾಯಕ ಮಾತನಾಡಿದ್ದರು. ಪ್ರಸ್ತುತ ರಚಿತಾ ರಾಮ್ ಮಜಾಭಾರತದ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಕೋಟ್ಯಧಿಪತಿಯ ಮೂರನೇ ಸೀಸನ್‌ನನ್ನು ರಮೇಶ್ ಅರವಿಂದ್ ಹೋಸ್ಟ್ ಮಾಡಿದ್ದರು.

‘ಕನ್ನಡದ ಕೋಟ್ಯಾಧಿಪತಿ’ಎಂಬುದು ಕಿರುತೆರೆಯಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಲು ಇರುವ ರಿಯಾಲಿಟಿ ಶೋ. ಸಾಮಾನ್ಯ ಜನರೂ ಕೂಡ ಇಲ್ಲಿ ಭಾಗವಹಿಸಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು ಹಣ ಗೆಲ್ಲಬಹುದು. ಇಲ್ಲಿ ಗೆದ್ದ ಹಣದಿಂದ ಬಹಳಷ್ಟು ಜನರ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಹಾಗೆಯೇ ಎಷ್ಟೋ ಮಂದಿ ಸೆಲೆಬ್ರಿಟಿಗಳು ಕೂಡ ಇಲ್ಲಿ ಬಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ತಾವು ಆಟದಲ್ಲಿ ಗೆದ್ದ ಹಣವನ್ನು ಸಾಮಾಜಿಕ ಕೆಲಸಕ್ಕೆ ಬಳಸುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಶಾಸಕರ ಸಮ್ಮುಖದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಘೋಷಿಸಿದ್ದಾರೆ. ಅದರಲ್ಲೂ ವಾಸ್ತು, ಜೋತಿಷ್ಯಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿರುವ ದೇವೇಗೌಡ ಕುಟುಂಬದವರು ಇಂದು ಶುಭ ಲಗ್ನವನ್ನು ನೋಡಿಕೊಂಡು ನಿಖಿಲ್ ಮಂಡ್ಯದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.ಹೆಸರು ಘೋಷಣೆ ಮಾಡಿದ ನಂತರ ಮಧ್ಯಾಹ್ನ 12:01ಕ್ಕೆ ನಿಖಿಲ್ ವೇದಿಕೆ ಮೇಲೆ ಬಂದಿದ್ದಾರೆ. ರಾಜಕೀಯವಾಗಿ ಏರಬೇಕು, ಬೆಳಯಬೇಕು ಎನ್ನುವ ಉದ್ದೇಶದಿಂದ…
ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ.
ರಾಜ್ಯ ಸಿಇಟಿ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.
ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ಸನಾತನ ಧರ್ಮವಾಗಿದೆ. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.
ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ….
ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲಂಚಾವತರ ಮೂಲಕ ಮನೆಮಾತಾಗಿದ್ದ ಹಿರಣಯ್ಯ ಅನಾರೋಗ್ಯದಿಂದಾಗಿ ತೆರೆಯ ಹಿಂದೆ ಸರಿದಿದ್ದರು. ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ….