ಸುದ್ದಿ

ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು ಇ-ಪ್ಯಾನ್ ಕಾರ್ಡ್,.!ಹೇಗೆ ಗೊತ್ತಾ,.?

33

ಈ ಸಾಮಾಜಿಕ  ಯುಗದಲ್ಲಿ PAN CARD ಬಳಸದೆ ಇರುವ ವ್ಯಕ್ತಿಯನ್ನು ಹುಡುಕಲು ಕಷ್ಟ ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಮತ್ತು  ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number (PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿದೆ. ಆದಾಯ ತೆರಿಗೆ ಇಲಾಖೆಯು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಹೀಗಾಗಿ, ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಉಚಿತವಾಗಿ ಇ-ಪ್ಯಾನ್ ಕಾರ್ಡ್ ನೀಡುವ ಯೋಜನೆ ಮುಂದಿನ ಕೆಲವು ವಾರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಮೂಲಗಳು ಹೇಳಿವೆ.

ಈ ಸೌಲಭ್ಯದಲ್ಲಿ ಅರ್ಜಿ ಸಲ್ಲಿಸಲಿರುವ ವ್ಯಕ್ತಿಯ ವಿವರಗಳನ್ನು ಆಧಾರ್ ಮೂಲಕ ತೆಗೆದುಕೊಳ್ಳಲಾಗುವುದು. ಇದರಿಂದ ಪ್ಯಾನ್ ಕಾರ್ಡ್ ದಾರರ ವಿವರಗಳನ್ನು ಪರಿಶೀಲಿಸಲು ಸುಲಭವಾಗುತ್ತದೆ. ಇ-ಪ್ಯಾನ್ ಕಾರ್ಡ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು

ಇ ಪ್ಯಾನ್ ಕಾರ್ಡ್ ವಿಶೇಷ ಹೇಗೆ? *ಇ ಪ್ಯಾನ್ ಅರ್ಜಿಯಲ್ಲಿ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ. *ಆಧಾರ್ ಸಂಖ್ಯೆಗೆ ಜೋಡಿಸಿರುವ ಅಧಿಕೃತ ಫೋನ್ ನಂಬರ್ ಪರಿಶೀಲಿಸಲಾಗುವುದು * ನಿಮ್ಮ ಅಧಿಕೃತ ಫೋನ್ ನಂಬರ್ ಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬರಲಿದೆ. *ಯಾವುದೇ ಬೇರೆ ದಾಖಲೆ ಒದಗಿಸುವ ಅಗತ್ಯವಿಲ್ಲ. *ಹೊಸPAN ಸೃಷ್ಟಿಯಾಗುತ್ತಿದ್ದಂತೆ, ಡಿಜಿಟಲ್ ಸಹಿಯುಳ್ಳ ಇ-ಪ್ಯಾನ್ ವಿತರಿಸಲಾಗುವುದು * ಇದು ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಇದರಲ್ಲಿ ಭೌಗೋಳಿಕ ಮಾಹಿತಿ, ಅರ್ಜಿದಾರರನ ಭಾವಚಿತ್ರ ಇರಲಿದೆ. ಎಲ್ಲಾ ಮಾಹಿತಿಯೂencrypt ಆಗಿರುವುದರಿಂದ ಮಾಹಿತಿ ಸುರಕ್ಷವಾಗಿರಲಿದೆ.

ಇ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?UTI-ITSL ಮೂಲಕ ಹೊಸ ಪ್ಯಾನ್ ಪಡೆಯಲು ಬಯಸುವವರು ಹಾಗೂ ಪ್ಯಾನ್ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್ ಲೈನ್ ನಲ್ಲಿ ಇ-ಪ್ಯಾನ್ ಕಾರ್ಡ್ *NSDL ಹಾಗೂUTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ * ಡೌನ್ ಲೋಡ್ ಇ ಪ್ಯಾನ್ ಕಾರ್ಡ್ ಕ್ಲಿಕ್ ಮಾಡಿ * ಚಾಲ್ತಿ ಪ್ಯಾನ್ ಬದಲಾವಣೆ ಬಯಸುವವರುPAN, ಆಧಾರ್, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ. *ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಿ. *15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ. *ಪರಿಶೀಲನೆ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ರಾಜ್ಯದಲ್ಲಿ ಯಾವ ಯಾವ ಪಕ್ಷ ಮುನ್ನಡೆ…?

    ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…

  • ಸುದ್ದಿ

    ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಕಿಲಾಡಿ ಜೋಡಿಗಳು…

    ಬೆಂಗಳೂರು ಮುದ್ದಿನಪಾಳ್ಯ ದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಇಂದು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಾ ಅವರ ನಿಶ್ಚಿತಾರ್ಥ ನೆರವೇರಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಕ್ಯೂಟ್ ಕಪಲ್ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಭಾನುವಾರ ಒಬ್ಬರನೊಬ್ಬರು ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಾ ಸ್ನೇಹಿತರಾಗಿದ್ದರು….

  • ವಿಸ್ಮಯ ಜಗತ್ತು

    256 ವರ್ಷ ಬದುಕಿದ ವ್ಯಕ್ತಿ ಎಷ್ಟು ಪತ್ನಿಯರ ಅಂತ್ಯ ಸಂಸ್ಕಾರ ಮಾಡಿದ್ದ ಗೊತ್ತಾ? ತಿಳಿಯಲು ಈ ಲೇಖನ ಓದಿ ..

    ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ 256 ವರ್ಷ ಬದುಕಿದ್ದ.

  • ಸುದ್ದಿ

    ಸಿಎಂ ಯಡಿಯೂರಪ್ಪ ಮುಂದಿವೆ 2 ಸವಾಲುಗಳು…!

    ಬೆಂಗಳೂರು:  ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ…

  • ಸುದ್ದಿ

    ಬಯಲಾಯ್ತು ಜೆಡಿಎಸ್ ಶಾಸಕ ಮಾತನಾಡಿರುವ ಆಡಿಯೋ..!ಆ ಆಡಿಯೋದಲ್ಲಿ ಮಾತನಾಡಿದ್ದು ಏನು ಗೊತ್ತಾ?

    ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ನಾಗಮಂಗಲ ತಾಲ್ಲೂಕಿನ ಚೀಣ್ಯ ಗ್ರಾಮದ ರಮೇಶ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ರಮೇಶ್, ಜೆಡಿಎಸ್ ಪರ ಪ್ರಚಾರಕ್ಕೆ ಜನರನ್ನು ಕರೆ ತರುವುದಾಗಿ ಹೇಳಿದ್ದಾರೆ. ಈ ಆಡಿಯೋ ನೋಡಿ… ಬೆಂಗಳೂರಿನಿಂದ ಪ್ರಚಾರಕ್ಕೆ ಜನರನ್ನು…

  • ಸ್ಪೂರ್ತಿ

    19 ವರ್ಷದ ಈ ಯುವತಿ ತನ್ನ ಓದಿಗಾಗಿ ಮಾಡಿದ್ದು ಏನು ಗೊತ್ತಾ..!ಮುಂದೆ ಓದಿ ಶಾಕ್…

    ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ.