ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೋಡುವುದಕ್ಕೆ ಸಣ್ಣ ದಾರದಂತಿದೆ… ಆದರೆ, ಇದು ಮಾಡುವ ಕೆಲಸ ಅತಿ ಭಯಾನಕ. ಮನುಷ್ಯನ ಮೆದುಳನ್ನು ಸ್ವಲ್ಪ ಸ್ವಲ್ಪವೇ ತಿನ್ನುವುದು ಈ ಹುಳುವಿನ ಕೆಲಸ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು `ಟೇಪ್ ವರ್ಮ್’ ಎಂದು ಕರೆಯುತ್ತಾರೆ. ಇಂತಹ ವಿಚಿತ್ರ ಹುಳುವನ್ನು ವ್ಯಕ್ತಿಯೊಬ್ಬರ ಮೆದುಳಿನಿಂದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ ಆಗ್ನೇಯ ಚೀನಾದ 36 ವರ್ಷದ ವಾಂಗ್ ಎಂಬವರು ಬರೋಬ್ಬರಿ 15 ವರ್ಷಗಳಿಂದ ಈ ದಾರದಂತಹ ಹುಳುವಿನ ಕಾಟದಿಂದ ನಲುಗಿದ್ದರು. ಸುಮಾರು 12 ಸೆಂಟಿ ಮೀಟರ್‌ನಷ್ಟು ಉದ್ದವಿದ್ದ ಈ ಹುಳು ವಾಂಗ್ ಅವರ ಮೆದುಳನ್ನು ಸ್ವಲ್ಪ ಸ್ವಲ್ಪ ತಿಂದು ಹಾಕಿತ್ತು.
ವಾಂಗ್ ಅವರಿಗೆ ಬಸವನಹುಳು ತಿನ್ನುವುದೆಂದರೆ ಪಂಚಪ್ರಾಣ. ಆದರೆ, ಇದನ್ನು ತಿನ್ನಲು ಆರಂಭಿಸಿದ ಬಳಿಕ ಇವರಿಗೆ ನಿರಂತರ ವಾಂತಿ ಮಾಡಿಕೊಳ್ಳುವ ಸಮಸ್ಯೆ ಶುರುವಾಗಿತ್ತು. ಸುಮಾರು2007ರಲ್ಲಿ ವಾಂಗ್ ಅವರ ದೇಹದ ಎಡಭಾಗ ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಅಲ್ಲಿಂದ ಇವರು ಹಾಸಿಗೆ ಹಿಡಿದಿದ್ದರು. ಈ ಅವಧಿಯಲ್ಲಿ ತಜ್ಞ ವೈದ್ಯರನ್ನೇ ಸಂಪರ್ಕಿಸಿದರೂ ಸಮಸ್ಯೆಗೊಂದು ಪರಿಹಾರ ಸಿಕ್ಕಿರಲಿಲ್ಲ. ಒಂದು ಹಂತದಲ್ಲಿ ಮಾರಣಾಂತಿಕ ಮೆದುಳಿನ ಕ್ಯಾನ್ಸರಿಗೂ ಇವರು ಚಿಕಿತ್ಸೆ ಪಡೆದುಕೊಂಡಿದ್ದರು.
ವಾಂಗ್ ಸ್ಥಿತಿ ಪ್ರತಿಕ್ಷಣ ಕ್ಷಣಕ್ಕೂ ಹದಗೆಡುತ್ತಾ ಸಾಗಿತ್ತು. ಅಂತಿಮವಾಗಿ2018ರಲ್ಲಿ ವಾಂಗ್ ಅವರ ಮೆದುಳಿನಲ್ಲಿ ಮಾಂಸ ತಿನ್ನುವ ಟೇಪ್ ವರ್ಮ್ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದರು. ಜಾಸ್ತಿ ಬಸವನಹುಳು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದರಿಂದಲೇ ವಾಂಗ್ ಅವರಿಗೆ ಈ ಪರಾವಲಂಬಿ ಹುಳುವಿನ ಸಮಸ್ಯೆ ಕಾಡಲಾರಂಭಿಸಿತ್ತು ಎಂದೂ ವೈದ್ಯರು ತಿಳಿಸಿದ್ದರು.
ವೈದ್ಯರು ಹೇಳಿದಂತೆ ಈ ಪರಾವಲಂಬಿ ಹುಳು ಮೆದುಳಿನ ಅತ್ಯಂತ ಅಪಾಯಕಾರಿ ಭಾಗದಲ್ಲೇ ಇತ್ತು. ಶಸ್ತ್ರಚಿಕಿತ್ಸೆ ಮಾಡುವುದು ಸಾಧ್ಯವೇ ಇರಲಿಲ್ಲ. ಹೀಗಾಗಿ, ಶಸ್ತ್ರಚಿಕಿತ್ಸೆ ಮಾಡದೆ ಬೇರೊಂದು ವಿಧಾನದಲ್ಲಿ ಸೂಕ್ಷ್ಮವಾಗಿ ಈ ಹುಳುವನ್ನು ವೈದ್ಯರು ಹೊರತೆಗೆದಿದ್ದರು. ಇವರು ಮನೆಗೂ ಮರಳಿದ್ದರು. ಆದರೆ, ಇದಾದ ಬಳಿಕ ಮತ್ತೊಂದು ಶಾಕಿಂಗ್ ನ್ಯೂಸ್ ವಾಂಗ್ ಅವರಿಗೆ ಕಾದಿತ್ತು.
ಅಸಲಿಗೆ ಈ ಟೇಪ್ ವರ್ಮ್ ಸಂಪೂರ್ಣ ವಾಂಗ್ ಅವರ ಮೆದುಳಿನಿಂದ ಹೋಗಿರಲಿಲ್ಲ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಇವರಿಗೆ ಮತ್ತೆ ಅದೇ ರೀತಿ ಸಮಸ್ಯೆ ಕಂಡು ಬಂದಾಗ ವೈದ್ಯರು ಇನ್ನೊಂದು ಸಲ ತಪಾಸಣೆ ಮಾಡಿದ್ದರು. ಆಗ ಮತ್ತೆ ಈ ಹುಳು ವಾಂಗ್ ಮೆದುಳಿನಲ್ಲಿ ಜೀವಿಸುತ್ತಿರುವುದು ಕಂಡು ಬಂದಿತ್ತು. ಹೀಗಾಗಿ, ಈ ಸಲ ಅಪಾಯವಾದರೂ ಶಸ್ತ್ರಚಿಕಿತ್ಸೆ ಮಾಡಲೇಬೇಕಿತ್ತು. ಅಂತೆಯೇ ಚೀನಾದ ಗುವಾಂಗ್‌ಡಾಂಗ್ ಸಂಜಿಯು ಬ್ರೈನ್ ಆಸ್ಪತ್ರೆಯಲ್ಲಿ ವಾಂಗ್ ಅವರಿಗೆ ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆ ನಡೆಯಿತು. ಈ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ವಾಂಗ್ ತಲೆಯೊಳಗಿದ್ದ ಸ್ಪಾರ್ಗನಮ್ ಮಾನಸೋನಿ ಎಂಬ ಪರಾವಲಂಬಿ ಹುಳುವನ್ನು ತೆಗೆದ್ದಾರೆ.
ಸಾಮಾನ್ಯವಾಗಿ ಇದು ಬೆಕ್ಕು ಮತ್ತು ನಾಯಿಗಳಲ್ಲಿ ಕಂಡು ಬರುತ್ತವೆಯಂತೆ. ಆದರೆ, ಮನುಷ್ಯರಲ್ಲಿ ಈ ಹುಳು ಕಂಡು ಬರುವುದು ತೀರಾ ವಿರಳಾತಿ ವಿರಳ ಎನ್ನುತ್ತಾರೆ ವೈದ್ಯರು.ಇವರ ತಲೆಯೊಳಗಿದ್ದ ಎಲ್ಲಾ ಹುಳುಗಳನ್ನು ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ವಾಂಗ್ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ15 ವರ್ಷಗಳ ನರಕಯಾತನೆಯೂ ಕೊನೆಯಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗ್ತಿದ್ದೇನೆ ಅಂತಾ ಅಮ್ಮನಿಗೆ ಪತ್ರ ಬರೆದು ಹೋದ ಮಗಳ ನಿಜವಾದ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಮುಂಬೈನಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಅಮ್ಮನಿಗೆ ಈ ರೀತಿ ಪತ್ರ ಬರೆದಿದ್ದಾಳೆ. “ಅಮ್ಮಾ ನಾನು ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಹಾಗಂತ ನಾನು ಯಾವುದೋ ಹುಡುಗನೊಂದಿಗೆ ಓಡಿ ಹೋಗುತ್ತಿಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತಾ ದೇವರ ಮೇಲೆ ಆಣೆ ಮಾಡು” ಎಂದು ಪತ್ರದಲ್ಲಿ…
ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಆಟವಾಡುವುದೆಂದರೆ…ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ.. ಒಂದು ಕಾಲದಲ್ಲಿ ಬಯಲಲ್ಲಿ ಆಟವಾಡುತ್ತಿದ್ದ ಮಕ್ಕಳು ಈಗ ನಾಲಕ್ಕು ಗೋಡೆಗಳ ಮಧ್ಯೆ, ಆನ್ ಲೈನ್ ಆಟಗಳನ್ನು ಆಡುತ್ತಿದ್ದಾರೆ. ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ.
ಅಮೆರಿಕದ ಗೊಡಾರ್ಡ್ ನಗರದ ಪ್ರಾಥಮಿಕ ಶಾಲೆಯ ಏಳು ಶಿಕ್ಷಕಿಯರು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಏಳು ಶಿಕ್ಷಕಿಯರು 15 ರಿಂದ 1 ತಿಂಗಳ ಆಸುಪಾಸಿನಲ್ಲಿ ಏಕಕಾಲದಲ್ಲಿ ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಮಹಿಳಾ ಸಹದ್ಯೋಗಿಗಳು ಏಕಕಾಲದಲ್ಲಿ ತಾಯಿ ಆಗುತ್ತಿದ್ದೇವೆ. ಏಳು ಶಿಕ್ಷಕಿಯರು ಒಂದೇ ಬಾರಿ ಗರ್ಭಿಣಿ ಆಗಬೇಕೆಂಬುವುದು ದೇವರ ಇಚ್ಛೆ. ಶಿಕ್ಷಕಿ ಟಿಫನಿ ಎಂಬವರು ಮೂರನೇ ಬಾರಿ ಗರ್ಭಿಣಿಯಾಗಿದ್ದು, ಅವರಿಗೆ 9 ಮತ್ತು 7 ವರ್ಷದ ಮಕ್ಕಳಿವೆ ಎಂದು ಶಿಕ್ಷಕಿ ಕೈಟಿ ಸಂತಸ ವ್ಯಕ್ತಪಡಿಸುತ್ತಾರೆ. ನನ್ನ 20 ವರ್ಷದ…
ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೆಪ್ಟೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ತಜ್ಞರ ಮಾಹಿತಿ ಕೇಳಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಮಯೂನ್.ಎನ್ Published On – 25 May 2021 ಸಾಂದರ್ಭಿಕ ಚಿತ್ರ ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವವನ್ನೆ ಕಂಗಾಲಾಗಿಸಿದೆ. ಈಗಾಗಲೇ ಅದೆಷ್ಟೋ ಬಡ ಜೀವಿಗಳನ್ನು ಬಲಿ ಪಡೆದಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಕೊರೊನಾ ಆರ್ಭಟ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಎಲ್ಲವೂ ಮೊದಲಿನಂತೆ…
ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು.