ಸುದ್ದಿ

ನೂತನ ಸಚಿವರ ಲೀಸ್ಟ್ ರಿಲೀಸ್ ಆಗಿದ್ದು, 17 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ,..ಯಾರೆಂದು ತಿಳಿಯಿರಿ,..?

58

ಬಿಜೆಪಿ ವಲಯದಿಂದ ನೂತನ ಸಚಿವರ ಲೀಸ್ಟ್ ರಿಲೀಸ್ ಆಗಿದ್ದು, 17 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಅಲ್ಲದೇ, ಅಥಣಿ ಮಾಜಿ ಶಾಸಕ ಲಕ್ಷ್ಮಣ್ ಸವದಿಗೂ ಕೂಡ ಸಚಿವ ಸ್ಥಾನ ಸಿಕ್ಕಿರೋದು ವಿಶೇಷ.

1.ಗೋವಿಂದ ಕಾರಜೋಳ: ಮುಧೋಳ್, ಬಾಗಲಕೋಟೆ2.ಅಶ್ವಥ್ ನಾರಾಯಣ: ಮಲ್ಲೇಶ್ವರಂ, ಬೆಂಗಳೂರು
3.ಲಕ್ಷ್ಮಣ ಸವದಿ: ಅಥಣಿ ಮಾಜಿ ಶಾಸಕ                       4.ಕೆ.ಎಸ್ ಈಶ್ವರಪ್ಪ: ಶಿವಮೊಗ್ಗ
5.ಆರ್ ಅಶೋಕ್: ಪದ್ಮನಾಭನಗರ,    6.ಜಗದೀಶ್ ಶೆಟ್ಟರ್: ಧಾರವಾಡ ಸೆಂಟ್ರಲ್, (ಹುಬ್ಬಳ್ಳಿ- ಧಾರವಾಡ)
7 ಶ್ರೀರಾಮುಲು: ಮೊಳಕಾಲ್ಮೂರು, ಚಿತ್ರದುರ್ಗ              8. ಸುರೇಶ್ ಕುಮಾರ್: ರಾಜಾಜಿನಗರ
9.ಸಿ.ಟಿ ರವಿ: ಚಿಕ್ಕಮಗಳೂರು                                   10.ಬಸವರಾಜ್ ಬೊಮ್ಮಾಯಿ: ಶಿಗ್ಗಾಂವಿ
11.ಕೋಟಾ ಶ್ರೀನಿವಾಸ್ ಪೂಜಾರಿ: ಎಂಎಲ್‌ಸಿ             12.ಮಾಧುಸ್ವಾಮಿ: ಚಿಕ್ಕನಾಯಕನಹಳ್ಳಿ
13.ಸಿ.ಸಿ ಪಾಟೀಲ್: ನರಗುಂದ                                 14.ಎನ್ ನಾಗೇಶ್: ಮುಳುಬಾಗಿಲು
15.ಪ್ರಭು ಚೌಹಾಣ್: ಔರಾದ್, ಬೀದರ್                       16. ಶಶಿಕಲಾ ಜೊಲ್ಲೆ: ನಿಪ್ಪಾಣಿ 

ಇಂದು ರಾಜಭವನದಲ್ಲಿ ಪ್ರಮಣವಚನ ಕಾರ್ಯಕ್ರಮವಿರುವ ಹಿನ್ನೆಲೆ ರಾಜಭವನ ಸುತ್ತಮುತ್ತ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ರಾಜಭವನದ ಸುತ್ತಮುತ್ತ 7 ಜನ ಡಿಸಿಪಿ ಸೇರಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ವಿಧಾನಸೌಧ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಇನ್ನು ರಾಜಭವನದ ಮುಂಭಾಗದ ಭದ್ರತೆ ನೇತೃತ್ವವನ್ನ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್‌ ವಹಿಸಿಕೊಂಡಿದ್ದಾರೆ. ಪೂರ್ವ ವಿಭಾಗ ಟ್ರಾಫಿಕ್ ಡಿಸಿಪಿ ಜಗದೀಶ್ ಟ್ರಾಫಿಕ್ ನಿಯಂತ್ರಣದ ಜವಾಬ್ದಾರಿ ಹೊತ್ತಿದ್ದಾರೆ.

ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯ ತನಕ ರಾಜಭವನ ರಸ್ತೆ ಪ್ರವೇಶ ನಿರ್ಬಂಧ ಹೇರಲಾಗಿದ್ದು, ರಾಜಭವನ ಪ್ರವೇಶಕ್ಕೆ ಪಾಸ್ ಇರುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ರಾಜಭವನದ ಒಳಗಡೆ 1500 ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜಭವನದ ಮುಂಭಾಗದ ರಸ್ತೆಯಲ್ಲಿ ಎರಡು ಎಲ್.ಇ.ಡಿ. ಸ್ಕ್ರೀನ್‌ಗಳನ್ನ ಅಳವಡಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ