ಸುದ್ದಿ

ನಾವು ಸಹ ಮಂಗಳ ಗ್ರಹಕ್ಕೆ ಹೋಗಬಹುದು ; ಇಲ್ಲಿದೆ ನೋಡಿ ಪೂರ್ತಿ ಮಾಹಿತಿ,.!!

19

ಮಂಗಳಗ್ರಹಕ್ಕೆ ನೀವು ಹೋಗಲು ಇಚ್ಚಿಸುವಿರಾ..? ಅಂತರಿಕ್ಷಕ್ಕೆ ತೆರಳಲು ತುಂಬಾ ಸಿದ್ಧತೆ ಮತ್ತು ಭಾರೀ ಹಣ ಬೇಕು. ಸಾಮಾನ್ಯ ಜನರು ಅಲ್ಲಿಗೆ ಹೋಗುವುದು ಕನಸಿನ ಮಾತು…! ಆದರೆ ಕೆಂಪುಗ್ರಹವನ್ನು ಹೋಲುವಂತೆ ಸ್ಥಳವೊಂದು ಈ ಭೂಮಂಡಲದಲ್ಲಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಉತ್ತರ ಸ್ಪೇನ್‍ನ ಗುಹೆಯೊಂದರಲ್ಲಿ ಮಂಗಳಗ್ರಹದ ಪರಿಸರವನ್ನು ಹೋಲುವ ಪ್ರತಿರೂಪವನ್ನು ಸೃಷ್ಟಿಸಲಾಗಿದೆ. ಆಸ್ಟ್ರೋಲ್ಯಾಂಡ್ಸ್ ಎಂಬ ಸಂಸ್ಥೆ ನಿರ್ಮಿಸಿರುವ ಏರ್ ಸ್ಟೇಷನ್ ಎಂಬ ಈ ಸ್ಥಳವು ಕೆಂಪು ಗ್ರಹಕ್ಕೆ ಅಂತರಿಕ್ಷಯಾನ ಕೈಗೊಂಡ ಅನುಭವ ನೀಡುತ್ತದೆ.

ಕಾಂಟಾಬ್ರಿಯಾದಲ್ಲಿನ ಅರ್ರೆದೊಂಡೊ ಎಂಬಲ್ಲಿ 1.5 ಕಿಲೋಮೀಟರ್ ಉದ್ದದ ಮತ್ತು 60 ಮೀಟರ್‍ಗಳಷ್ಟು ಎತ್ತರದ ಗುಹೆಯನ್ನು ಮಾನವರ ವಸತಿ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ. ಮಂಗಳಗ್ರಹದ ಪರಿಸರವನ್ನೂ ಇದು ತದ್ರೂಪು ಹೋಲುತ್ತದೆ. ಇದಕ್ಕಾಗಿ ವಿಜ್ಞಾನಿಗಳು, ವಾಸ್ತುಶಿಲ್ಪಿಗಳು ಮತ್ತು ಅಭಿವೃದ್ದಿಕಾರರು ಶ್ರಮವಹಿಸಿದ್ದಾರೆ. ಇಲ್ಲಿನ ತೀವ್ರ ಕಡಿಮೆ ತಾಪಮಾನ ಮತ್ತು ಮಂಗಳ ಗ್ರಹದಲ್ಲಿರುವಂತೆ ಕಾಸ್ಮಿಕ್ ಕಿರಣಗಳು ಅಂತರಿಕ್ಷದ ಅನುಭವ ನೀಡುತ್ತವೆ.

ಈ ಗುಹೆಯಲ್ಲಿ ಪ್ರವಾಸ ಮಾಡಲು ಇಚ್ಚಿಸುವವರು 20 ದಿನಗಳ ಆನ್‍ಲೈನ್ ಕೋರ್ಸ್‍ಗೆ ಒಳಗಾಗಬೇಕು ಹಾಗೂ ಗವಿಯಲ್ಲಿ ನಾಲ್ಕು ದಿನಗಳು ಮತ್ತು ಮೂರು ರಾತ್ರಿಗಳನ್ನು ಕಳೆಯುವುದಕ್ಕೆ ಮುನ್ನ ಮೂರು ದಿವಸಗಳ ತೀವ್ರ ತರಬೇತಿ ನೀಡಲಾಗುತ್ತದೆ. ಇದು ಹೆಚ್ಚುಕಡಿಮೆ ಗಗನಯಾತ್ರಿಗಳಿಗೆ ನೀಡುವ ಟ್ರೈನಿಂಗ್ ಮಾದರಿಯಲ್ಲೇ ಇರುತ್ತದೆ.ಗುಹೆಯಲ್ಲಿ ನೆಲೆಸುವ ವೇಳೆ ಗಗನಯಾತ್ರಿಗಳೆಂದು ಕರೆಯಲ್ಪಡುವ ಪ್ರವಾಸಿಗರು ಬಾಹ್ಯಾಕಾಶ ನಡಿಗೆ ಸಾಧನಗಳನ್ನು ಕೊಂಡೊಯ್ಯಬೇಕು.

ಈ ಗವಿಯಲ್ಲೂ ದೇಹ ತೂಕರಹಿತವಾಗಿರುವ ವಾತಾವರಣ ಸೃಷ್ಟಿಸಲಾಗಿದೆ. ಗುಹೆಯೊಳಗೆ ನಿರ್ಮಿಸಲಾಗಿರುವ ಪ್ರಯೋಗಾಲಯದಲ್ಲಿ ಪ್ರವಾಸಿಗರು ನಾಲ್ಕು ದಿನಗಳ ಕಾಲ ತಾವೇ ಆಹಾರ ತಯಾರಿಸಿಕೊಳ್ಳಬೇಕು. ಗುಹೆಯೊಳಗೆ ಪ್ರವೇಶಿಸಲು ಒಂದು ಬಾರಿ 10 ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು. ಗುಹೆಯೊಳಗೆ ಮಂಗಳ ಗ್ರಹದ ಅನುಭವ ಹೊಂದಲು ತಲಾ 6,600 ಡಾಲರ್ ಶುಲ್ಕ ಪಾವತಿಸಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ