ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು.
ಹೌದು ತೆಲಂಗಾಣದ ನಿಜಾಮಬಾದ್‌ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಚಾಲಕನಾಗಿ ವೃತ್ತಿ ಮಾಡುತ್ತಿದ್ದರು. ಬಳಿಕ ಸ್ವದೇಶಕ್ಕೆ ಹಿಂತಿರುಗಿ ಕೃಷಿ ಕಾರ್ಯ ಮಾಡುತ್ತಿದ್ದರು. ಆದರೆ ಹಲವು ಸಮಸ್ಯೆಯ ಕಾರಣಕ್ಕಾಗಿ ದುಬೈಯಲ್ಲಿ ಉದ್ಯೋಗ ಹುಡುಕುವ ಕನಸನ್ನು ಕಂಡಿದ್ದರು. ಇದಕ್ಕಾಗಿ 45 ವರ್ಷಗಳ ಹಿಂದೆ ದುಬೈ ತೆರಳಿದ್ದರು. ಆದರೆ ಕೆಲವು ದಿನಗಳ ಕಾಲ ಕೆಲಸವನ್ನು ಅರಸುತ್ತಾ ದುಬೈಯಲ್ಲೇ ಇದ್ದರು. ಆದರೆ ಕೆಲಸ ಎಲ್ಲಿಯೂ ಇವರ ಕೈ ಹಿಡಿಯಲಿಲ್ಲ.
ಉಪಾಯ ಇಲ್ಲದೆ ಹೆಂಡತಿ ಪದ್ಮ ಅವರಿಂದ 20 ಸಾವಿರ ಪಡೆದು 3 ಅದೃಷ್ಟ ಕೂಪನ್ “ರಾಫೆಲ್’ ಅನ್ನು ಪಡೆಯಲು ಆಸಕ್ತಿ ಹೊಂದುತ್ತಾರೆ. ಇದರ ಸಲುವಾಗಿ ಅಬುದಾಬಿಯಲ್ಲಿ ಕೆಲಸದಲ್ಲಿರುವ ಗೆಳೆಯ ರವಿ ಅವರಲ್ಲಿ ನೀಡಿದ್ದರು. ರವಿ ರಿಕ್ಕಳ ಅವರ ಹೆಸರಿನಲ್ಲಿ ಅದೃಷ್ಟ ಚೀಟಿ ಖರೀದಿಸಿದ್ದರು. ಬಳಿಕ ಇವರು ಮತ್ತೆ ಬರೀ ಕೈಯಲ್ಲಿ ಸ್ವದೇಶಕ್ಕೆ ಹಿಂದಿರುಗಿದ್ದರು.
ದುಬೈನ ಕರಾಳ ದಿನದ ನೆನಪು ಮರೆಯಾಗುವ ಸಮಯಕ್ಕೆ ಅದೃಷ್ಟ ಚೀಟಿ ಅವರ ಕೈ ಹಿಡಿದಿದೆ. 4.08 ಮಿಲಿಯನ್ ಡಾಲರ್ (ಅಂದರೆ 28.45 ಕೋ.ರೂ) ಅದೃಷ್ಟವನ್ನು ರಿಕ್ಕಳ ಅವರು ಬಾಚಿಕೊಂಡಿದ್ದಾರೆ. ಕೆಲಸ ಕೈಕೊಟ್ಟರೆ ಏನಾಯಿತು, ಅದೃಷ್ಟ ಕೈ ಕೊಡಲಿಲ್ಲ. ರಿಕ್ಕಳ ಮತ್ತು ಪತ್ನಿ ಪದ್ಮ ಅವರಿಗೆ 2 ಹೆಣ್ಣು ಮಕ್ಕಳಿದ್ದಾರೆ. ನನ್ನ ಈ ಸಂಭ್ರಮಕ್ಕೆ ನನ್ನ ಪತ್ಮಿಯೇ ಕಾರಣ ಎಂದು ರಿಕ್ಕಳ ಅವರು ಹೇಳಿದ್ದಾರೆ.ರಿಕ್ಕಳ ಅವರ ಈ ಯಶೋಗಾಥೆಯನ್ನು ಗಲ್ಫ್ ಪತ್ರಿಕೆಗಳು ವರದಿ ಮಾಡಿವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈತ ಒಬ್ಬ ರಿಕ್ಷಾ ಓಡಿಸೋ ಸಾಮಾನ್ಯ ಚಾಲಕ. ಈತನ ಹೆಸರು ಬಬ್ಲು. ಇವರ ವೃತ್ತಿಯಲ್ಲಿ 8 ವರ್ಷದ ಹಿಂದೆ ನಡೆದಿದ್ದ ಕತೆ ಈಗ ಹೊರಜಗತ್ತಿಗೆ ಗೊತ್ತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹೀರೊ ಹಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿ ಆ ಒಳ್ಳೆಯ ಕೆಲಸವೇನು ಗೊತ್ತಾ?
ಹಲ್ಲು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ಕೇವಲ ತಿನ್ನುವುದಕ್ಕೆ ಮಾತ್ರವಲ್ಲ, ನಮ್ಮ ಮುಖದ ಸೌಂದರ್ಯದಲ್ಲಿ ಹಲ್ಲು ವಹಿಸುವ ಪಾತ್ರವನ್ನು ನಾವು ಕೇರ್ಲೆಸ್ ಮಾಡೋ ಅಂಗಿಲ್ಲ. ಯಾಕಂದ್ರೆ ಬಿಳಿ ಬಿಳಿಯಾಗಿ ಪಳ ಪಳ ಅಂತ ಹೊಳೆಯುವ ಹಲ್ಲು ನಮ್ಮ ಮುಖದ ಚಂದವನ್ನು ಜಾಸ್ತಿ ಮಾಡುತ್ತೆ.
ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.
ಒಂದೊಂದು ಬಗೆಯ ಆಹಾರಗಳು ಒಂದೊಂದು ಸೀಸನ್ ಗೆ ಸೀಮಿತವಾಗಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳು ಒಂದು ಕಾಲಮಾನದಲ್ಲಿ ಬೆಳೆಯಲ್ಪಟ್ಟು ಜನರಿಗೆ ಸಹಾಯಕವಾದರೆ, ಕೆಲವೊಂದು ಪದಾರ್ಥಗಳು ನಿರ್ದಿಷ್ಟ ಕಾಲಮಾನದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ಮನೆ ಮಾಡಿದೆ. ನಾವು ಇತ್ತೀಚಿನ ದಿನಗಳಲ್ಲಿ ಸೀಸನಲ್ ಫ್ರೋಟ್ ಹಾಗೂ ತರಕಾರಿಗಳಿಗೆ ಮಾರು ಹೋಗುತ್ತೇವೆ. ಅಂದರೇ ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು ಗಳನ್ನು ಬಿರು ಬಿಸಿಲಿನ ಬೇಸಿಗೆಯ ಕಾಲದಲ್ಲಿ ಸೇವಿಸುತ್ತವೆ. ಅದಕ್ಕೆ ಕಾರಣ ಇದರಲ್ಲಿ ಹೆಚ್ಚಿನ ನೀರಿನ ಮಟ್ಟವಿದ್ದು ಅದು ನಮ್ಮ ದೇಹವನ್ನು…
ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.
ಮಂಗಳವಾರ, 27/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಆಗಾಗ ಮಾನಸಿಕ ಸ್ಥಿರತೆ ಇರದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ಹಾಗೆ ಯೋಗ್ಯ ವಯಸ್ಕರಿಗೆ ಕಂಕಣಭಾಗ್ಯ ಒದಗುತ್ತದೆ. ಅತಿಯಾದ ಕೋಪವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಉತ್ತಮ. ಕಷ್ಟವಾದರೂ ವ್ಯವಹಾರದಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ವೃಷಭ:- ಸಾಂಸಾರಿಕವಾಗಿ ಪತ್ನಿ ಹಾಗೂ ಮಕ್ಕಳಿಂದ ಸುಖ ಸಮಾಧಾನ ವಿರುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಗಳಿಕೆ ಅಧಿಕಗೊಂಡು ಉತ್ತಮ ಆದಾಯ. ಮಕ್ಕಳ ಆರೋಗ್ಯದ ಬಗ್ಗೆ…