ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿನ ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಆಸರೆಯಾಗಿರುವ ದೃಶ್ಯ ಒಂದು ಕಂಡುಬಂದಿದೆ. ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ. ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ ಜೀವನ ಧಾರೆ ಎರೆಯುತ್ತಿದ್ದಾರೆ. ಜಯಲಕ್ಷ್ಮಿ ಅವರಿಗೆ ಮೂವರು ಮಕ್ಕಳಿದ್ದು, ಮೊದಲನೇ ಮಗ ರಾಜೇಶ್ಗೆ ಅಂಗವಿಕಲತೆ ಕಾಡುತ್ತಿದೆ.
ಪತಿ ಇಲ್ಲವಾದರೂ ಎದೆಗುಂದದ ಜಯಲಕ್ಷ್ಮಿ, ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ. ಏಳನೇ ತರಗತಿಯವರೆಗೆ ತಮ್ಮ ಸ್ವ-ಗ್ರಾಮವಾಗಿರುವ ಕಡುದರಹಳ್ಳಿಯಲ್ಲಿ ಓದಿದ್ದ ಬಾಬುಗೆ ಓಡಾಡಲು ಶಕ್ತಿಯಿಲ್ಲವಾದರೂ ವಿದ್ಯಾಭ್ಯಾಸದ ಚಿತ್ತ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ತನ್ನ ತಾಯಿಯ ಹೆಗಲ ಆಸರೆ ಪಡೆದು ಕಡುದರಹಳ್ಳಿಯಿಂದ ಮಿರಾಸಾಬಿಹಳ್ಳಿಯ ರಾಣಿಕೆರೆ ಹೈಸ್ಕೂಲಿಗೆ ಬಂದು ಎಂಟನೇ ತರಗತಿ ಓದುತ್ತಿದ್ದಾನೆ. ಸರ್ಕಾರದಿಂದ ರಾಜೇಶ್ ಬಾಬುಗೆ ನೀಡಿದ್ದ ತ್ರಿಚಕ್ರ ಸೈಕಲ್ ಹಾಳಾಗಿ ಮೂಲೆ ಸೇರಿದೆ. ನಿತ್ಯವೂ ತನ್ನ ತಾಯಿಯ ಹೆಗಲ ಮೇಲೆ ಶಾಲೆಗೆ ಬರುವ ರಾಜೇಶ್ಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂಬ ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಹುಶಃ ಈಗಂತೂ ಸ್ಮಾರ್ಟ್ಫೋನ್ ಇರದೆ ಇರುವ ವ್ಯಕ್ತಿಯು ಸಿಗುವುದು ತುಂಬಾ ವಿರಳ. ಎಲ್ಲರ ಪಾಕೆಟ್ನಲ್ಲಿ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಈ ಸತ್ಯದ ಹೊರತಾಗಿಯೂ, ನಂಬಲಾಗದ ವಿಷಯೇನಂದರೆ, ಆಂಡ್ರಾಯ್ಡ್ ಫೋನ್ ನ ಎಷ್ಟೋ ವಿಶಿಷ್ಟ ಆಪ್ಷನ್ಸ್ ಗಳು ಎಷ್ಟೋ ಬಳಕೆದಾರರಿಗೆ ಗೊತ್ತಿಲ್ಲಾ ಎನ್ನುವುದೇ ಸೋಜಿಗದ ವಿಷಯ.
ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ವು ರೆಯುವುದಿಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ ಜೀವಂತ ನಿದರ್ಶನ ಬಳ್ಳಾರಿಯ ಜಿಂಕೆ ಮರಿ ಯಾಗಿದೆ.
ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಕನಿಷ್ಠ 1 ಜಿ.ಬಿ. ಡೇಟಾವನ್ನು ಉಚಿತವಾಗಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಆಗಸ್ಟ್ 15 ರೊಳಗೆ ಸೌಲಭ್ಯ ನೀಡಲು ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ
ಎಐಸಿಸಿ ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಸಂದರ್ಭದಲ್ಲಿ ಕಾಯಿಲೆ ನೆಪ ಹೇಳಿ, ಅಂತ್ಯಸಂಸ್ಕಾರದಿಂದ ದೂರ ಉಳಿದಿದ್ದರು. ಅಂತ್ಯ ಸಂಸ್ಕಾರಕ್ಕೆ ಬಾರದ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಸ್ಪಷ್ಟನೆ ನೀಡಿದ್ದ ರಮ್ಯಾ ತಾವು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ, ಇದರ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳದಿದ್ದರೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದೆ. ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಂಬರೀಶ್…
ನವದೆಹಲಿ: ಪ್ರತಿ ದಿನ ಬೈಯುತ್ತಿದ್ದಾರೆ ಎಂದು ಕೋಪದಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆಗೈದು ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಅಮನ್(22) ತಂದೆಯನ್ನೇ ಕೊಲೆ ಮಾಡಿದ ಮಗ. ಕೆಫೆ ಮಾಲೀಕನಾಗಿರುವ ಅಮನ್ ತಂದೆ ಸಂದೇಶ್ ಅಗರ್ ವಾಲ್(48) ದಿನ ಬೈಯುತ್ತಿದ್ದರು ಎಂದು ಕೊಲೆ ಮಾಡಿದ್ದಾನೆ. ಅಮನ್ ತನ್ನ ತಂದೆ ಸಂದೇಶ್ರನ್ನು ಕೊಲೆ ಮಾಡಿದ ನಂತರ ಅವರ ದೇಹವನ್ನು 25 ಪೀಸ್ ಮಾಡಿ ನಾಲ್ಕು ಬ್ಯಾಗ್ನಲ್ಲಿ ತುಂಬಿಸಿದ್ದಾನೆ. ಈ ವಿಷಯ ತಿಳಿದ ಪೊಲೀಸರು…
ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.