ಸುದ್ದಿ

ತಾಯಿಯ ಮೇಲಿನ ಪ್ರೀತಿಗಾಗಿ ಸ್ವಂತ ಅಣ್ಣನನ್ನು ಕೊಂದ ತಮ್ಮ..ಕಾರಣ?

744

ತುಮಕೂರು, ಜು. 27- ಬಾಣಂತನಕ್ಕೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆಸದ ತಾಯಿ ಜತೆ ಜಗಳವಾಡಿ ಪದೇ ಪದೇ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಅಣ್ಣನ ವರ್ತನೆಯಿಂದ ಕುಪಿತಗೊಂಡ ತಮ್ಮ ರಾತ್ರಿ ಅಣ್ಣನ ಕುತ್ತಿಗೆಗೆ ಚಾಕುವಿನಿಂದ ಬಲವಾಗಿ ಇರಿದು ಕೊಲೆ ಮಾಡಿರುವ ಧಾರುಣ ಘಟನೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಗೊಂಡನಹಳ್ಳಿಯ ಮಹೇಶ್ (35) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ತಮ್ಮ ಅಂಜನಮೂರ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಹನುಮಯ್ಯ-ಗಂಗಮ್ಮ ದಂಪತಿಯ ಮೊದಲ ಮಗನಾದ ಮಹೇಶ್ ನಿಗೆ ಮದುವೆಯಾಗಿದ್ದು ಬಾಣಂತನಕ್ಕೆಂದು ಪತ್ನಿ ತನ್ನ ತವರು ಮನೆಯಾದ ಆಂಧ್ರಪ್ರದೇಶಕ್ಕೆ 8 ತಿಂಗಳ ಹಿಂದೆ ಹೋಗಿದ್ದು ವಾಪಸಾಗಿಲ್ಲ.

ಲಾರಿ ಚಾಲಕ ವೃತ್ತಿ ಮಾಡುತ್ತಿದ್ದ ಮಹೇಶ ತನ್ನ ಪತ್ನಿಯನ್ನು ಕರೆಸುವಂತೆ ತಾಯಿ ಜತೆ ಆಗಾಗ್ಗೆ ಕುಡಿದು ಬಂದು ಜಗಳವಾಡುತ್ತಿದನು. ಸಹೋದರ್ಮ ಅಂಜನಮೂರ್ತಿ ಬುದ್ದಿವಾದ ಹೇಳಿದರೂ ತನ್ನ ಚಾಳಿ ಮುಂದುವರೆಸಿದನು. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಕುಡಿದುಕೊಂಡು ಮನೆಗೆ ಬಂದ ಮಹೇಶ ಪತ್ನಿಯನ್ನು ಕರೆಸಿಲ್ಲ ಎಂದು ಮತ್ತೊಮ್ಮೆ ಜಗಳವಾಡಿ ತಾಯಿಗೆ ಮನಬಂದಂತೆ ಹೊಡೆದಿದ್ದಾನೆ.

ನೆರೆಮನೆಯವರು ಜಗಳ ಬಿಡಿಸಿ ಸಮಾಧಾನ ಪಡಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮನೆಯಿಂದ ಹೊರಗೆ ಹೋದ ಮಹೇಶ ರಾತ್ರಿ 8 ಗಂಟೆ ಸುಮಾರಿನಲ್ಲಿ ಮತ್ತೆ ಕುಡಿದು ಬಂದು ತಾಯಿಯನ್ನು ಹುಡುಕಾಡಿದ್ದಾನೆ. ಈತನ ವರ್ತನೆಯಿಂದ ಭಯಗೊಂಡ ತಾಯಿ ಮನೆಯ ಹಿಂಬದಿ ಬಚ್ಚಿಟ್ಟುಕೊಂಡಿದ್ದಾರೆ. ಕೆಲ ಸಮಯದ ನಂತರ ಮಹೇಶ ನಿದ್ರೆಗೆ ಜಾರಿದ್ದಾನೆ.ರಾತ್ರಿ 9ಗಂಟೆ ಸುಮಾರಿನಲ್ಲಿ ಎರಡನೇ ಮಗ ಅಂಜನಮೂರ್ತಿ ಮನೆಗೆ ಬಂದಾಗ ಮನೆಯಲ್ಲಿ ತಾಯಿ ಇಲ್ಲದಿರುವುದನ್ನು ಗಮನಿಸಿ ಎಲ್ಲ ಕಡೆ ಹುಡುಕಾಡಿದ್ದಾನೆ. ಮಗನ ಧ್ವನಿ ಕೇಳಿದ ಗಂಗಮ್ಮ ಬಚ್ಚಿಟ್ಟುಕೊಂಡಿದ್ದ ಸ್ಥಳದಿಂದ ಬಂದು ಮಧ್ಯಾಹ್ನ ನಡೆದ ಘಟನೆಯ ವಿವರವನ್ನು ತಿಳಿಸಿದ್ದಾರೆ.

ಅಣ್ಣನ ವರ್ತನೆ ಪ್ರತಿದಿನ ಮಿತಿಮೀರುತ್ತಿದೆ, ಎಷ್ಟು ಬುದ್ಧಿ ಹೇಳಿದರೂ ಕೇಳುವುದಿಲ್ಲ ಎಂದು ಆಕ್ರೋಶಗೊಂಡ ಅಂಜನಮೂರ್ತಿ ಅಡುಗೆಮನೆಯಲ್ಲಿದ್ದ ಚಾಕುವನ್ನು ತಂದು ಮಲಗಿದ್ದ ಅಣ್ಣನ ಮೇಲೆ ಕುಳಿತು ಕುತ್ತಿಗೆ ಕುಯ್ದು ಕೊಲೆ ಮಾಡಿ ನಂತರ ಮನೆ ಹೊರಗೆ ಕುಳಿತಿದ್ದ ತಾಯಿಗೆ ಅಣ್ಣನನ್ನು ಕೊಲೆ ಮಾಡಿರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.ಈ ಘಟನೆಯಿಂದ ಕಂಗಾಲಾದ ತಾಯಿ ಚೀರುತ್ತಾ ಮನೆಯೊಳಗೆ ಹೋಗಿದ್ದನ್ನು ಗಮನಿಸಿದ ನೆರೆಹೊರೆಯವರು ಮನೆ ಬಳಿ ಬಂದು ನೋಡಿದಾಗ ಮಹೇಶ ಕೊಲೆಯಾಗಿರುವುದುನ್ನು ಕಂಡು ತಕ್ಷಣ ಕೋರಾ ಠಾಣೆ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಸಬ್ ಇನ್ಸ್‍ಪೆಕ್ಟರ್ ಶೇಷಾದ್ರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ವೃತ್ತನಿರೀಕ್ಷಕ ಮಧುಸೂಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ಕೋನವಂಶಿಕೃಷ್ಣ ಅವರು, ಆರೋಪಿ ಪತ್ತೆಗೆ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಧುಸೂಧನ್, ಸಬ್ ಇನ್ಸ್‍ಪೆಕ್ಟರ್ ಶೇಷಾದ್ರಿ, ಸಿಬ್ಬಂದಿ ಶ್ರೀನಿವಾಸ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು.ಈ ತಂಡ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಈತ ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿದ್ದಾನೆಂಬ ಸುಳಿವಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ ಆರೋಪಿ ಅಂಜನಮೂರ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದೇವೇಗೌಡರಿಗೆ 87ನೇ ಹುಟ್ಟುಹಬ್ಬದ ಶುಭಾಶಯವನ್ನುತಿಳಿಸಿದ ಪ್ರಧಾನಿ ನರೇಂದ್ರ ಮೋದಿ…,

    ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರಿಗೆ 87ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಮತ್ತು ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. ರಾಜಕೀಯ ಕಚ್ಚಾಟಗಳ…

  • ಸಿನಿಮಾ

    ಸುಮ್ಮನೆ ಮನೆಯಲ್ಲಿ ಕೂರದೇ, ಕೈತುಂಬಾ ಸಂಪಾದನೆ ಮಾಡ್ತಾರೆ ನಮ್ಮ ಸ್ಟಾರ್ ನಟರ ಪತ್ನಿಯರು!

    ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ..ನಿಮ್ಮ ನಕ್ಷತ್ರ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ…

    ಸೋಮವಾರ, 26/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಹೆಚ್ಚಿನ ಆದಾಯ ಬರಲಿದೆ. ಶುಭಮಂಗಲ ಕಾರ್ಯಗಳು ನಡೆದಾವು. ವಾಹನ ಮಾರಾಟದಿಂದ ಲಾಭ. ದೇಹಾರೋಗ್ಯದಲ್ಲಿ ಸಮಸ್ಯೆ ಇದ್ದು ಆರೋಗ್ಯದ ಭಾಗ್ಯ ಕಾಳಜಿ ಇರಲಿ. ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ವೃಷಭ:- ಆರ್ಥಿಕ ಸ್ಥಿತಿಯಲ್ಲಿ ಸಮತೋಲನ.ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ. ಬಂಧುಗಳ ಸಹಕಾರ ದೊರೆಯಲಿದೆ. ಪರಿಶ್ರಮದ ಬಲದಿಂದಲೇ ಉದ್ಯೋಗ ಲಾಭ. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ದೇಹಾರೋಗ್ಯ ಸುಧಾರಿಸಲಿದ್ದು ಕಾಳಜಿ ಇರಲಿ. ಮಿಥುನ:–…

  • ಸುದ್ದಿ

    ಬೆಂಗಳೂರಲ್ಲಿ ಬಿದ್ದ ಮಳೆಗೆ, ಬಿದ್ದಿದ್ದು ಬರೋಬ್ಬರಿ 83 ಮರಗಳು…!

    ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು…

  • ಸ್ಪೂರ್ತಿ

    ಎಂತಾ ಸೋಮಾರಿಯನ್ನೂ ಬಡಿದೆಬ್ಬಿಸುತ್ತವೆ, ಈ ಚಿತ್ರಗಳು…!ತಿಳಿಯಲು ಮುಂದೆ ನೋಡಿ…

    ‘ಕುಣಿಯಕ್ಕೆ ಬಾರ್ದೊರು, ನೆಲ ಡೊಂಕು ಅಂದ್ರಂತೆ’ ಅನ್ನೋ ಗಾದೆ ಮಾತಿದೆ. ಇದು ನಿಜಾ ಕೂಡ.ಯಾಕಂದ್ರೆ ಜೀವನದಲ್ಲಿ ಏನು ಮಾಡಲಿಕ್ಕೆ ಆದೋರು, ಈ ರೀತಿ ಕುಂಟು ನೆಪಗಳನ್ನು ಸಾಮಾನ್ಯ.

  • Sports

    ರಣಜಿ ಟ್ರೋಫಿ ಸಿಕೆ ನಾಯ್ಡು ಟ್ರೋಫಿ ಸೀನೀಯರ್ ವುಮೆನ್ಸ್ ಲೀಗ್ ಮುಂದೂಡಲಾಗಿದೆ

    ಬಿಸಿಸಿಐ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ವುಮೆನ್ಸ್ ಟಿ 20 ಲೀಗ್ ಅನ್ನು 2021-22 ಋತುವಿಗೆ ಮುಂದೂಡಿದೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ 2021-22ರ ಸೀಸನ್‌ಗಾಗಿ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಲೀಗ್ ಅನ್ನು ಮುಂದೂಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ರಣಜಿ ಟ್ರೋಫಿ ಮತ್ತು ಕರ್ನಲ್ ಸಿ ಕೆ ನಾಯುಡು ಟ್ರೋಫಿ ಈ…

    Loading