ಸುದ್ದಿ

ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡ್ತರಾ ಗೊತ್ತಿಲ್ಲ?ಆದರೆ ರೈತರ ನೆರವಿಗೆ ಅವರು ಏನ್ ಮಾಡ್ತಾರೆ ಗೊತ್ತಾ..?

93

ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ‌ ಕೇಂದ್ರ ಸರ್ಕಾರ ರೈತರ ಸಾಲ‌ಮನ್ನಾ ಮಾಡಲಿದೆ ಎಂಬ ಸುದ್ದಿಯೊಂದು ಹರಿದಾಡಿ ಸಂಚಲನ‌ ಮೂಡಿಸಿತ್ತು. ಆದರೆ ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಚಿಂತನೆ ನಡೆಸಿಲ್ಲವೆಂದು ಹೇಳಲಾಗಿದೆ.

ಇದೇ ವೇಳೆ ಸಾಲಮನ್ನಾ ಹೊರತಾಗಿ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನಿ‌ ಮೋದಿ ವಿವಿಧ ಸುತ್ತಿನ‌ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕೃಷಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಮೋದಿ, ಕೃಷಿ ಕ್ಷೇತ್ರದಲ್ಲಿ ಜನಪ್ರಿಯ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಫಸಲ್ ಭಿಮಾ ಯೋಜನೆ ಪ್ರಧಾನಿಯವರ ಕನಸಿನ‌ ಕೂಸಾಗಿದ್ದು, ಮುಂದೆ ರೈತರಿಗೆ ಖಚಿತ ಪಾವತಿ ಸಿಗದ ಯಾವುದೇ ಕಂಪೆನಿ ಮಧ್ಯಸ್ಥಿಕೆ ಇಲ್ಲದ ಯೋಜನೆ ರೂಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜೊತೆಗೆ ಈ ಬೆಳೆ ವಿಮೆ ಯೋಜನೆಗೆ ಇನ್ನೂ ಕೆಲವೊಂದು ನಿಯಮಗಳನ್ನು ಸೇರ್ಪಡೆಗೊಳಿಸುವ ಮೂಲಕ ರೈತರಿಗೆ ಬೆಳೆ ಹಾನಿ ಆದ ಸಂದರ್ಭದಲ್ಲಿ ಗರಿಷ್ಟ ಮೊತ್ತದ ಪರಿಹಾರ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ