ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಪ್ರಪಂಚದಲ್ಲಿ ಅದೆಷ್ಟೋ ನಿಗೂಢಗಳು ಇನ್ನು ಇದೆ ಮತ್ತು ಆ ನಿಗೂಢಗಳನ್ನ ಭೇದಿಸಲು ಮನುಷ್ಯನಿಂದ ಇನ್ನು ಕೂಡ ಸಾಧ್ಯವಾಗಿಲ್ಲ, ದೇವರ ಸೃಷ್ಟಿಯಾದ ಈ ಪ್ರಪಂಚದಲ್ಲಿ ಯಾವುದೇ ಜೀವಿ ಕೂಡ ಜೀವಿಸಬೇಕು ಅಂದರೆ ಆಹಾರ, ನೀರು ಮತ್ತು ಗಾಳಿಯನ್ನ ಸೇವನೆ ಮಾಡಲೇಬೇಕು, ಹೆಚ್ಚುಕಮ್ಮಿ ಒಂದೆರಡು ದಿನ ಊಟ ಇಲ್ಲದೆ ಜೀವನವನ್ನ ಮಾಡಬಹುದು ಆದರೆ ಜಾಸ್ತಿ ದಿನ ಊಟ ಮಾಡದೆ ಇರಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಹೆಚ್ಚು ದಿನ ಆಹಾರವನ್ನ ಬಿಟ್ಟು ಇದ್ದರೆ ಆ ಜೀವಿಯ ಸಾವು ಕೂಡ ನಿಶ್ಚಿತ. ಇನ್ನು ಈ ಸೃಷ್ಟಿಯಲ್ಲಿ ಕೆಲವು ಪ್ರಾಣಿಗಳು ವಾರಗಟ್ಟಲೆ ಆಹಾರವನ್ನ ಸೇವನೆ ಮಾಡದೆ ಬದುಕುತ್ತದೆ, ಆದರೆ ನಾವು ಹೇಳುವ ಈ ಜೀವಿ ಮಾತ್ರ ಏಳು ವರ್ಷದಿಂದ ಏನನ್ನೂ ಕೂಡ ತಿನ್ನದೇ ನಿಂತಲ್ಲೇ ನಿಂತಿದೆ ಮತ್ತು ಅಷ್ಟೇ ಅಲ್ಲದೆ ಬದುಕಿದೆ ಕೂಡ.

ವಿಜ್ಞಾನ ಲೋಕಕ್ಕೆ ಸವಾಲನ್ನ ಹಾಕಿರುವ ಆ ಜೀವಿ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ. ವಿಜ್ಞಾನ ಲೋಕಕ್ಕೆ ಸವಾಲನ್ನ ಹಾಕಿರುವ ಈ ಪ್ರಾಣಿಯ ಹೆಸರು ಕೇವ್ ಸಲಮೆಂಡರ ಅನ್ನುವ ಹಲ್ಲಿ ಜಾತಿಗೆ ಸೇರಿದ ಜೀವಿ, ಇನ್ನು ಈ ಜೀವಿಗಳು ಹೆಚ್ಚಾಗಿ ಯೂರೋಪ್ ನ ಬೋಸ್ನಿಯಾ ದೇಶದ ನೈಸರ್ಗಿಕ ಗುಹೆಗಳಲ್ಲಿ ವಾಸ ಮಾಡುತ್ತದೆ, ಗುಹೆಗಳಲ್ಲಿ ವಾಸ ಮಾಡುವ ಈ ಜೀವಿ ತುಂಬಾ ವಿಚಿತ್ರವಾದ ಪ್ರಾಣಿಗಳು ಆಗಿವೆ ಮತ್ತು ಇದಕ್ಕೆ ಕಾರಣ ಅವುಗಳು ಕ್ರಮಿಸುವ ದೂರ ಆಗಿದೆ.

ಇನ್ನು ಈ ಹಲ್ಲಿಗಳನ್ನ ಸೋಮಾರಿ ಹಲ್ಲಿಗಳೆಂದು ಕರೆಯಲಾಗುತ್ತದೆ, ಹೌದು ಹತ್ತು ವರ್ಷದಲ್ಲಿ ಈ ಹಲ್ಲಿಗಳು ಕ್ರಮಿಸುವ ದೂರ ಕೇವಲ 32 ಮೀಟರ್ ಮಾತ್ರ, ಈಗ ವಿಜ್ಞಾನಿಗಳಿಗೆ ಸವಾಲಾಗಿ ನಿಂತಿರುವುದು ಎಲ್ಲಾ ಸಲಮೆಂಡರ ಜಾತಿಯ ಹಲ್ಲಿಗಳು ಅಲ್ಲ ಬದಲಾಗಿ ಒಂದು ಹಲ್ಲಿ ಮಾತ್ರ. ಹೌದು ಬರೋಬ್ಬರಿ ಏಳು ವರ್ಷದಿಂದ ನಿಂತಲ್ಲೇ ನಿಂತಿರುವ ಈ ಒಂದು ಹಲ್ಲಿ ನಿಂತ ಜಾಗದಿಂದ ಸ್ವಲ್ಪನೂ ಕದಲದೆ ಯಾವುದೇ ಆಹಾರ ಕೂಡ ಸೇವನೆ ಮಾಡದೆ ಇನ್ನು ಜೀವಂತವಾಗಿದೆ. ಇನ್ನು ಏಳು ವರ್ಷದಿಂದ ಯಾವುದೇ ಆಹಾರವನ್ನ ಸೇವನೆ ಮಾಡದೆ ಈ ಹಲ್ಲಿ ಹೇಗೆ ಬದುಕಿದೆ ಎಂದು ತಿಳಿಯಲು ವಿಜ್ಞಾನಿಗಳು ಎಷ್ಟೇ ಪ್ರಯತ್ನ ಮಾಡಿದರು ಅವರಿಂದ ಅದನ್ನ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.

ಇನ್ನು ಸಿಕ್ಕಿರುವ ಕೆಲವು ಮಾಹಿತಿಗಳ ಪ್ರಕಾರ ಈ ಜಾತಿಯ ಹಲ್ಲಿಗಳು ಹತ್ತಾರು ವರ್ಷ ಬದುಕುತ್ತದೆ ಮತ್ತು ಕೆಲವೊಮ್ಮೆ ನೂರು ವರ್ಷ ಬದುಕುವುದು ಕೂಡ ಉಂಟು, ಆದರೆ ಯಾವುದೇ ಆಹಾರವನ್ನ ಸೇವನೆ ಮಾಡದೆ ನಿಂತಲ್ಲೇ ಏಳು ವರ್ಷದಿಂದ ನಿಂತಿಯುವ ಈ ಹಲ್ಲಿ ವಿಜ್ಞಾನ ಲೋಕಕ್ಕೆ ದೊಡ್ಡ ಸವಾಲಾಗಿ ನಿಂತು ದೊಡ್ಡ ದಾಖಲೆಯನ್ನ ಮಾಡಿದೆ. ತನಗೆ ಎಲ್ಲಾ ಗೊತ್ತು ಎಂದು ಭೀಗುವ ಮಾನವನಿಗೆ ನಿನಗೆ ಏನು ಗೊತ್ತಿಲ್ಲ ಎಂದು ಈ ಹಲ್ಲಿಯ ಮೂಲಕ ಸವಾಲನ್ನ ಎಸೆಯುತ್ತಿದೆ ಪ್ರಕೃತಿ, ಆಹಾರವನ್ನ ಸೇವನೆ ಮಾಡದೆ ಈ ಹಲ್ಲಿ ಇನ್ನು ಎಷ್ಟು ವರ್ಷ ಬದುಕುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ. ಅವರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಈಗ ಆ ಕಾಲ ಮುಗಿದಿದೆ.
ದಿಪಾವಳಿ ಯಾಕೆ 21 ದಿನಗಳ ನಂತರ ಆಚರಿಸಲಾಗುತ್ತದೆ?
ಇದು ನಿಜನ? ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ
ನನ್ನ ಹೆಸರು ಅಶ್ವಥ್ ಕುಮಾರ್ 42 ವರ್ಷ ವಯಸ್ಸು,ನಾನು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ವಾಸವಾಗಿರುವುದು. ನಾನು ಲೈಬ್ರರಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದು, 2016 ರಲ್ಲಿ ನನಗೆ ಸೊಂಟ ನೋವು ವಿಪರೀತ ಬರುತ್ತಿತ್ತು,ಮೂತ್ರ ಹೋಗಲೂ ಕಷ್ಟ ಆಗುತ್ತಿತ್ತು, ನಂತರ ಕೋಲಾರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದೆ ಆಗ ತಿಳಿಯಿತು …..
ಏಪ್ರಿಲ್ 1ರಿಂದ ವಾಹನ ಚಲಾಯಿಸಲು ನೈಸರ್ಗಿಕ ಅನಿಲ ಬಳಸುತ್ತಿರುವವರು ಹಾಗೂ ಅಡುಗೆ ಅನಿಲ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಏಪ್ರಿಲ್ 1ರಂದು ಸ್ಥಳೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ದರ ಪರಿಷ್ಕರಣೆಯಾಗಲಿದೆ. 2 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಏರಿಕೆ ಮಾಡುವ ಸಾಧ್ಯತೆ ಇದೆ. ಬೆಲೆ ಏರಿಕೆ ಕಾರಣ:- ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊಡೆತ ಬೀಳಲಿದೆ. ಆದ್ರೆ ಅನಿಲ ಕ್ಷೇತ್ರಗಳಲ್ಲಿ 10 ಬಿಲಿಯನ್ ಡಾಲರ್ ನಷ್ಟು ಭಾರೀ ಮೊತ್ತ ಹೂಡಿಕೆ ಮಾಡಲು ಮುಂದಾಗಿರುವ ಖಾಸಗಿ ಕಂಪನಿ ರಿಲಯೆನ್ಸ್ ಇಂಡಸ್ಟ್ರೀಸ್…
ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್ಡೇಟ್ ವರ್ಷನ್ಗಳಲ್ಲಿ ನೂತನ ಫೀಚರ್ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್ನ ಫೀಚರ್ ಒಂದಕ್ಕೆ ಬ್ರೇಕ್ ಹಾಕಿದ್ದು, ಇದು ಐಓಎಸ್ ಬಳಕೆದಾರರಿಗೆ ಅಚ್ಚರಿ ತಂದಿದೆ. ಹೌದು, ವಾಟ್ಸಪ್ ಕಂಪನಿಯು IOS ಬೆಂಬಲಿತ ಐಫೋನ್ಗಳಲ್ಲಿ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ…
ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47%…