ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ.

ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ ಮುದ್ರಿಸಿದೆ. ರಸೂಲಾಬಾದ್ನ ಹೋಮಿಯೋಪತಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮ್ಮದ್ ಮುಬೀನ್ ಅವರು ತಮ್ಮ ಮಗ ಮತ್ತು ಮಗಳು ಲಗ್ನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ ಮುದ್ರಿಸಿದ್ದಾರೆ. ಮುಬೀನ್ ಅವರ ಮಗ ಮೊಹಮದ್ ನಸೀರ್ ಹಾಗೂ ಮಗಳು ಅಮೀನಾ ಬಾನೋ ಅವರ ಮದುವೆ ನಡೆಯಲಿದೆ. ಶುಕ್ರವಾರ ನಸೀರ್ ಮದುವೆಯಾದರೆ, ರವಿವಾರದಂದು ಅಮೀನಾ ಮದುವೆ ನಡೆಯಲಿದೆ. ಹೀಗಾಗಿ ಮುಬೀನ್ ಅವರು ತಮ್ಮ ಮಕ್ಕಳ ಮದುವೆಗೆ ಹಿಂದೂ ದೇವರುಗಳುಳ್ಳ ವಿಶೇಷ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ.
ಈಗಾಗಲೇ 700 ಮಂದಿಗೆ ಲಗ್ನ ಪತ್ರಿಕೆ ಹಂಚಿದ್ದೇನೆ. ಹಿಂದೂ ಮಿತ್ರರಿಗೂ ಲಗ್ನ ಪತ್ರಿಕೆ ಹಂಚಿ ಮದುವೆಗೆ ಕರೆದಿದ್ದೇನೆ. ಯಾರೂ ಕೂಡ ಈವರೆಗೆ ಇದಕ್ಕೆ ವಿರೋಧಿಸಿಲ್ಲ. ನನ್ನ ಸಂಬಂಧಿಕರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಮಕ್ಕಳು ಕೂಡ ಖುಷಿಯಿಂದ ಲಗ್ನ ಪತ್ರಿಕೆಯನ್ನು ಒಪ್ಪಿದ್ದಾರೆ. ಎಲ್ಲರೂ ಇದು ಒಳ್ಳೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಖುಷಿಯಿಂದ ಮುಬೀನ್ ಹೇಳಿದ್ದಾರೆ.
ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಇಲ್ಲಿ ಪರಿಪೂರ್ಣ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬ, ನಮ್ಮ ಅಲ್ಲಾಹುವಿನ ಮೇಲೆ ನಮಗೆ ಎಷ್ಟು ನಂಬಿಕೆ ಇದೆಯೋ ಅಷ್ಟೇ ನಂಬಿಕೆ ಹಿಂದೂ ದೇವ, ದೇವತೆಯರ ಮೇಲಿದೆ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ.
ಮುಬೀನ್ ಅವರು ಈ ಬಗ್ಗೆ ಮಾತನಾಡಿ, ಲಗ್ನ ಪತ್ರಿಕೆ ಮುದ್ರಿಸುವ ವಿಚಾರದಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಿರಲಿಲ್ಲ. ಕುಟುಂಬ ಸದಸ್ಯರ ಅನುಮತಿ, ಅಭಿಪ್ರಾಯ ಪಡೆದು ನಾನು ಪತ್ರಿಕೆ ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ. ಈ ಸಾಮರಸ್ಯ ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ಸ್ಥಳೀಯರೊಬ್ಬರು ಮುಬೀನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹ ಪರಿಹಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.ಮನೆ ಹಾನಿಗೊಳಗಾದ ಸಂತ್ರಸ್ಥರಿಗೆ 5 ಲಕ್ಷ ರೂ. ನೀಡಲಿದ್ದು, ಮೊದಲ ಕಂತಿನಲ್ಲಿ ಪಡಿತರ ಚೀಟಿ ಹೊಂದಿದವರಿಗೆ 1 ಲಕ್ಷ ರೂ. ನೀಡಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಮೂವರು ಅಣ್ಣತಮ್ಮಂದಿರು ಇದ್ದ ಸಂದರ್ಭದಲ್ಲಿ ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಪರಿಹಾರ ಧನ ನೀಡಲಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದ್ದು, ಇದಕ್ಕೆ ಸಿಎಂ…
ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಆಯೋಜಿ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಹುಬ್ಬಳಿಯ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟರು. ಅವರು “ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು” ಹಾಡು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಕೊನೆಗೆ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದೊಡನೆ ಸಿದ್ದಾರೂಢರ ಮಠಕ್ಕೆ ತೆರಳಿ ದರ್ಶನ ಪಡೆದೆ. ಈ ನಗರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ. ದೊಡ್ಮನೆ ಹುಡುಗ ಚಿತ್ರದ ದೃಶ್ಯಗಳನ್ನು ನಾಲ್ಕು ದಿನಗಳಕಾಲ ಇಲ್ಲೇ ಮಾಡಲಾಗಿತ್ತು ಎಂದರು. ಹುಬ್ಬಳ್ಳಿ ಜನರ…
ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಭದೋಹಿಯ ಖಮಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಥೇನ್ (6) ಮತ್ತು ಸಹೋದರ ಹಸನ್ (3) ಮೃತ ಬಾಲಕರು. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕರ ತಂದೆ ಮಾಲು ಅನ್ಸಾರಿ ಖಮರಿಯಾದ ಕಾರ್ಪೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಕ್ಕಳನ್ನು ನೋಡಿದ್ದಾರೆ. ಆದರೆ ಮಕ್ಕಳು…
ಈ ಬಾರಿಯ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನ ಪಡೆದಿದ್ದು, ಈ ಮೂಲಕ ಜಿಲ್ಲೆ ಹೊಸ ದಾಖಲೆ ಬರೆದಿದೆ. ಹೌದು. ಫಲಿತಾಂಶದಲ್ಲಿ ಅರೆ ಮಲೆನಾಡು ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 7ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಹಾಸನ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಿಂದಿಕ್ಕಿದೆ. ಹಾಸನ ಪ್ರಥಮ ಸ್ಥಾನದ ಜೊತೆಗೆ ಹಾಸನದ ಇಬ್ಬರು ವಿದ್ಯಾರ್ಥಿಗಳು…
wwe ಫೈಟ್ ನೀವೂ ಎಲ್ಲರೂ ನೋಡೇ ಇರ್ತೀರಿ…ಆದರೆ ನಮ್ಮ ಹಳ್ಳಿ ಹುಡುಗರ wwe ಫೈಟ್ ನೋಡಿದ್ದೀರಾ… ನೋಡಿಲ್ಲಾ ಅಂದ್ರೆ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…
ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಕಾರಣ ಇಡೀ ನಡೇ ಕಣ್ಣೀರಿನಲ್ಲಿ ಮುಳುಗಿದೆ.. ಬಡವರ ಬಂಧು.. ಜಾತಿ ಧರ್ಮ ಮತ ಬೇದ ಮಾಡದೇ ಕಾಯಕ ಯೋಗಿ ಪವಾಡ ಪುರುಷ ಶಿವಯೋಗಿ.. ಸಿದ್ದ ಪುರುಷ ಮಹಾಸ್ವಾಮಿಗಳು ಇಂದು ಬೆಳಿಗ್ಗೆ 11.44 ರಲ್ಲಿ ಭಕ್ತ ಕೋಟಿ ಸಾಗರವನ್ನು ಅಗಲಿದ್ದಾರೆ.. ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ…