ಸುದ್ದಿ

29 ವರ್ಷದ ಯುವಕನ ದೇಹದಲ್ಲಿತ್ತು ಗರ್ಭಕೋಶ …ನಂತರ ಏನಾಯ್ತು?

183

ಮುಂಬಯಿಯ ಜೆ.ಜೆ. ಹಾಸ್ಪಿಟಲ್‌ಗೆ ಕಳೆದ ತಿಂಗಳು 29 ವರ್ಷದ ಯುವಕನೊಬ್ಬ ಬಂದಿದ್ದ. ಅವನ ಸಮಸ್ಯೆ ಬಂಜೆತನ. ಪರೀಕ್ಷೆ ವೇಳೆ ಆತನ ವೃಷಣ ಹೊಟ್ಟೆಯೊಳಗಿರುವುದು ಕಂಡುಬಂತು! ಯಾಕೆ ಹೀಗಿದೆ ಎಂದು ಎಂಆರ್‌ಐ ನಡೆಸಿದಾಗ ಕಂಡದ್ದೇ ಬೇರೆ!

ಯುವಕನ ದೇಹದಲ್ಲಿ ಸ್ತ್ರೀಯರಲ್ಲಿ ಇರುವ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಗಳೆಲ್ಲವೂ ಇದ್ದವು! ಅಂದರೆ, ಗರ್ಭಕೋಶ, ಫ್ಯಾಲೋಪಿಯನ್‌ ನಳಿಗೆಳು, ಗರ್ಭಾಶಯ ಮಾತ್ರವಲ್ಲ ಅರೆಬರೆಯಾದ ಮರ್ಮಾಂಗವೂ ಇತ್ತು! ಹಾಗಂತ ಇವ್ಯಾವುವೂ ಕೆಲಸ ಮಾಡುತ್ತಿರಲಿಲ್ಲ. ಮೂತ್ರ ಸಂಬಂಧಿ ಸಮಸ್ಯೆಗಳ ವಿಭಾಗದ ಸರ್ಜನ್‌ ಡಾ. ವೆಂಕಟ್‌ ಗೀತೆ ಅವರಲ್ಲಿಗೆ ಬಂದಿರುವ ಪ್ರಕರಣ ಇದಾಗಿದ್ದು,

 ಶಸ್ತ್ರಕ್ರಿಯೆ ಮೂಲಕ ಈ ಅನಗತ್ಯ ಭಾಗಗಳನ್ನೆಲ್ಲ ಕಿತ್ತು ಹಾಕಲಾಗಿದೆ. ಇಷ್ಟೆಲ್ಲ ಸರ್ಜರಿ ಬಳಿಕವೂ ಯುವಕನಿಗೆ ಮಕ್ಕಳಾಗುವುದು ಸಾಧ್ಯವಿಲ್ಲ ಎನುತ್ತಾರೆ ವೈದ್ಯರು. ಯಾಕೆಂದರೆ, ಅವನಿಗೆ ‘ಅಝೂಸ್ಪೆರ್ಮಿಯ’ ಸಮಸ್ಯೆ ಇದೆ. ಅಝೂಸ್ಪೆರ್ಮಿಯಾ ಎಂದರೆ ವೀರ್ಯದಲ್ಲಿ ವೀರ್ಯಾಣುವೇ ಇಲ್ಲದಿರುವುದು.

ಅತ್ಯಂತ ಅಪರೂಪದ ಈ ದೈಹಿಕ ವೈಪರೀತ್ಯಕ್ಕೆ ಪರ್ಸಿಸ್ಟೆಂಟ್‌ ಮುಲ್ಲೇರಿಯನ್‌ ಡಕ್ಟ್ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ ಎಂದು ಡಾ. ವೆಂಕಟ್‌ ಗೀತೆ ಹೇಳಿದ್ದಾರೆ. ಜಗತ್ತಿನಲ್ಲಿ ಕೇವಲ 200 ಪ್ರಕರಣಗಳಷ್ಟೇ ಇದುವರೆಗೆ ದಾಖಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ