Health

ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಸುಖ ನಿದ್ದೆಗೆ ತೊಂದರೆಯಾಗದಂತೆ ತಡೆಯುವುದು ಹೇಗೆ? ಇದನ್ನೊಮ್ಮೆ ಓದಿ..

40

ಹಗಲಿಡಿ ಸ್ಮಾರ್ಟ್‌ ಫೋನ್‌ ಬಳಸಿ ಮತ್ತು ರಾತ್ರಿ ಹೊತ್ತು ಮಲಗುವ ಮುಂಚೆಯೂ ಸ್ಮಾರ್ಟ್‌ ಫೋನ್‌ ಬಳಸುವುದರಿಂದ ನಿಮ್ಮ ಸುಖ ನಿದ್ದೆಗೆ ಭಂಗ ಖಂಡಿತ ಬರುತ್ತದೆ. ನಮ್ಮ ಜೀವನ ಶೈಲಿಯೇ ಹಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ ಅತ್ಯುತ್ತಮವಾದ ನಿದ್ದೆ ಬೇಕು. ಆದರೆ,ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ನಿದ್ರೆಯ ಪ್ಯಾಟರ್ನ್‌ ಕೂಡ ಬದಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 9 ಗಂಟೆಯಾದರೂ ನಿದ್ರೆ ಮಾಡಬೇಕು. 

ಕೆಲಸ ಮಾಡುವಾಗ ನಾವು ಬಹುತೇಕ ಸಮಯವನ್ನು ಕಂಪ್ಯೂಟರ್‌ ಸ್ಕ್ರೀನ್‌ ನೋಡಿಕೊಂಡೇ ಇರುತ್ತೇವೆ ಮತ್ತು ಕೆಲಸ ಇಲ್ಲದಿದ್ದಾಗ ಮೊಬೈಲ್‌ ಫೋನ್‌ಗಳಲ್ಲಿ ನಿರತರಾಗಿರುತ್ತೇವೆ. ಅಂದರೆ, ನಮ್ಮ ಕಣ್ಣು ಸದಾಯಾವುದಾರೂ ಒಂದು ಸ್ಕ್ರೀನ್‌ ಮೇಲೆ ಇದ್ದೇ ಇರುತ್ತದೆ. ಈ ರೀತಿಯಾಗಿ ನಿರಂತರವಾಗಿ ಕಂಪ್ಯೂಟರ್‌ ಅಥವಾ ಮೊಬೈಲ್‌ ಸ್ಕ್ರೀನ್‌ಗಳನ್ನು ನೋಡುವುದರಿಂದ ನಮ್ಮ ನಿದ್ರೆಯ ಪ್ಯಾಟರ್ನ್‌ನಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನಿಮ್ಮ ವೈರ್‌ಲೆಸ್‌ ಸ್ಪೀಕರ್‌ಗೆ ಹೊಂದಿಸಿ ಮತ್ತು ಸಾಫ್ಟ್‌ ಮ್ಯೂಸಿಕ್‌ ಅನ್ನು ಪ್ಲೇ ಮಾಡಿ. ಅಂದರೆ, ಮಳೆ, ಗುಡುಗು, ತಂಗಾಳಿಯಂಥ ಧ್ವನಿಯನ್ನು ಒಳಗೊಂಡ ಸ್ವಾಭಾವಿಕ ಸಂಗೀತವಿರಲಿ. ಅಲ್ಲದೇ ಮಲಗುವ ಒಂದು ಗಂಟೆ ಮುಂಚೆ ನೀವು ಸ್ಲೀಪ್‌ ಮ್ಯೂಸಿಕ್‌ ಆನ್‌ ಮಾಡಬಹುದು ಅಥವಾ ಯುಟೂಬ್‌ನಲ್ಲಿ ದೊರೆಯುವ ಸಾಫ್ಟ್‌ ಮ್ಯೂಸಿಕ್‌ ಕೂಡ ಪ್ಲೇ ಮಾಡಬಹುದು. ಇದಕ್ಕೆ ಪರ್ಯಾಯವಾಗಿ ಉತ್ತಮ ನಿದ್ರೆಗಾಗಿ ಆಡಿಯೊಬುಕ್‌ ಅಥವಾ ನಿಮಗೆ ಇಷ್ಟವಾದ, ನಿದ್ರೆ ಬರಿಸುವ ಪಾಡ್‌ಕಾಸ್ಟ್‌ ಕೂಡ ಕೇಳಬಹುದು.

ಎಲ್ಲಕ್ಕಿಂತ ಹೆಚ್ಚಾಗಿ ಮಲಗುವಾಗ ನಿಮ್ಮ ಫೋನ್‌ಅನ್ನು ಹತ್ತಿರ ಇಟ್ಟುಕೊಳ್ಳಬೇಡಿ. ಮಲಗುವ ಒಂದು ಗಂಟೆ ಮುಂಚೆ ನಿಮ್ಮಫೋನ್‌ ಅನ್ನು ಸೈಲೆಂಟ್‌ ಮೋಡ್‌ಗೆ ಹಾಕಿ ಅದನ್ನು ಇನ್ನೊಂದು ರೂಮ್‌ನಲ್ಲಿಡಿ ಅಥವಾ ಡ್ರಾಯರ್‌ನಲ್ಲಿ ಇಟ್ಟು ಬಿಡಿ. ಮಲಗುವ ಮುಂಚೆ ನಿಮ್ಮ ಫೋನ್‌ ಆನ್‌ನಲ್ಲಿಡುವುದರಿಂದ ಅನಗತ್ಯ ಒತ್ತಡ ಹೆಚ್ಚಾಗಲು ಕಾರಣವಾಗುತ್ತದಲ್ಲದೇ ನಿದ್ರೆಯೂ ವಿಳಂಬವಾಗುತ್ತದೆ. ನಿದ್ದೆಗೆ ಹೋಗುವ ಮುಂಚೆ ಸಂಪೂರ್ಣವಾಗಿ ಒಂದು ಗಂಟೆ ಕಾಲ ನೀವು ಸ್ಮಾರ್ಟ್‌ಫೋನ್‌ನಿಂದ ದೂರ ಇದ್ದಿದ್ದಾದರೆ ಅತ್ಯುತ್ತಮವಾದ ನಿದ್ರೆಯನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅದು ನಿದ್ರಾ ಭಂಗಕ್ಕೆ ಕಾರಣವಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಳ್ಳಂಬೆಳ್ಳಗ್ಗೆ ಮೂರು ಉಗ್ರರನ್ನು ಭಾರತೀಯ ವೀರ ಯೋಧರಿಂದ ಹತ್ಯೆ…!

    ಜಮ್ಮು-ಕಾಶ್ಮಿರದ ಪುಲ್ವಾಮಾದಲ್ಲಿ ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಉಗ್ರರನ್ನು ಹತ್ಯೆ ಮಾಡಿದ ಬಳಿಕ ಯೋಧರು ಅವರ ಬಳಿ ಇದ್ದ ಮೂರು ಎಕೆ ಸರಣಿ ರೈಫಲ್‍ಗಳನ್ನು ವಶಪಡೆಸಿಕೊಂಡಿದ್ದಾರೆ. ಸದ್ಯ ಭದ್ರತಾ ಪಡೆಗಳು ಉಳಿದ ಉಗ್ರರನ್ನು ಹುಡುಕಿ ಎನ್‍ಕೌಂಟರ್ ಮಾಡಲು ಮುಂದಾಗಿದ್ದಾರೆ. ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು(ಎಸ್‍ಪಿಒ) ಪುಲ್ವಾಮ ಪೊಲೀಸ್ ಲೈನ್‍ಗಳಿಂದ ತಮ್ಮ ಸೇವಾ ರೈಫಲ್‍ಗಳೊಂದಿಗೆ ಕಾಣೆಯಾಗಿದ್ದಾರೆ. ಇಬ್ಬರು ಅಧಿಕಾರಿಗಳ ಹುಡುಕಾಡುವ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳು ಕಾಣೆಯಾದ ಪ್ರಕರಣ ಪುಲ್ವಾಮದಲ್ಲಿನ ಎನ್‍ಕೌಂಟರ್ ಗೆ ಸಂಬಂಧಿಸಿದ್ದೀಯಾ ಎಂಬುದು…

  • ಉದ್ಯೋಗ

    ಕೆಲಸದ ಜೊತೆಗೆ ಇವುಗಳನ್ನು ಮಾಡಿದ್ರೆ, ನಿಮ್ಗೆ ಕೆಲಸದಲ್ಲಿ ಪ್ರಮೋಷನ್ ಸಿಗುತ್ತೆ!

    ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ

  • ಉಪಯುಕ್ತ ಮಾಹಿತಿ

    ಅಕ್ಕಿಯಲ್ಲಿ ಹುಳ ಬಾರದಂತೆ ಮಾಡುವ ವಿಧಾನ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

    ಹಳ್ಳಿ ಪ್ರದೇಶಗಳಲ್ಲಿ ಜನರು ತಮ್ಮ ಹೊಲದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಅದನ್ನು ಒಂದು ವರ್ಷದವರೆಗೂ ಉಪಯೋಗಿಸುತ್ತಾರೆ. ಹೀಗೆ ವರ್ಷಗಟ್ಟಲೆ ಅಕ್ಕಿಯನ್ನು ಶೇಖರಿಸಿ ಇಡುವುದರಿಂದ ಅದರಲ್ಲಿ ಹುಳಗಳು ಹುಟ್ಟುತ್ತವೆ.

  • ಸುದ್ದಿ

    ದೇವಸ್ಥಾನದ ಬಳಿ ಭಿಕ್ಷೆ ಬೇಡಿದರೆ ಇಷ್ಟೊಂದು ಹಣ ಇರುತ್ತಾ.?ಬಿಕ್ಷುಕಿ ಬಳಿ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್…!

    ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…

  • ಸುದ್ದಿ

    ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನಗರ ಸಭೆ ಸಂಸ್ಥೆಗಳಿಗೆ 40 ಕೋಟಿ ರೂ. ಬಿಡುಗಡೆ…!

    ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು. ಬಿಡುಗಡೆ ಮಾಡಿರುವ ಅನುದಾನದಡಿ ಕೊಳವೆ ಬಾವಿಗಳನ್ನು ಆಳಗೊಳಿಸುವ, ಸ್ವಚ್ಛಗೊಳಿಸುವುದು ಹಾಗೂ ಹೈಡ್ರೋಫ್ರಾಕ್ಚರಿಂಗ್ ಕೈಗೊಳ್ಳುವುದು. ನೀರು…