ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ಸದನದಲ್ಲಿ ಬಹುಮತ ಕೂಡ ಸಾಬೀತು ಮಾಡಿದ್ದಾರೆ. ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದು, ನಾಳೆ ಸದನದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸ್ಪೀಕರ್ ಚುನಾವಣೆಯಿಂದ ಹಿಂದೆ ಸರಿದಿದ್ದು, ಯಾವುದೇ ನಾಮಪತ್ರ ಸಲ್ಲಿಸಿರಲಿಲ್ಲ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹೀಗಾಗಿ ಕಾಗೇರಿ ಅವರು ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸ್ಫೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಸ ವ್ಯಕ್ತಪಡಿಸಿದ್ದಾರೆ. “ನಮ್ಮ ವರಿಷ್ಠರು, ನಮ್ಮ ನಾಯಕರು ಎಲ್ಲರೂ ಸೇರಿ ನನ್ನನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದ್ದಾರೆ. ನಾನು ನಿಷ್ಠಾವಂತನಾಗಿ ಸ್ಪೀಕರ್ ಹುದ್ದೆಯಲ್ಲಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ,” ಎಂದು ಕಾಗೇರಿ ಹೇಳಿದ್ಧಾರೆ.
ಈ ಬಗ್ಗೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದಾರೆ. “ಕಾಗೇರಿ ಪಕ್ಷದ ನಿಷ್ಠಾವಂತ ಸ್ವಯಂ ಸೇವಕ. ಇಂತಹ ಸ್ವಯಂ ಸೇವಕ ಈಗ ಸ್ಪೀಕರ್ ಅಂತಹ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಕಾಗೇರಿ ಅವರಿಗೆ ಧನ್ಯವಾದಗಳು,” ಎಂದಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸುರೇಶ್ ಕುಮಾರ್ ಹೆಸರು ಸ್ಪೀಕರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬಂದಿದ್ದವು. ನಾನು ಈ ಬಾರಿ ಸ್ಪೀಕರ್ ಆಗಿ ಕೆಲಸ ನಿರ್ವಹಿಸಲಾರೆ ಎಂದು ಈಗಾಗೇ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಸ್ಪಷ್ಟಪಡಿಸಿದ್ದರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮಾತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಧಾನ ಹೊರಹಾಕಿದ್ದ ಶಾಸಕರಿಗೆ ಸಚಿ ಸ್ಥಾನ ಕೊಡುವುದಾಗಿ ಮೈತ್ರಿ ಸರ್ಕಾರ ಭರವಸೆ ನೀಡಿದ್ದು ಅದರಂತೆ ಈಗ ಸಚಿವ ಸಂಪುಟದ ವಿಸ್ತರಣೆ ಶುರುವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯಂತೆಯೇ ಡಿಸೆಂಬರ್ 22 ರಂದು ಅಂದರೇ ಇಂದು ಸಂಪುಟ ವಿಸ್ತರಣೆಯಾಗಲಿದೆ, ಇಬ್ಬರು ಹಾಲಿ ಸಚಿವರಿಗೆ ಕೊಕ್ ನೀಡಿದ್ದು, 8 ಮಂದಿ ನೂತನ ಸಚಿವರಾಗಿ ಇಂದು ಸಂಜೆ 5.30 ಕ್ಕೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ…
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ `ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲ ವರ್ಗದ ಜನರನ್ನು ಖುಷಿಗೊಳಿಸುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಸೇರಿದಂತೆ ಅನೇಕ…
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ…
ಬಹಳಷ್ಟು ಮಂದಿಯ ಮನೆಯಲ್ಲಿ ಈ ಸೊಳ್ಳೆ ಬ್ಯಾಟ್ಗಳು ಇದ್ದೇ ಇರುತ್ತವೆ. ನೀವು ಮನೆ ಬಾಗಿಲು ಹಾಕಿಟ್ಟಿದ್ದರೂ ಒಂದು ಕ್ಷಣಕ್ಕೆ ಬಾಗಿಲು ತೆರೆದರೆ ಸಾಕು ಸೊಳ್ಳೆಗಳೆಲ್ಲಾ ಮನೆಯೊಳಗಡೆ ಸೇರಿಕೊಂಡು ಬಿಡುತ್ತವೆ. ಮಧ್ಯರಾತ್ರಿಯಲ್ಲಿ ಸೊಳ್ಳೆ ಬ್ಯಾಟ್ ಹಿಡಿದುಕೊಂಡು ಸೊಳ್ಳೆಯನ್ನು ಹುಡುಕಿ ಹುಡುಕಿ ಸಾಯಿಸಬೇಕಾಗುತ್ತದೆ. ಬೇಸಿಗೆಗಾಲದಲ್ಲಂತೂ ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಇರುತ್ತವೆ. ಈ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗಬೇಕಾ? ನಾವು ನಿಮಗೆ ಸೊಳ್ಳೆ ಓಡಿಸಲು ಉಪಯೋಗಕ್ಕೆ ಬರುವ ಕೆಲವು ಸುಲಭವಾದ ಟಿಪ್ಸ್ನ್ನು ಹೇಳಿಕೊಡಲಿದ್ದೇವೆ. ಇದಕ್ಕೆ ಮನೆಯಲ್ಲಿರುವ ಕೆಲವು ವಸ್ತುಗಳೇ ಸಾಕು. ಅದಕ್ಕೆ…
ಮೈತ್ರಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಷಯದ ಬೆನ್ನೆಲ್ಲೇ ಇದೀಗ ನಿಗಮ ಮಂಡಳಿಗಾಗಿ ಫೈಟ್ ಶುರುವಾಗಿದೆ. ಖಾಲಿ ಇರುವ ನಿಗಮ ಮಂಡಳಿಗಾಗಿ ತೆನೆ ಕಾರ್ಯಕರ್ತರಲ್ಲಿ ಮತ್ತೊಂದು ಹಂತದ ಕುಸ್ತಿ ಶುರುವಾಗಿದೆ. ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು ಅಂತಾರಲ್ಲ ಇದಕ್ಕೇ ಅನ್ಸತ್ತೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳೋಕೆ ಬರೀ ಶಾಸಕರಿಗಷ್ಟೇ ನಿಗಮ ಮಂಡಳಿ ಸ್ಥಾನ ಕರುಣಿಸಿದ್ದ ದಳಪತಿಗಳಿಗೆ ಹೊಸ ಸಂಕಷ್ಟ ಶುರುವಾಗಿದೆ. ಜೆಡಿಎಸ್ ವರಿಷ್ಠರ ನಡೆಗೆ ಹತ್ತಾರು ವರ್ಷ ಪಕ್ಷಕ್ಕಾಗಿ ದುಡಿದ ತೆನೆ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ದೇವೇಗೌಡರ ಎದುರೇ ಪಟ್ಟಕ್ಕಾಗಿ…
ಕೆಲವು ಹಣ್ಣುಗಳು ಕಂಡ್ ಕಂಡಲ್ಲಿ ಸಿಗೋಲ್ಲ. ವಿಪರೀತ ದುಬಾರಿ ಬೇರೆ. ಹಾಗಂತ ತಿನ್ನದೇ ಇರಬಹುದು. ಅದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತದೆ. ಅಂಥ ಹಣ್ಣುಗಳಲ್ಲಿ ಡ್ರಾಗನ್ ಫ್ರೂಟ್ ಒಂದು. ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಡ್ರಾಗನ್ ಫ್ರೂಟ್. ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ….