ಸುದ್ದಿ

ಮೋದಿ ಹೆಲಿಕಾಪ್ಟರ್ ಚೆಕ್ ಮಾಡಿ ಅಮಾನತು ಆಗಿದ್ದ ಚುನಾವಣಾ ಅಧಿಕಾರಿ..!ಅಮಾನತು ಆದೇಶ ಏನಾಯ್ತು..?

274

ಒರಿಸ್ಸಾದ ಸಂಬಲ್ ಪುರದಲ್ಲಿ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅಮಾನತು ಆದೇಶವನ್ನು ತಡೆ ಹಿಡಿಯಲಾಗಿದೆ.ಏಪ್ರಿಲ್ 18ರಂದು ಮೊಹಮ್ಮದ್ ಮೊಹ್ಸಿನ್ ಒರಿಸ್ಸಾದಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದರು.

ಎಸ್ಪಿಜಿಯಿಂದ ವಿಶೇಷ ರಕ್ಷಣೆ ಪಡೆದಿರುವವರ ವಾಹನಗಳನ್ನು ತಪಾಸಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಆರೋಪದ ಮೇಲೆ ಚುನಾವಣಾ ಆಯೋಗ ಮೊಹ್ಸಿನ್ ಅವರನ್ನು ಅಮಾನತು ಮಾಡಿತ್ತು. 

ಅಮಾನತಿನ ಬಳಿಕ ಮೊಹ್ಸಿನ್ ಚುನಾವಣೆ ಸಂದರ್ಭದಲ್ಲಿ ಎಲ್ಲರ ವಾಹನವನ್ನೂ ತಪಾಸಣೆ ಮಾಡಬೇಕಾಗುತ್ತದೆ ಎಂದು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು. ಕೆಲ ದಿನಗಳ ನಂತರ ಅವರನ್ನು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಯ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. 

ಮೊಹ್ಸಿನ್ ಅವರನ್ನು ಅಮಾನತುಗೊಳಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಿರುವ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊಹ್ಸಿನ್ ಅವರು ಕೆಲಸದಲ್ಲಿ ಮುಂದುವರಿಯಬಹುದು. ಅವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಎಸ್ಪಿಜಿ ಭದ್ರತೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರು ಏನು ಬೇಕಾದರೂ ಮಾಡಬಹುದು ಎಂದು ಅರ್ಥವಲ್ಲ ಎಂದು ಹೇಳಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ‌ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ..ನಿಮ್ಮ ಸಮಸ್ಯೆ.ಏನೇ .ಇರಲಿ…

  • ವಿಸ್ಮಯ ಜಗತ್ತು

    ಇವರು ನಮ್ಮ ಇಂಡಿಯನ್ ರಿಯಲ್ ಸ್ಪೈಡರ್ ಮ್ಯಾನ್!ಅಲಿಯಾಸ್ ಕೋತಿ ರಾಜ್.ಇವರ ಸಾಹಸದ ಬಗ್ಗೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ!

    ಭಾರತದ ಸ್ಪೈಡರ್ ಮ್ಯಾನ್ ಎಂದೇ ಹೆಸರುಗಳಿಸಿರುವ ಚಿತ್ರದುರ್ಗದ ಕೋತಿರಾಜು ಅಲಿಯಾಸ್ ಜೋತಿರಾಜು ಬಗ್ಗೆ ನಿಮಗೆ ಗೊತ್ತೇ? ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದರೆ ನೀವು ಇವರ ಸಾಹಸಮಯ ಆಟಗಳನ್ನು ನೋಡಿರಬಹುದು, ಇವರು ನೂರಾರು ಅಡಿ ಎತ್ತರದ ಗೋಡೆಗಳನ್ನು ಯಾವ ಸಹಾಯವಿಲ್ಲದೆಯೇ ಮೇಲೇರುತ್ತಾರೆ!

  • ಸುದ್ದಿ

    ವೋಟ್ ಮಾಡಿ ಎಂದಿದಕ್ಕೆ ಮಂಗಳಾರತಿ ಮಾಡಿಸಿಕೊಂಡ ಮೋಹಕ ತಾರೆ ರಮ್ಯಾ..

    ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಇದೀಗ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವಕಾಶ ಸಿಕ್ಕಾಗ ತಾವು ಮತದಾನ ಮಾಡದೇ, ಇದೀಗ ಟ್ವಿಟರ್ ನಲ್ಲಿ ಮತದಾನದ ಜಾಗೃತಿ ಮೂಡಿಸಲು ಹೋಗಿ ಟ್ವಿಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ, ‘ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಸಿಕೊಳ್ಳಿ, ಟೈಂ ಹೋಗ್ತಿದೆ…..ಭವಿಷ್ಯ ನಿಮ್ಮದಾಗಿದೆ’ ಅಂತಾ ಟ್ವೀಟ್ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು…

  • ಸುದ್ದಿ

    ಬರದಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ರೈತರು…..!

    ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…

  • ಸುದ್ದಿ

    ತಮಿಳು ಚಿತ್ರರಂಗದವರು ಈ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತರೆ…!ಯಾಕೆ ಗೊತ್ತ?

    ತಮಿಳು ರಾಕರ್ಸ್ ಈ ಹೆಸರನ್ನು ಕೇಳಿದರೆ ಸಾಕು ಇಡೀ ತಮಿಳು ಚಿತ್ರೋದ್ಯಮ ಬೆಚ್ಚಿ ಬೀಳುತ್ತದೆ. ಏಕೆಂದರೆ ನೂರಾರು ಕೋಟಿ ರೂಪಾಯಿ ಸುರಿದು ವರ್ಷಗಟ್ಟಲೆ ಸಿನಿಮಾ ಮಾಡಿ ಬಿಡುಗಡೆಯಾದ ದಿನವೇ ಮಧ್ಯಾಹ್ನದ ವೇಳೆಗೆ ಆ ಚಿತ್ರವನ್ನು ಮೊಬೈಲ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ ಈ ತಮಿಳು ರಾಕರ್ಸ್.ಅಂದರೆ ಇವರ ದಂಧೆಯೇ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿದೆ. ಈ ತಮಿಳು ರಾಕರ್ಸ್ ಕೇವಲ ತಮಿಳು ಚಿತ್ರೋದ್ಯಮಕ್ಕಷ್ಟೇ ಅಲ್ಲ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಇತರೆ…