ರೆಸಿಪಿ

ಒಮ್ಮೆ ಈ ರೀತಿ ಮಾಡಿ ನೋಡಿ ರುಚಿಯಾದ ಮೆಂತೆ ಸೊಪ್ಪಿನ ದೋಸೆ.

168

ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು.

ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.
ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ ಬೇಳೆ, ಮೆಂತ್ಯ ಕಾಳುಗಳನ್ನು ಚೆನ್ನಾಗಿ ತೊಳೆದು, ನೀರು ಸೇರಿಸಿ 6 ಘಂಟೆಗಳ ಕಾಲ ನೆನೆಸಿಟ್ಟು, ನಂತರ ನೀರು ಬಸಿದು ರುಬ್ಬಿಕೊಳ್ಳಬೇಕು.ಇದನ್ನು ಸುಮಾರು 8ಘಂಟೆಗಳ ಕಾಲ ಹುದುಗು ಬರಲು ಬಿಡಬೇಕು. ದೋಸೆ ಮಾಡುವ ಮೊದಲು ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸ ಬೇಕು.

ಮೆಂತ್ಯ ಸೊಪ್ಪಿನ ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು. ಸುಮಾರು 8ದೋಸೆಗೆ ಆಗುವಷ್ಟು ಮೆಂತ್ಯ ಸೊಪ್ಪು, ಒಂದು ಬಟ್ಟಲು ಈರುಳ್ಳಿ, ಒಂದು ಹಸಿಕಾಯಿ ತುರಿ, ಕಾಲು ಬಟ್ಟಲು ಧನಿಯಾ, ಒಂದು ಟೀ ಚಮಚ ಜೀರಿಗೆ, ಅರ್ಧ ಟೀ ಚಮಚ,
ಬೆಳ್ಳುಳ್ಳಿ ಎಸಳು. ಎರಡು ಹುಣಸೇ ಹಣ್ಣು. ಅರ್ಧ ಟೀ ಚಮಚ ಹಸಿಮೆಣಸಿನ ಕಾಯಿ ಮೂರು ಉಪ್ಪು ರುಚಿಗೆ ತಕ್ಕಷ್ಟು ಇವುಗಳನ್ನು ಹಸಿಯಾಗಿಯೇ ಸ್ವಲ್ಪವೇ ಸ್ವಲ್ಪ ನೀರು ಸೆರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಮಗೆ ಎಷ್ಟು ಬೇಕೋ ಅಷ್ಟೇ ದೋಸೆ ಹಿಟ್ಟಿಗೆ ಮೆಂತ್ಯ ಸೊಪ್ಪಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು ಕಾದ ಕಾವಲಿಯಲ್ಲಿ ದೋಸೆ ಮಾಡಿದರೆ, ರುಚಿಕರ. ಆರೋಗ್ಯಕರ.ಆಕರ್ಷಕ ಬಣ್ಣದ ಮೆಂತ್ಯ ಸೊಪ್ಪಿನ ದೋಸೆ ಸವಿಯಲು ಸಿದ್ಧ. ನಿಮ್ಮ ಇಷ್ಟದ ಚಟ್ನಿ ಯೊಂದಿಗೆ ಸೇವಿಸ ಬಹುದು. ದೋಸೆ ಕಹಿ ಇರುವುದಿಲ್ಲ. ತೀರಾ ಸೂಕ್ಷ್ಮವಾಗಿ ಪರೀಕ್ಷಿಸಿದರೆ ಸ್ವಲ್ಪ ಕಹಿ ಅನ್ನಿಸ ಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ