ಸುದ್ದಿ

ಶುರುವಾಗಿದೆ ನಿಖಿಲ್ ಕುಮಾರ್‌ಸ್ವಾಮಿಗಾಗಿ ಹುಡುಗಿಯ ಹುಡುಕಾಟ,ಹೇಗಿರಬೇಕಂತೆ ಗೊತ್ತಾ,.?

33

ನಿಖಿಲ್ ಕುಮಾರ ಸ್ವಾಮಿ  ಮತ್ತು ಕೃಷ್ಣ ನಿರ್ದೇಶನದ ಸಿನಿಮಾ ಜನವರಿಯಲ್ಲಿ ಸೆಟ್ಟೇರಲಿದೆ.ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬಿಜಿಯಾಗಿದೆ ಇನ್ನು ಒಂದು ವಾರದೊಳಗೆ ಸ್ಕ್ರಿಫ್ಟ್ ಕೆಲಸ ಮುಗಿಯುತ್ತದೆ, ಆಮೇಲೆ ಅಧಿಕೃತವಾಗಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತೇವೆ”ಎಂದು ಮಾಹಿತಿ ನೀಡಿದ ನಿರ್ದೇಶಕ ಕೃಷ್ಣ. “ಇದೊಂದು ನೈಜಕಥೆ ಆಧಾರಿತ ಸಿನಿಮಾ. ಈಗ ಚಿತ್ರಕಥೆ ಕೆಲಸದಲ್ಲಿ ನಿರತನಾಗಿದ್ದೇನೆ, ಹೀರೋಯಿನ್ ಹುಡುಕಾಟ ಶುರುವಾಗಿದೆ. ಸಾಂಪ್ರದಾಯಿಕ ಲುಕ್‌ ಹೊಂದಿರುವ ಅದ್ಭುತ ನಟಿಗಾಗಿ ಶೋಧ ಮಾಡುತ್ತಿದ್ದೇವೆ, 

ನಿರ್ದೇಶಕ ಕೃಷ್ಣ ಇದೂವರೆಗೂ ಮಾಡಿರದ ಸಿನಿಮಾ ಇದು. ನಿಖಿಲ್ ಗೆಟಪ್ ಕೂಡ ತುಂಬ ಬದಲಾಗಿರಲಿದೆಯಂತೆ. ನಿಖಿಲ್ ಕೂಡ ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಿರ್ದೇಶಕ ಮತ್ತು ನಿಖಿಲ್ ಬಿಟ್ಟರೆ ಈ ಸಿನಿಮಾದ ತಾಂತ್ರಿಕ ವರ್ಗ, ಕಲಾವಿದರ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹಣ ಹೂಡುತ್ತಿದೆ.

“ಜನರು ಬುದ್ಧಿವಂತರಿದ್ದಾರೆ, ತುಂಬ ಪ್ರಬುದ್ಧರಾಗಿದ್ದಾರೆ. ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ. ನನ್ನ ಕಳೆದೆರಡು ಚಿತ್ರಗಳಿಗಿಂತ ಈ ಬಾರಿ ಕೊಂಚ ವಿಭಿನ್ನವಾದ ಕಾನ್ಸೆಪ್ಟ್‌ ಮೇಲೆ ಸಿನಿಮಾ ಮಾಡುತ್ತಿದ್ದೇವೆ. ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಸ್ಕ್ರೀನ್‌ಪ್ಲೇ ಬರೆಯಲಾಗಿದೆ. ಈ ಹಿಂದೆ ನನ್ನ ಎರಡು ಸಿನಿಮಾಗಳು ಸಹ ಬೇರೆ ಬೇರೆ ರೀತಿಯಲ್ಲೇ ಇದ್ದವು. ಹೀಗಾಗಿ ನಾವಿಬ್ಬರೂ ಹೊಸ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸಿ ಅದೇ ತಯಾರಿಯಲ್ಲಿದ್ದೇವೆ.

ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ, ನನ್ನ ಎರಡನೇ ಸಿನಿಮಾ ಕೃಷ್ಣ ಜೊತೆ ಮಾಡಬೇಕಿತ್ತು. ಆದರೆ ಅವರು ‘ಹೆಬ್ಬುಲಿ’ಯಲ್ಲಿ ಬಿಜಿಯಿದ್ದರು. ಆಗ ನಿರ್ದೇಶಕ ಜೊತೆ ಹರ್ಷ ಸಿನಿಮಾ ಮಾಡಿದೆ. ಕಮರ್ಷಿಯಲ್ ಅಂಶ ಇಟ್ಟುಕೊಂಡು ವಿಭಿನ್ನವಾಗಿ ಸಿನಿಮಾ ಮಾಡುತ್ತೇವೆ, ಈಗಾಗಲೇ ಸಣ್ಣ ಆಗಿದ್ದೇನೆ, ಸಿನಿಮಾಕ್ಕಾಗೋಸ್ಕರ ಇನ್ನೂ ಸಣ್ಣ ಆಗಬೇಕಿದೆ” ಎಂದಿದ್ದಾರೆ ನಿಖಿಲ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನವ ವಧು ವರರ ಮೇಲೆ ಲಕ್ಷಾಂತರ ರೂ ನೋಟುಗಳ ಸುರಿಮಳೆ ಮಾಡಿದ್ರು!ಈ ಸುದ್ದಿ ನೋಡಿ…

    ಮದುವೆಯಾದ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ರೂ. ಹಣವನ್ನು ಸುರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಶಾಂತ್ ಕೋಟಾ ಹಾಗೂ ಮೇಘನಾ ಗೌಡ್ ಮಾರ್ಚ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಶಾಂತ್ ಕೋಟಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಹೈದರಾಬಾದ್‍ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಈ ಮದುವೆಯ ವಿಡಿಯೋ ವೈರಲ್ ಆಗಿದೆ. ವರ ಹಾಗೂ ವಧುವಿನ ಪೋಷಕರು ನವಜೋಡಿ ಮೇಲೆ ಹಣದ ಹೊಳೆಯನ್ನೇ ಹರಿಸಲು ಒಂದು ದೊಡ್ಡ ಬಾಸ್ಕೆಟ್‍ನಲ್ಲಿ ನೋಟುಗಳನ್ನು ತೆಗೆದುಕೊಂಡು…

  • ಆರೋಗ್ಯ

    ಪಾರ್ಶ್ವವಾಯು ದೇಹದ ಭಾಗಗಳನ್ನು ನಿತ್ರಾಣಗೊಳಿಸುವ ಭಯಾನಕ ಕಾಯಿಲೆ..!ಇದನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ತಿಳಿಯಲು ಇದನ್ನು ಓದಿ …

    ಮಾನವನ ಜೀವನಕ್ಕೆ ಸಂಚಕಾರ ತರುವ ಕಾಯಿಲೆ ಇದು. ದೇಹದ ಭಾಗಗಳನ್ನು ನಿತ್ರಾಣಗೊಳಿಸಿ, ನಿರ್ದಿಷ್ಟ ಭಾಗಕ್ಕೆ ಜೀವವೇ ಇಲ್ಲದಂತೆ ಮಾಡಿಬಿಡುವ ಕಾಯಿಲೆ ಪಾರ್ಶ್ವವಾಯು.
    ಮೆದುಳಿಗೆ ಆಗುವ ಆಘಾತವೇ ಪಾಶ್ವವಾಯು ಆಕ್ರಮಿಸಲು ಕಾರಣ. ರಕ್ತಪರಿಚಲನೆಯ ಕೊರತೆಯಿಂದ ಅಥವಾ ಮೆದುಳಿನಲ್ಲಿ ಆಗುವ ರಕ್ತಸ್ರಾವದಿಂದ ಪಾಶ್ವವಾತ ಕಾಣಿಸಿಕೊಳ್ಳುತ್ತದೆ.

  • ಆರೋಗ್ಯ

    ಈ ಟಿಪ್ಸ್ ಫಾಲೋ ಮಾಡಿ. ಕೇವಲ 5 ನಿಮಿಷದಲ್ಲಿ ನೆಗಡಿ ಕೆಮ್ಮು ಕಫ ಗಂಟಲು ಕಿರಿಕಿರಿ ಮಾಯ.

    ನೆಗಡಿ ಮತ್ತು ಕೆಮ್ಮು ಕಫ ಇದ್ದರೆ ಮನೆಯಲ್ಲಿ ಮನೆಮದ್ದನ್ನು ನೀವೇ ತಯಾರು ಮಾಡಿಕೊಳ್ಳಿ. ಬೇಕಾಗಿರುವ ಸಾಮಾಗ್ರಿಗಳು ಬೆಲ್ಲ ತುಳಸಿ ಮತ್ತು ಶುಂಠಿ ಅರಿಶಿನ ಪುಡಿ ಹಾಗೂ ಓಂಕಾಳು ಇಷ್ಟು ಸಾಮಗ್ರಿಗಳು ಬೇಕು ಇರಲಿ ತುಂಬಾ ಪ್ರೋಟೀನ್ಗಳು ಮತ್ತು ವಿಟಮಿನ್ ಗಳು ಇರುತ್ತದೆ ಮಾಡುವ ವಿಧಾನ ಮೊದಲು ಬೆಲ್ಲವನ್ನು ಪಾಕ ಮಾಡಿಕೊಳ್ಳಬೇಕು ನಂತರ ತುಳಸಿ ಮತ್ತು ಓಂ ಕಾಳು ತೆಗೆದುಕೊಂಡು ಜಜ್ಜಿ ಬೇಕು ನಂತರ ಶುಂಠಿಯನ್ನು ತೆಗೆದುಕೊಂಡು ತುರಿದು ರಸ ಮಾಡಿಕೊಳ್ಳಬೇಕು ಆಮೇಲೆ ಒಲೆಯ ಮೇಲೆ ಒಂದು ಪಾತ್ರೆಯನ್ನು…

  • ಸುದ್ದಿ

    ಬಿಗ್ಬಾಸ್ ಪ್ರಥಮ್, ಸಚಿವ ಯು.ಟಿ.ಖಾದರ್’ಗೆ ಕೊಟ್ಟ ಟಾಂಗ್ ಏನು ಗೊತ್ತಾ..?ತಿಳಿಯಲು ಮುಂದೆ ನೋಡಿ…

    ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸಂಚಿಕೆ 5ರಲ್ಲಿ ವಿಜೇತರಾಗಿದ್ದ ಒಳ್ಳೆ ಹುಡುಗ ಪ್ರಥಮ್,ಈಗಂತೂ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.ರಾಜ್ಯದಲ್ಲಿ ಯಾರಿಗೆ ಏನೇ ಆದರೂ, ಅದರ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ.

  • ಸುದ್ದಿ

    ಧೋನಿ ದಾಖಲೆಯನ್ನು ಮುರಿಯಲಿದ್ದಾರೆ ‘ಹಿಟ್ ಮ್ಯಾನ್’ ರೋಹಿತ್ ಶರ್ಮ…!

    ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಶರ್ಮಾ ಇನ್ನೆರಡೇ ಸಿಕ್ಸ್ ಬಾರಿಸಿದರೂ ಏಕದಿನದಲ್ಲಿ ಭಾರತ ಪರ ಧೋನಿ ಮಾಡಿರುವ ಅತ್ಯಧಿಕ ಸಿಕ್ಸ್ ದಾಖಲೆ ಬದಿಗೆ ಸರಿಯಲಿದೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರೋಹಿತ್ ಗೆ ಧೋನಿ ದಾಖಲೆ ಮುರಿಯಲು ಅವಕಾಶವಿತ್ತು. ಆದರೆ ಶರ್ಮಾ ಕೇವಲ 1 ರನ್ನಿಗೆ ಮುಜೀಬ್ ಉರ್ ರಹ್ಮಾನ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವ ಮೂಲಕ ಅವಕಾಶ ಕಳೆದುಕೊಂಡಿದ್ದರು. ಗುರುವಾರ (ಜೂನ್ 27) ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ…

  • ಸುದ್ದಿ

    ಕೊಡಗು ನೆರೆ ಸಂತಸ್ತರಿಗೆ ನಿರ್ಮಿಸುತ್ತಿರೋ ಮನೆಗಳು ಚೆನ್ನಾಗಿಲ್ಲ ಎಂದು ಹೇಳಿಕೆ ನೀಡಿದ ಹರ್ಷಿಕಾ ಪೂಣಚ್ಚ….!

    ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಸ್ಯಾಂಡಲ್‍ವುಡ್‍ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ.ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ…