ಸುದ್ದಿ

ಆನ್​ಲೈನ್​ನಲ್ಲಿ ಬುಕ್ ಮಾಡಿದ್ದು ಸ್ಯಾಮ್​ಸಂಗ್ ಫೋನ್​ : ಡೆಲಿವರಿ ಬಾಯ್​ ಬಿಜೆಪಿ ಸಂಸದನ ಕೈಗೆ ತಂದುಕೊಟ್ಟಿದ್ದೇನು ಗೊತ್ತಾ

40

 ಬಿಜೆಪಿ ಸಂಸದರೊಬ್ಬರು ಆನ್​ಲೈನ್ ದೋಖಾಕ್ಕೆ ಒಳಗಾದವರ ಪಟ್ಟಿಗೆ ಸೇರಿದ್ದಾರೆ. ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​ಬೇಕು ಎಂಬ ಆಸೆಯಿಂದ ಇದೇ ಮೊದಲ ಬಾರಿಗೆ ಅವರು ಆನ್​ಲೈನ್ ಮೂಲಕ ಅದನ್ನುಖರೀದಿಸಿದ್ದರು. ಡೆಲಿವರಿ ಬಾಯ್​ ಬಂದು ಆ ಪಾರ್ಸೆಲನ್ನು ತಂದುಕೈಗಿಟ್ಟು ಹೋದರು.

ಹೊಸ ಸ್ಮಾರ್ಟ್​​ಫೋನ್ ಕೈ ಸೇರಿದ ಖುಷಿಯಲ್ಲಿದ್ದರು ಸಂಸದರು. ಹಾಗಾಗಿ ಡೆಲಿವರಿ ಬಾಯ್ ಎದುರೇ ಆ ಪಾರ್ಸೆಲ್ಬಿಚ್ಚಿ ನೋಡುವ ಗೋಚಿಗೆ ಹೋಗಿರಲಿಲ್ಲ.ಸೋಮವಾರ ಬೆಳಗ್ಗೆ ಎಂದಿನಂತೆ ದಿನಚರಿಆರಂಭಿಸಿದ ಸಂಸದರು, ಆ ಪಾರ್ಸೆಲ್ಬಿಚ್ಚಿ ನೋಡಿದರು. ಸ್ಯಾಮ್​ಸಂಗ್ ಫೋನ್ಬಾಕ್ಸ್ ಇರಬೇಕಾದಲ್ಲಿ, ರೆಡ್​ಮಿ 5ಎಫೋನಿನ ಬಾಕ್ಸ್ ಇತ್ತು! ಇದೇಕೇಹೀಗಾಯಿತು, ಬುಕ್ ಮಾಡಿದ್ದೇ ಒಂದುಬಂದಿರುವುದೇ ಇನ್ನೊಂದು ಎಂದು ಅಚ್ಚರಿಯಿಂದ ಸಂಸದರುನಿಧಾನವಾಗಿ ಆ ಬಾಕ್ಸ್ ಓಪನ್ಮಾಡಿದರು!
ಅವರಿಗೆಆಘಾತ ಕಾದಿತ್ತು. ಸ್ಯಾಮ್​ಸಂಗ್ ಫೋನ್​ಬಿಡಿ, ರೆಡ್​ ಮಿ5ಎಫೋನ್​ ಕೂಡ ಇರಲಿಲ್ಲ… ಸ್ಮಾರ್ಟ್​ಫೋನ್ ಬದಲು ಎರಡುನುಣುಪಾದ ಮಾರ್ಬಲ್ ತುಂಡುಗಳು ಅವರನ್ನುಅಣಕಿಸುತ್ತಿತ್ತು!

ಈ ರೀತಿ ವಂಚನೆಗೆ ಒಳಗಾದವರು ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಸಂಸದ ಖಗೇನ್ ಮುರ್ಮು.ಅವರಿಗೆ ಆನ್​ಲೈನ್ ಶಾಪಿಂಗ್ಐಡಿಯಾ ಇಲ್ಲದ ಕಾರಣ, ಅವರಪುತ್ರನೇ ಸ್ಯಾಮ್​ಸಂಗ್ ಫೋನ್ಖರೀದಿಗೆ ಆರ್ಡರ್​ ಮಾಡಿದ್ದರು. ಹಣಪಾವತಿಯ ಆಯ್ಕೆಯನ್ನು ಕ್ಯಾಷ್ ಆನ್ ಡೆಲಿವರಿನೀಡಿದ್ದರು.

ಡೆಲಿವರಿ ಬಾಯ್ ಪಾರ್ಸೆಲ್​ ತಂದು ಸಂಸದರ ಪತ್ನಿಯ ಕೈಗೆ ಕೊಟ್ಟಿದ್ದಾನೆ. ಅವರಿಂದ ಫೋನಿನ ಬೆಲೆಯಾದ 11,999 ರೂಪಾಯಿಯನ್ನು ನಗದಾಗಿ ಪಡೆದುಕೊಂಡು ವಾಪಸಾಗಿದ್ದಾನೆ. ಸೋಮವಾರ ಮನೆ ತಲುಪಿದ ಸಂಸದ ಮುರ್ಮು ಫೋನ್ ಬಾಕ್ಸ್ ಕೈಗೆತ್ತಿಕೊಂಡು ತೆರೆದು ನೋಡಿದಾಗ ಅವರಿಗೆ ಈ ಶಾಕ್ ಕಾದಿತ್ತು.

ಮಾಲ್ಡಾದ ಪೊಲೀಸ್ ಠಾಣೆಯಲ್ಲಿಈ ಬಗ್ಗೆ ದೂರುದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದೇವೇಳೆ, ಈ ಅಂತರ್ಜಾಲ ತಾಣದವಂಚನೆ ವಿಚಾರವನ್ನು ಗ್ರಾಹಕ ವ್ಯವಹಾರಗಳ ಸಚಿವರಗಮನಕ್ಕೆ ತರುವುದಾಗಿ ಸಂಸದ ಮುರ್ಮು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೆ ಗ್ರಾಮದಲ್ಲಿ ಸರ್ಪಂಚ್ ಹುದ್ದೆ ಸಿಗಲಿದೆ..!ತಿಳಿಯಲು ಈ ಲೇಖನ ಓದಿ..

    ಗರಾಜನ್ ಗ್ರಾಮದಲ್ಲಿ ಸರ್ಪಂಚ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದ್ರೆ, ಅಭ್ಯರ್ಥಿಯಾಗಿದ್ದ ಶಹನಾಜ್ ಖಾನ್, ಎಂಬಿಬಿಎಸ್ ನಾಲ್ಕನೇ ವರ್ಷದ ಪರೀಕ್ಷೆ ಬರೆಯುತ್ತಿದ್ಲು. ಮಾರ್ಚ್ 5ರಂದೇ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದೆ. 24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶಹನಾಜ್ ಖಾನ್ ಳನ್ನು ಗ್ರಾಮಸ್ಥರು ತಮ್ಮ ಸರ್ಪಂಚ್ ಆಗಿ ಆಯ್ಕೆ ಮಾಡಿದ್ದಾರೆ. ಶಹನಾಜ್ ಮೊರಾದಾಬಾದ್ ನ ತೀರ್ಥಂಕರ ಮಹಾವೀರ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ಗ್ರಾಮದ ಅತ್ಯಂತ ಕಿರಿಯ ಸರ್ಪಂಚ್ ಎನಿಸಿಕೊಂಡಿದ್ದಾಳೆ ಶಹನಾಜ್. ಸದ್ಯದಲ್ಲೇ ಗುರ್ಗಾಂವ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಶುರು ಮಾಡಲಿದ್ದಾಳೆ….

  • ಆರೋಗ್ಯ

    ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ. ಈ ಅರೋಗ್ಯ ಮಾಹಿತಿ ನೋಡಿ.

    ಜಗತ್ತಿನಲ್ಲಿ ಬಿಸಿ ನೀರು ಕುಡಿಯುವರ ಸಂಖ್ಯೆ ಬಹಳ ಕಮ್ಮಿ ಹೇಳಿದರೆ ತಪ್ಪಾಗಲ್ಲ, ವೈದ್ಯರು ಸಲಹೆಯನ್ನ ನೀಡಿದರು ಕೂಡ ಜನರು ಬಿಸಿ ನೀರನ್ನ ಕುಡಿಯಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನು ಒಬ್ಬ ಮನುಷ್ಯ ಆಹಾರವಿಲ್ಲದೆ ಬಹಳ ಕಾಲ ಬದುಕಬಹುದು ಆದರೆ ನೀರಿಲ್ಲದೆ ಬಹಳ ಕಾಲ ಬದುಕಲು ಸಾಧ್ಯವಿಲ್ಲ, ನಮ್ಮ ದೇಹದಲ್ಲಿ ಎಷ್ಟು ನೀರು ಇರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಬಲವಾಗಿರುತ್ತದೆ. ಇನ್ನು ಬಿಸಿ ನೀರನ್ನ ದಿನಾಲೂ ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳಿದರೆ ಒಮ್ಮೆ…

  • inspirational

    ಗರ್ಭಿಣಿ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ ಮಾಡಿದ ಪೊಲೀಸರು.

     ಪೊಲೀಸ್ ಮಹಿಳಾ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗರ್ಭಿಣಿಯರಿಗೆ ಪೊಲೀಸ್ ಠಾಣೆಯಲ್ಲಿ ಸೀಮಂತ ಮಾಡಿದ್ದಾರೆ. ಪೊಲೀಸರು ಗರ್ಭಿಣಿ ಸಿಬ್ಬಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ್ದು, ಠಾಣೆಯ ಎಲ್ಲಾ ಸಿಬ್ಬಂದಿ ಸೇರಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ್ದಾರೆ. ಠಾಣೆಯ ಮಹಿಳಾ ಪೊಲೀಸ್ ಪೇದೆಯಾಗಿದ್ದ ಲಕ್ಷ್ಮೀ ಹಾಗೂ ಮತ್ತೊಬ್ಬ ಮಹಿಳಾ ಪೇದೆ ವೀರಮ್ಮ ಅವರಿಗೆ ಸೀಮಂತ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಕೆಲಸದ ಒತ್ತಡ, ಮಾನಸಿಕ…

  • ಸಿನಿಮಾ

    ದನದ ಮಾಂಸ ತಿನ್ನುತ್ತಿದ್ದ, ಯಾರಿಗೆ ಟೀ ತಂದುಕೊಡುತ್ತಿದ್ದ ಅಂತ ಗೊತ್ತಿದೆ ಅಂತ ದರ್ಶನ್ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ..!

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ನಿಂತಿದ್ದಾರೆ. ಅದರಲ್ಲೂ ದರ್ಶನ್ ಹಾಗೂ ಯಶ್ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದು, ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗೆ ಇದು ಅಡ್ಡಗಾಲಾಗಬಹುದೆಂಬ ಆತಂಕ…

  • ಸಿನಿಮಾ

    ಯಶ್ ಚಿತ್ರ KGFಗೆ ಬ್ಯಾನರ್ ಹಾಕಿ ಬೆಂಬಲ ಕೊಟ್ಟ ಡಿ ಬಾಸ್ ಫ್ಯಾನ್ಸ್..ಕಡೆಗೂ ಒಂದಾದ್ರು ಯಶ್ ಮತ್ತು ದರ್ಶನ್ ಫ್ಯಾನ್ಸ್…

    ವಿಶ್ವಾದ್ಯಂತ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಣ್ತಮ್ಮಾಸ್ ಫ್ಯಾನ್ಸ್ ಒಂದಾಗಿದ್ದಾರೆ. ಚಂದನವನದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ. ನಗರದಾದ್ಯಂತ ಹಲವೆಡೆ ದರ್ಶನ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಬ್ಯಾನರ್ ಹಾಕಿ ವಿಶೇಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಜೆಎಫ್ ಚಿತ್ರ ಸ್ಟಾರ್ ಅಭಿಮಾನಿಗಳ ಬಣವನ್ನು ಒಗ್ಗೂಡಿಸಿದ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಲಾಗುತ್ತಿದೆ. ಕನ್ನಡದ ಚಿತ್ರ ವಿಶ್ವಾದ್ಯಂತ…