ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೌದು. ಉತ್ತರ ಪ್ರದೇಶ ರಾಜ್ಯದ ಆಗ್ರಾ-ಜೈಪುರ ಹೆದ್ದಾರಿಯ ಆಗ್ರಾದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಅಚ್ನೇರಾ ಬ್ಲಾಕ್‍ನ ಕುರಾಲಿ ತೆಹ್‍ಸಿಲ್‍ಯಲ್ಲಿನ ಚಹ್ ಪೋಕರ್ ಎಂಬ ಗ್ರಾಮದಲ್ಲಿ ಸುಮಾರು 50 ಮುಸ್ಲಿಂ ಕುಟುಂಬಗಳಿವೆ. ಅವರೆಲ್ಲರೂ ತಮ್ಮ ಕುಟುಂಬಸ್ಥರು ಯಾರದರೂ ಸತ್ತರೆ ಅವರನ್ನು ತಮ್ಮ ಮನೆಯಲ್ಲಿಯೆ ಸಮಾಧಿ ಮಾಡುವುದನ್ನು ರೂಡಿಸಿಕೊಂಡು ಬಂದಿದ್ದಾರಂತೆ. ಇದು ಯಾವುದೇ ಪದ್ಧತಿಯಲ್ಲ, ಬಲವಂತ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿರುವ 50 ಮುಸ್ಲಿಂ ಮನೆಗಳಲ್ಲಿ ಸುಮಾರು 300 ಜನಸಂಖ್ಯೆ ಹೊಂದಿದೆ. ಆದರೆ ಅವರಿಗೆ ಖಾಯಂ ಸ್ಮಶಾನ ಭೂಮಿ ಇಲ್ಲ. ಸ್ಮಶಾನ ಭೂಮಿಯ ಕೊರತೆಯಿರುವುದರಿಂದ ಯಾರೇ ಸತ್ತರೂ ಕುಟುಂಬದವರು ಅವರನ್ನು ಅವರ ಮನೆಯಲ್ಲಿಯೇ ಸಮಾಧಿ ಮಾಡುತ್ತಾರೆ. ಇಲ್ಲಿರುವ ಬಹುಪಾಲು ಮುಸ್ಲಿಮರು ಸ್ವಂತ ಭೂಮಿ ಇರದ ಕೂಲಿ ಕೆಲಸ ಮಾಡುವ ಕಡುಬಡವರು. ತಮ್ಮದೇ ಭೂಮಿ ಅಥವಾ ಜಮೀನು ಹೊಂದಿರುವವರು ತಮ್ಮ ಜಮೀನಿನಲ್ಲಿ ಸಮಾಧಿ ಮಾಡಬಹುದು.
ಮಾಧ್ಯಮಗಳೊಂದಿಗೆ ಮಾತನಾಡಿದ ರಿಂಕಿ ಬೇಗಂ, ವಿಪರೀತ ಜ್ವರದಿಂದ ಸತ್ತ ನನ್ನ 10 ತಿಂಗಳ ಮಗುವಿನಿಂದ ಹಿಡಿದು ನಮ್ಮ ಕುಟುಂಬದ ಐವರನ್ನು ನಾವು ಹಿತ್ತಲಿನಲ್ಲಿ ಸಮಾಧಿಮಾಡಿದ್ದೇವೆ ಎಂದರು.
ಗುಡ್ಡಿ ಎಂಬವರ ಮಾತನಾಡಿ, ನಮ್ಮಂತಹ ಬಡವರಿಗೆ ಸಾವಿಗೆ ಬೆಲೆಯಿಲ್ಲ. ಮನೆಯಲ್ಲಿ ಜಾಗದ ಕೊರತೆಯಿಂದ ಸತ್ತವರ ಸಮಾಧಿ ಮೇಲೆಯೇ ದಿನನಿತ್ಯ ಓಡಾಡುತ್ತೇವೆ ಹಾಗೂ ಅದರ ಮೇಲೆ ಕೂರುತ್ತೇವೆ ಎಂದು ಹೇಳುತ್ತಾರೆ.
ಅಡುಗೆ ಕೋಣೆಗಳಲ್ಲಿ, ಕೊಠಡಿಗಳಲ್ಲಿ, ಅಂಗಳದಲ್ಲಿ, ಮನೆಯ ಇಕ್ಕೆಲಗಳಲ್ಲಿ ಹಾಗೂ ಹಿತ್ತಲಿನಲ್ಲಿ ನಿರ್ಮಿಸಿರುವ ಸಮಾಧಿಗಳಲ್ಲಿ ಶವಗಳು ಕೊಳೆಯುವಾಗ ಉಂಟಾಗುವ ದುರ್ವಾಸನೆ ಹಾಗೂ ಮಾಲಿನ್ಯತೆಯನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ಜೊತೆಗೆ ಇದರಿಂದ ಮಾನಸಿಕ ಆಘಾತಗಳು ಕೂಡ ಕಾಡುತ್ತವೆ. ಪಕ್ಕದ ಊರಿನ ಮುಸ್ಲಿಂರು ಈ ಗ್ರಾಮಕ್ಕೆ ಕಾಲಿಡುವುದನ್ನೆ ಬಿಟ್ಟಿದ್ದಾರೆ. ಮಳೆಗಾಲದಲ್ಲಿ ಈ ಸಮಾಧಿಯಲ್ಲಿನ ಅವಶೇಷಗಳು ಹೊರಬರುವ ಸಾಧ್ಯತೆಗಳೂ ಇರುತ್ತವೆ.ಮುನೀಮ್ ಖಾನ್ ಮಾತನಾಡಿ, ನಮ್ಮ ಪೂರ್ವಜರಿಗಾಗಿ ಸ್ವಲ್ಪ ಜಾಗ ಕೊಡಿ ಎಂದು ನಾವು ಕೇಳಿಕೊಂಡಿದ್ದೇವೆ. ಹಿಂದುಗಳಿಗೆ ಸ್ಮಶಾನ ಜಾಗವಿದೆ ಆದರೆ ನಾವು ಸಮಾಧಿಯೊಂದಿಗೆ ವಾಸಿಸುತ್ತಿದ್ದೇವೆ ಎನ್ನುತ್ತಾರೆ.
ಈ ಹಿಂದೆ ಹಳ್ಳಿಗರ ಸಮಾಧಿಗಾಗಿ ಕೆರೆ ಇರುವ ಸ್ಥಳವನ್ನು ಆಡಳಿತ ಮಂಡಳಿ ನೀಡಿತ್ತು. ಆದರೆ ಆ ಕೆರೆಯನ್ನು ತೆರವುಗೊಳಿಸಿ ಅಲ್ಲಿ ಸಮಾಧಿಗೆ ಭೂಮಿಯನ್ನು ಸಿದ್ಧಪಡಿಸುವುದು ದುಬರಿ ಕೆಲಸವಾದುದರಿಂದ ಹೊಸ ಜಾಗವನ್ನು ಗುರುತಿಸುವುದಾಗಿ ಸರ್ಕಾರ ಹೇಳಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರೈತರು ಎದುರಿಸುತ್ತಿರುವ ಕಷ್ಟಗಳನ್ನ ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಲು ಸಿಂಧನೂರು ತಾಲೂಕಿನ ಯುವಕರೊಬ್ಬರು ತನ್ನ ರಕ್ತದಲ್ಲಿ ಎರಡು ಪತ್ರಗಳನ್ನ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಇನ್ನೂ ಹಲವಾರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸಾಲೂರು ಮಠದ ಸ್ವಾಮಿಗಳ ನಡುವಿನ ಒಳಜಗಳದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿಯ ಸ್ವಾಮೀಜಿ ಮಹಾದೇವಸ್ವಾಮಿ ಚಿತಾವಣೆ ಮೇರೆಗೆ ದೊಡ್ಡಯ್ಯ ಎಂಬಾತ…
ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳುತ್ತೇನೆ ಹೊರತು ರಾಜಕಾರಣದ ಜೊತೆಗಲ್ಲ. ದೇವೇಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಆಗಿದ್ದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಟ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಜೊತೆಯಾಗಿ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ…
ನನ್ನ ಹೆಸರು ಅಶ್ವಥ್ ಕುಮಾರ್ 42 ವರ್ಷ ವಯಸ್ಸು,ನಾನು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ವಾಸವಾಗಿರುವುದು. ನಾನು ಲೈಬ್ರರಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದು, 2016 ರಲ್ಲಿ ನನಗೆ ಸೊಂಟ ನೋವು ವಿಪರೀತ ಬರುತ್ತಿತ್ತು,ಮೂತ್ರ ಹೋಗಲೂ ಕಷ್ಟ ಆಗುತ್ತಿತ್ತು, ನಂತರ ಕೋಲಾರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದೆ ಆಗ ತಿಳಿಯಿತು …..
ಮೌಂಟ್ ಮೌಂಗನುಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಕಳೆದ ತಿಂಗಳು ಅತ್ಯಂತ ಕೆಳಮಟ್ಟದಲ್ಲಿರುವ ತಂಡವಾಗಿದ್ದು, ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಅನ್ನು ಎಂಟು ವಿಕೆಟ್ಗಳಿಂದ ಸೋಲಿಸಿತು. ಕ್ರಿಕೆಟ್ನಲ್ಲಿನ ಪವಾಡಗಳ ಪಟ್ಟಿಗೆ ಇದು ಒಂದು ಹೊಸ ಸೇರ್ಪಡೆ. ಬಾಂಗ್ಲಾದೇಶ ಟೆಸ್ಟ್ನಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಅನ್ನು ಸೋಲಿಸಿ 17 ಪಂದ್ಯಗಳ ಅಜೇಯ ತವರಿನ ದಾಖಲೆಯನ್ನು ಮುರಿಯಿತು. ಇದು ಅವರ ಆರನೇ ವಿದೇಶಿ ಟೆಸ್ಟ್ ಗೆಲುವು. ಆದರೆ ಅಂಕಿಅಂಶಗಳು, ಟ್ರಿವಿಯಾ ಮತ್ತು ಮೈಲಿಗಲ್ಲುಗಳಿಗಿಂತಲೂ ಹೆಚ್ಚು ಎದ್ದುಕಾಣುವ ಅಂಶವೆಂದರೆ ಬಾಂಗ್ಲಾದೇಶವು ನ್ಯೂಜಿಲೆಂಡ್ನಲ್ಲಿ ಹೇಗೆ…
ತುಂಬಾ ಕೂದಲು ಉದುರುತ್ತಿದೆ ಅಂತ ಚಿಂತೆ ಶುರುವಾಗಿದ್ಯಾ? ಕೂದಲು ಯಾಕೆ ಉದುರುತ್ತೆ? ಈ ಸಮಸ್ಯೆಗೆ ನೈಸರ್ಗಿಕ ಮದ್ದು ಏನು? ಯಾವೆಲ್ಲಾ ಆಹಾರವನ್ನೂ ಸೇವಿಸಬೇಕು? ಹೇಗೆ ಕೂದಲಿನ ರಕ್ಷಣೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದೀರಾ? ಏನಪ್ಪಾ ಮಾಡೋದು ಈ ಸಮಸ್ಯೆಗೆ ಅಂತ ಯೋಚನೆ ಮಾಡೋದನ್ನ ಬಿಡಿ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಅಂದ್ರೆ ಅದು ಹೇರ್ ಫಾಲ್. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ ಹಾಗೂ ಟೆನ್ಶನ್ನಿಂದ…