ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಕಾಮಿಡಿ ನಟರಿದ್ದರೆ ಸಿನಿಮಾ ನೋಡಲು ಚೆಂದ ಹಾಗೆಯೇ ಕನ್ನಡದ ಖ್ಯಾತ ಕಾಮಿಡಿ ಕಲಾವಿದರಾದ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಎಲ್ಲರು ಒಟ್ಟಿಗೆ ಮನೆ ಮಾರಾಟಕ್ಕಿಟ್ಟಿರೋದು ಎಲ್ಲರಿಗು ಆಶ್ಚರ್ಯ ಇಷ್ಟಕ್ಕೂ ಎಲ್ಲರೂ ಒಟ್ಟಿಗೆ ಮನೆ ಮಾರಾಟಕ್ಕಿಟ್ಟಿರೋದಕ್ಕೆ ಕಾರಣವೇನು ಗೊತ್ತಾ ಆ ಮನೆಯಲ್ಲಿ ಭೂತ ಪ್ರೇತ ಬಾಧೆಗೀಡಾಗಿದೆ ಎಂದು ಹೇಳಿದ್ದಾರೆ ಇದು ತಮಾಷೆಯಲ್ಲಾ ಸತ್ಯ. ಇಂಥಾದ್ದು ಸಂಭವಿಸಿರೋದು ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಎಂಬ ಚಿತ್ರದ ವಿಚಾರದಲ್ಲಿ. ಇದರಲ್ಲಿ ಈ ನಾಲ್ವರು ಲೀಡ್ ಕಾಮಿಡಿ ನಟರು ಡಿಫರೆಂಟಾಗಿರೋ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ಮಾರಾಟಕ್ಕಿಟ್ಟಿರೋ ಮನೆಯೊಳಗಿನ ವಿಚಿತ್ರ ಬೂತಬಾಧೆಯಿಂದ ತಾವು ಕಂಗಾಲಾಗಿ ಪ್ರೇಕ್ಷಕರಲ್ಲಿ ನಗೆಯುಕ್ಕಿಸಲು ರೆಡಿಯಾಗಿದ್ದಾರೆ.

ಸಾಧು ಕೋಕಿಲಾ ಮತ್ತು ಚಿಕ್ಕಣ್ಣರಂಥಾ ನಟರನ್ನು ಈವರೆಗೂ ಕನ್ನಡದ ಪ್ರೇಕ್ಷಕರು ನಾನಾ ಪಾತ್ರಗಳಲ್ಲಿ ನೋಡಿದ್ದಾರೆ. ಆದರೆ ಇದೇ ವಾರ ಬಿಡುಗಡೆಯಾಗಲಿರುವ ಮನೆ ಮಾರಾಟಕ್ಕಿದೆ ಎಂಬ ಚಿತ್ರದಂಥಾ ಪಾತ್ರಗಳಲ್ಲಿ ಈ ಹಿಂದೆಂದೂ ನೋಡಿರಲು ಸಾಧ್ಯವೇ ಇಲ್ಲ ಅನ್ನೋದು ಚಿತ್ರತಂಡದ ವಿಶ್ವಾಸ. ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಟ್ರೇಲರ್‍ನಲ್ಲಿ ಇವರೆಲ್ಲರ ಪಾತ್ರಗಳ ಝಲಕ್‍ಗಳೂ ಸ್ಪಷ್ಟವಾಗಿಯೇ ಕಾಣಿಸಿವೆ. ಆದರೆ ಅದನ್ನೂ ಮೀರಿದ ಮಜಾ ಈ ಪಾತ್ರಗಳಿಂದ ಪ್ರೇಕ್ಷಕರಿಗೆ ಸಿಗಲಿದೆಯಂತೆ.

ಸಾಧು ಕೋಕಿಲಾ ಕನ್ನಡ ಚಿತ್ರರಂಗದ ಹೆಮ್ಮೆಯ ಪ್ರತಿಭಾವಂತ ಹಾಸ್ಯ ಕಲಾವಿದ. ಅವರೊಂದು ಸಿನಿಮಾದಲ್ಲಿ ನಟಿಸಿದ್ದಾರೆಂದರೆ, ಅದು ವಿಶೇಷವಾಗಿರುತ್ತದೆಂದೇ ಅರ್ಥ. ಅವರ ಪಾತ್ರದ ಮೇಲೆ ಅಗಾಧ ಪ್ರಮಾಣದಲ್ಲಿ ನಿರೀಕ್ಷೆಉಗಳೂ ಇರೋದು ಸುಳ್ಳಲ್ಲ. ಆದರೆ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಮಾತ್ರ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಸಾಧು ಮಹಾರಾಜರ ಪಾತ್ರ ಮೂಡಿ ಬಂದಿದೆಯಂತೆ. ಇಲ್ಲಿ ನಾಲಕ್ಕು ಹಾಸ್ಯ ಕಲಾವಿದರ ಪಾತ್ರವೂ ಕೂಡಾ ಒಂದಕ್ಕಿಂತ ಒಂದು ಚೆಂದ ಎಂಬಂತೆ ಮೂಡಿ ಬಂದಿದೆ ಎಂಬ ಭರವಸೆ ನಿರ್ದೇಶಕರಲ್ಲಿದೆ. ಅದೇನೆಂಬುದು ಇನ್ನು ದಿನದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…
ನೀವು ಎಲ್ಲೇ ಇರಿ, ಹೇಗೆ ಇರಿ, ನೀವು ಕುಳಿತ ಜಾಗದಿಂದಲೇ ನಿಮ್ಮ ಮೊಬೈಲ್ನಿ’ನಲ್ಲಿ ಜಾತಿ ಮತ್ತು ಆಧಾಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು… ನಿಮ್ಮಲ್ಲಿ ಸ್ಮಾರ್ಟ್ ಮೊಬೈಲ್ ಮತ್ತು ಅಂತರ್ಜಾಲ(Internet) ಇದ್ದಾರೆ ಸಾಕು…
ಇಷ್ಟು ದಿನ ಮಳೆಯ ಅಭಾವದಿಂದ ಸೋರಗಿ ಹೋಗಿದ್ದ ಮಲೆನಾಡಿನ ನದಿಗಳಿಗೆ ಜೀವಕಳೆ ಬಂದಿದೆ. ಪಶ್ಚಿಮಘಟ್ಟ ಸಾಲಿನ ಆರಿದ್ರಾ ಮಳೆಯ ಆರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 4-5 ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.. ಶೃಂಗೇರಿಯ ಕಪ್ಪೆ ಶಂಕರ ದೇಗುಲ…
ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಜಿಮ್ ನಲ್ಲಿ ಎಷ್ಟು ಕಸರತ್ತು ಮಾಡಿದ್ರೂ ಕೆಲವರ ತೂಕ ಮಾತ್ರ ಇಳಿಯೋದಿಲ್ಲ. ನಾವು ಇಂದು ಹೇಳುವ ಉಪಾಯದಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಜಿಮ್…
ಇಂದು ಭಾನುವಾರ, 18/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.