ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ ಬ್ಯಾಂಕಿಂಗ್ ವ್ಯವಹಾರಗಳು ಸಹ ಎಲ್ಲರಿಗೂ ಸುಲಭವಾಗುತ್ತಿದೆ. ಹಾಗೆಯೇ ಇಂಟರ್ನೆಟ್ ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ.
ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ ಮಾಡುವುದು, ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು ಠೇವಣಿ ಮಾಡುವುದು, ಹಣ ಹಿಂತೆಗೆದುಕೊಳ್ಳಲು ಹೆಚ್ಚು ಸಹಾಯಕವಾಗಿದೆ. ಆದರೆ ATMನಲ್ಲಿ ಹಣಹಿಂತೆಗೆದುಕೊಳ್ಳುವ ವೇಳೆ ಕೆಲವು ಮುಂಜಾಗ್ರತಾ ಕ್ರಮ ವಹಿಸದಿದ್ದರೆ ನೀವು ಮೋಸದ ಬಲೆಯಲ್ಲಿ ಬೀಳಬಹುದು.
ಹಾಗಿದ್ದರೆ ನೀವು ATM ನಲ್ಲಿ ಹಣವನ್ನು ಹಿಂತೆಗೆದುಕೊಳ್ಳುವಾಗ ಹಾಗೂ ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳು ಕೆಳಗಿವೆ ನೋಡಿ
ಕೀಪ್ಯಾಡ್ ನಲ್ಲಿ ಸ್ಕಿಮ್ಮರ್ ಇದೆಯಾ ಎಂದು ಪರೀಕ್ಷಿಸಿ ಎಟಿಎಂನಲ್ಲಿ ಹಣವನ್ನು ಹಿಂತೆಗೆದುಕೊಳ್ಳಲು ಸೀಕ್ರೆಟ್ ಪಿನ್ ನಮೂದಿಸಬೇಕಾಗುತ್ತದೆ. ಪಿನ್ ನಮೂದಿಸುವುದಕ್ಕೂ ಮುನ್ನ ಕೀಪ್ಯಾಡ್ ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ಕಿಮ್ಮರ್ ಎಂಬ ಸಾಧನವನ್ನು ಬಳಸಿ ಜನರಿಗೆ ಮೋಸ ಎಸೆಗಲಾಗುತ್ತಿದೆ. ಕೀಪ್ಯಾಡ್ ರೀತಿಯಲ್ಲಿ ಇರುವ ಸ್ಕಿಮ್ಮರ್ ಸಾಧನವು ನೀವು ನಮೂದಿಸಿದ ಪಿನ್ ಸಂಖ್ಯೆ ಹಾಗೂ ವಿವರಗಳನ್ನು ದಾಖಲಿಸಿಕೊಳ್ಳುತ್ತದೆ. ಹಾಗೆಯೇ ಕಾರ್ಡ್ ಸ್ವೈಪ್ ಮಾಡುವ ಜಾಗದಲ್ಲೂ ಸ್ಕಿಮ್ಮರ್ ಅಳವಡಿಸಲಾಗುತ್ತದೆ. ಹೀಗಾಗಿ ಪ್ರತಿ ಬಾರಿ ATMಗೆ ತೆರಳಿದಾಗ ಒಮ್ಮೆ ಪರೀಕ್ಷಿಸಿ.
ಯಂತ್ರದ ಹತ್ತಿರ ನಿಂತು ಸೀಕ್ರೆಟ್ ಪಿನ್ ದಾಖಲಿಸಿ ನಿಮ್ಮ ಕಾರ್ಡ್ ವಿವರಗಳನ್ನು ತಿಳಿಯಲು ಕೆಲವರು ಉತ್ಸುಕರಾಗಿರುತ್ತಾರೆ. ಹೀಗಾಗಿ ಆದಷ್ಟು ATM ಮಷಿನ್ ಗೆ ಹತ್ತಿರವಾಗಿ ನಿಂತು ಹಿಂದಿನ ವ್ಯಕ್ತಿಗೆ ಕಾಣದಂತೆ ನಿಮ್ಮ ವಿವರಗಳನ್ನ ದಾಖಲಿಸಿ. ನಿಮ್ಮ ಪಿನ್ ನಂಬರ್ ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ವಹಿವಾಟಿನ ನಂತರ ರಶೀದಿ ಹರಿದುಹಾಕಿ
ನೆಟ್ ಬ್ಯಾಂಕಿಂಗ್-ಮೊಬೈಲ್ ಬ್ಯಾಂಕಿಂಗ್ ಪಾಸ್‌ವರ್ಡ್ ಬೇರೆಯಿರಲಿ ನೀವು ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಎರಡನ್ನೂ ಬಳಸುತ್ತಿದ್ದರೆ, ಸುರಕ್ಷತಾ ದೃಷ್ಟಿಯಿಂದ ಎರಡು ವಿಭಿನ್ನ ಪಾಸ್‌ವರ್ಡ್ ಇರಿಸಿಕೊಂಡರೆ ಉತ್ತಮ.ನೀವು ಮೊಬೈಲ್ ಬ್ಯಾಂಕಿಂಗ್ ಮಾಡುವಾಗ ಎಂ-ಪಿನ್ ಇರುತ್ತದೆ. ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಗ್ರಾಹಕರು ಮೋಸ ಹೋಗಬಾರದೆಂದು ನೋದಾಂಯಿಸಲ್ಪಟ್ಟ ಪೋನ್ ನಂಬರ್ ಹೊಂದಿದ ಮೊಬೈಲ್‌ನಷ್ಟೇ ಬ್ಯಾಂಕಿಂಗ್ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿಕೊಳ್ಳಲು ಬ್ಯಾಂಕ್‌ಗಳು ಅನುಮತಿ ನೀಡುತ್ತವೆ.
ಬ್ಯಾಂಕಿನಿಂದ Notification ಬರುವುದನ್ನ ಖಚಿತಪಡಿಸಿಕೊಳ್ಳಿ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ನಿಮ್ಮ ಬ್ಯಾಂಕಿಂಗ್ ಅಧಿಸೂಚನೆಯನ್ನು ಪಡೆದುಕೊಳ್ಳುವುದನ್ನ ಪರೀಕ್ಷಿಸಿಕೊಳ್ಳಿ. ಅಂದರೆ ನೀವು ತಪ್ಪಾಗಿಲಾಗಿನ್ ಆಗಿದ್ದಲ್ಲಿ ಅಧಿಸೂಚನೆ ಬರುತ್ತಿದೆಯಾ ಅಥವಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳಿ.
ಮೊಬೈಲ್ ಆ್ಯಪ್ ಅಪ್‌ಡೇಟ್ ಮಾಡುತ್ತಿರಬೇಕು ಆದಷ್ಟು ಮೊಬೈಲ್ ಆ್ಯಪ್ ಗಳನ್ನು ಅಪ್‌ಡೇಟ್ ಮಾಡುತ್ತಿರಿ ಮತ್ತು ವೈ-ಫೈ ಸಂಪರ್ಕಸಿಕ್ಕಾಗ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುವಂತೆ ನೀವು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಿಟ್ಜರ್ಲ್ಯಾಂಡ್ನ ಈ ಪ್ರಕೃತಿ ಮನೋಹರ ಪಟ್ಟಣಕ್ಕೆ ವಲಸೆ ಬರುವವರಿಗೆ ಅಲ್ಲಿಯ ಸರಕಾರವೇ 60,000 ಡಾ.(ಸುಮಾರು 38.7 ಲ.ರೂ.) ನೀಡುತ್ತದೆ. ಸರಕಾರದ ಈ ಕೊಡುಗೆಗೆ ಕಾರಣವಿದೆ. ಈ ಪಟ್ಟಣದಲ್ಲಿ ಜನಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.
“ವಾಟ್ಸಪ್” (ಸಾಮಾಜಿಕ ಜಾಲತಾಣ)ವನ್ನು ಉಪಯೋಗಿಸದವರು ಯಾರಿದ್ದಾರೆ. ಈಗಂತೂ ಎಲ್ಲಾ ವಯೋಮಾನದವರು
ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್ಆರ್ಸಿ) ಅಂತಿಮ ಪಟ್ಟಿಯ ಪ್ರಕಾರ 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಹಾಗೆಂದು ತಕ್ಷಣವೇ ಇವರನ್ನು ಬಂಧಿಸದಿರಲು ಹಾಗೂ ಅಕ್ರಮ ನಿವಾಸಿಗಳು ಎಂದು ಘೋಷಿಸದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳನ್ನು ಒದಗಿಸಿ ತಮ್ಮ ಪೌರತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಇವರೆಲ್ಲರಿಗೂ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ….
ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ…
ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ ಎನ್ನುತ್ತಾರೆ,ಆದರೆ ಕೆಲವರು ಹಲ್ಲುಜ್ಜುವಾಗ ಸ್ನೇಹಿತರ ಜೊತೆ ಮಾತನಾಡಿಕೊಂಡೋ, ಟಿವಿ ನೋಡಿಕೊಂಡೋ, ಮತ್ತೆನ್ನಿನೋ ಮಾಡಿಕೊಂಡೋ ಗಂಟೆಗಟ್ಟಲೆ ಹಲ್ಲು ಉಜ್ಜುತ್ತಾರೆ….
ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ಇದೇ ತಿಂಗಳಿಂದ ಹಣ ನೀಡಲು ಶುರು ಮಾಡಲಿದೆ. ಈ ಯೋಜನೆಯಡಿ 2 ಹೆಕ್ಟೆರ್ ನಷ್ಟು ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ. ವರ್ಷಕ್ಕೆ 6 ಸಾವಿರ ರೂಪಾಯಿ ಖಾತೆಗೆ ಬರಲಿದೆ. ಮೂರು ಕಂತಿನಲ್ಲಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 2000 ರೂಪಾಯಿ ಸಿಗಲಿದೆ. ಆದ್ರೆ ಇದಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ….