ಸುದ್ದಿ

ಲಿಂಗೈಕ್ಯರಾದ ಜಗದ್ಗುರು ಮಾತೆ ಮಹಾದೇವಿ…

72

ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಸವ ಪೀಠದ ಅಧ್ಯಕ್ಷೆ 74 ವರ್ಷದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ.

ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾತೆ ಮಹಾದೇವಿ ಗುರು ಲಿಂಗಾನಂದ ಅವರಿಂದ ಪ್ರಭಾವಿತರಾಗಿ ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಇವರನ್ನು ಪ್ರಥಮ ಮಹಿಳಾ ಜಗದ್ಗುರು ಎಂದು ಭಕ್ತರು ಗುರುತಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದ ಮಹಾದೇವಿ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ ಮಾಡಿ ಜನಾನುರಾಗಿ ಕೆಲಸ ಆರಂಭಿಸಿದ್ದರು. 5 ನೇ ಏಪ್ರಿಲ್ 1966 ಜಂಗಮ ದೀಕ್ಷೆ ಪಡೆದ ಮಾತೆ ಮಹಾದೇವಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ, ಸ್ಪೂರ್ತಿ

    3 ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನ ಸಮಾಧಿ ಮಾಡಿದ, ಕಾರಣ ಮಾತ್ರ ಶಾಕಿಂಗ್.

    ಭೂಮಿಯ ಮೇಲೆ ಇರುವ ಅತ್ಯಮೂಲ್ಯ ಜೀವ ಅಂದರೆ ಅದೂ ಮಾನವ, ಇನ್ನು ಮನುಷ್ಯ ಸತ್ತು ಹೋದಾಗ ಆತನನ್ನ ಮಣ್ಣಿನಲ್ಲಿ ಸಮಾಧಿ ಮಾಡುತ್ತಾರೆ ಅಥವಾ ಆತನನ್ನ ಸುಟ್ಟು ಹಾಕುತ್ತಾರೆ. ಸ್ನೇಹಿತರೆ ಇಲ್ಲೊಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ತನ್ನ ಮೂರೂ ಕೋಟಿ ಬೆಲೆ ಬಾಳುವ ಐಷಾರಾಮಿ ಕರಣ ಮಣ್ಣಿನಲ್ಲೂ ಹೂತು ಮುಂದಾಗಿದ್ದಾನೆ, ಹಾಗಾದರೆ ಆ ಕಾರನ್ನ ಹೂತು ಹಾಕಲು ನಿರ್ಧರಿಸಲು ಕಾರಣ ಏನು ಮತ್ತು ಅದನ್ನ ನೋಡಿದ ಅಲ್ಲಿನ ಜನರು ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ…

  • ಸುದ್ದಿ

    ನಿದ್ರೆ ಮಾಡೋಕೂ 13 ಲಕ್ಷ ರೂ ಸಂಬಳ ನೀಡುತ್ತಂತೆ ನಾಸಾ.., ಆದ್ರೆ ಕಂಡೀಷನ್ಸ್ ಅಪ್ಲೈ!

    ನವದೆಹಲಿ: ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ ಸಂಬಳವಿದ್ರೆ..!ಇದು ಸಾಧ್ಯಾನಾ ಎಂದು ಮೂಗು ಮುರಿಯಬೇಡಿ.. ಖಂಡಿತಾ ಸಾಧ್ಯ. ಅದೂ ಕೂಡ ವಿಶ್ವದ ಪ್ರತಿಷ್ಠಿತ ಸಂಸ್ಥೆಯೊಂದು ನಿದ್ರೆ ಮಾಡುವವರಿಗೆ ಲಕ್ಷ ಲಕ್ಷ ರೂ ಸಂಬಳ ನೀಡುವುದಾಗಿ ಹೇಳಿದೆ, ಹೌದು ಅಧ್ಯಯನವೊಂದರ ನಿಮಿತ್ತ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ನಿದ್ರೆ ಮಾಡುವವರಿಗೆ 13 ಲಕ್ಷ ರೂ ಸಂಬಳ ನೀಡುವುದಾಗಿ ಘೋಷಣೆ ಮಾಡಿದೆ….

  • ರೆಸಿಪಿ

    ಚಳಿಗಾಲಕ್ಕೆ ಬಿಸಿ ಬಿಸಿ ಹಳ್ಳಿ ಶೈಲಿಯ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಮಾಡುವ ವಿಧಾನ ನೋಡಿ…

    ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ… ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ –…

  • ಉಪಯುಕ್ತ ಮಾಹಿತಿ

    ಶೂನ್ಯ ಬಂಡವಾಳದಲ್ಲಿ ಶುರುಮಾಡುಬಹುದಾದ 7 ಬುಸಿನೆಸ್..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಸಾಮಾನ್ಯವಾಗಿ ಸ್ವಂತ ಉದ್ಯೋಗ ಮಾಡುವವರು ಮೊದಲು ನೋಡುವುದು ಬಂಡವಾಳ‌.. ಹೌದು ದೊಡ್ಡ ಮಟ್ಟದ ಬಂಡವಾಳ ಹಾಕುವುದು ಎಲ್ಲರಿಂದಲೂ ಸಾಧ್ಯವಿಲ್ಲ ಅಂತವರು ಒಂದು ಹತ್ತು ಸಾವಿರ ರೂಪಾಯಿಗಳ ಒಳಗೆ ಬಂಡವಾಳ ಹೂಡಿ ಸ್ವಂತ ಉದ್ಯೋಗ ಮಾಡಬಹುದು.. ಆ ಉದ್ಯೋಗಗಳು ಇಲ್ಲಿವೆ ನೋಡಿ.. ಬ್ಲಾಗಿಂಗ್ ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್ನೆಟ್ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಬ್ಲಾಗ್ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ…

  • ದೇಶ-ವಿದೇಶ

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಈ 999 ಮೆಟ್ಟಿಲೇರಿದರೆ ಸಾಕು..!ತಿಳಿಯಲು ಈ ಲೇಖನ ಓದಿ…

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ…!

  • ಸುದ್ದಿ

    ಶಾಸಕರ ಮುಂದೆಯೆ ವಿದ್ಯಾರ್ಥಿನಿಯರಿಂದ ಬಿಇಓಗೆ ಸಕತ್ ಕ್ಲಾಸ್…! ಯಾಕೆ ಗೊತ್ತಾ?

    ನಿಮ್ಮನ್ನು ನಂಬಿ ಎಷ್ಟು ದಿನ ನಾವೂ ಹೀಗೆ ಶಾಲೆಗೆ ಬರಬೇಕು. ಅದೇಗೆ ಕಲಿತು ತಂದೆ ತಾಯಿಗೆ ಒಳ್ಳೆಯ ಹೆಸರು ತರೊಕಾಗುತ್ತದೆ? ಎಂದು ಶಾಸಕನ ಮುಂದೆ ವಿದ್ಯಾರ್ಥಿನಿ ಪೋನ್ ಮಾಡಿ ಬಿಇಓ ವೆಂಕಟೇಶ ಗುಡಿಯಾಳಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಮೊದಲು ವಿದ್ಯಾರ್ಥಿಗಳು ಶಾಸಕರಿಗೆ ನಮ್ಮ ಶಾಲೆಗೆ ಭೇಟಿ ಕೊಡಿ ಎಂದಿದ್ದರು. ವಿದ್ಯಾರ್ಥಿಗಳ ಕರೆಗೆ ಶಾಲೆಗೆ ಭೇಟಿ ನೀಡಿದ ಮಾನವಿ ಶಾಸಕ ರಾಜಾ…