ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.ನಂಜನಗೂಡಿನ ಕಸುವಿನಹಳ್ಳಿ ಗ್ರಾಮ ನಿವಾಸಿ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ.ಈತ ಬೆಳವಾಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುವವನಾಗಿದ್ದು ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಸಿದ್ದರಾಜು ಬೆಳವಾಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಪೋಷಕರು ಈ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೆ ಯುವತಿ ಸಹ ಇತ್ತೀಚೆಗೆ ಆತನಿಂದ ದೂರಾಗಿ ಪೋಷಕರು ತೋರೊಸೊದ್ದ ಇನ್ನೊಬ್ಬ ಯುವಕನೊಡನೆ ಮದುವೆಗೆ ಸಿದ್ದವಾಗಿದ್ದಳು.

ಇದರಿಂದ ಸಿದ್ದರಾಜು ಮನನೊಂದಿದ್ದನು. ಇದೀಗ ತ್ಮಹತ್ಯೆ ಮಾಡಿಕೊಂಡಿರುವ ಸಿದ್ದರಾಜು ತಾನು ಸಾಯುವ ಮುನ್ನ ಸೆಲ್ಫಿ ವೀಡಿಯೋ ಮಾಡಿಟ್ಟು ಹೋಗಿದ್ದಾನೆ. ಆ ವೀಡಿಯೋದಲ್ಲಿರುವಂತೆ “ತನ್ನ ಪ್ರಿಯತಮೆಯೇ ನನಗೆ ವಿಷ ತಂದು ಕೊಟ್ಟು ಕುಡಿಯುವಂತೆ ಹೇಳಿದಳು. ಅಲ್ಲದೆ ತನ್ನ ಸಾವಿಗೆ ತಾನೇ ಕಾರಣವೆಂದು ಡೆತ್ ನೋಟ್ ಬರೆದಿಡುವಂತೆಯೂ ಹೇಳಿದ್ದಳು. ಎಂದು ವಿವರಿಸಿದ್ದಾನೆ. ಅಲ್ಲದೆ ತಾನು ಬರೆದ ಡೆತ್ ನೋಟ್ ಹಾಗೂ ಆಕೆ ತಂದಿದ್ದಳೆನ್ನಲಾದ ವಿಷದ ಬಾಟಲ್ ಸಹ ಪ್ರದರ್ಶಿಸಿದ್ದಾನೆ.

“ನನ್ನನ್ನು ಪ್ರೀತಿಸಿ ವಂಚಿಸಿದ ಆ ಯುವತಿ ಮದುವೆಯಾಗಬಾರದು, ಆಕೆ, ಆಕೆಯ ತಾಯಿ ಹಾಗೂ ಅಜ್ಜಿಯೇ ನನ್ನ ಸಾವಿಗೆ ನೇರ ಕಾರಣವಾಗಿದ್ದು ಆವರನ್ನೆಲ್ಲಾ ಜೈಲಿಗೆ ಹಾಕಬೇಕು” ಎಂದು ಯುವಕ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಘಟನೆ ಕುರಿತಂತೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.
ವಿಶ್ವದ ಅತ್ಯಂತ ದೊಡ್ಡ ಕಂಪನಿ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರುಗಳನ್ನು ದಾನ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ದಾನ ಮಾಡಿದ ಷೇರಿನ ಮೌಲ್ಯ 36 ಕೋಟಿ ರೂಪಾಯಿ ಎನ್ನಲಾಗಿದೆ. ಯಾರಿಗೆ ದಾನ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಿಂದಿನ ವರ್ಷ ಇಷ್ಟೇ ಷೇರನ್ನು ಕುಕ್, ಚಾರಿಟಿ ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದರು. ಆಪಲ್ ಪ್ರಕಾರ, ಕುಕ್ ಬಳಿ 854,849 ಷೇರುಗಳಿವೆ. ಇದ್ರ ಬೆಲೆ 17.6 ಕೋಟಿ ಡಾಲರ್ ಅಂದ್ರೆ ಸುಮಾರು…
ಮನುಷ್ಯರು ಟಾಯ್ಲೆಟ್ ನಲ್ಲಿ ಮೂತ್ರ ಮಾಡುತ್ತಾರೆ. ಆದರೆ ಪ್ರಾಣಿಗಳು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತದೆ. ಅದರಲ್ಲೂ ನಾಯಿಗಳು ವಾಹನಗಳ ಚಕ್ರಕ್ಕೆ ಅಥವಾ ಮರಕ್ಕೆ ತಾಗಿ ಮೂತ್ರ ಮಾಡುತ್ತದೆ. ಆದರೆ ಅದ್ಯಾಕೆ ಅನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.
ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡಿಜಿಟಲ್ ಪೇಮೆಂಟ್ ಮೊಬೈಲ್ ಆ್ಯಪ್ ಆಗಿರುವ ಭೀಮ್ ಅನ್ನು ಪ್ರಚಾರ ಪಡಿಸುವ ಸಲುವಾಗಿ ಕೇಂದ್ರ ಸರಕಾರ ಏ.14ರಿಂದ ನಾನಾ ಬಗೆಯ ಕ್ಯಾಶ್ ಬ್ಯಾಕ್ ಮತ್ತು ಇನ್ಸೆಂಟಿವ್ಗಳನ್ನು ನೀಡಲಿದೆ. ಭೀಮ್ ಆ್ಯಪ್’ನ್ನು ಪ್ರಧಾನಿ ನರೇಂದ್ರ ಮೋದಿಯವರು 30 ಡಿಸೆಂಬರ್ 2016ರಂದು ಬಿಡುಗಡೆ ಮಾಡಿದ್ದರು. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಹಣ ಪಾವತಿ ಮಾಡಲು ಬಳಸುವ ಆ್ಯಪ್ ಇದಾಗಿದೆ. ಈಗಾಗಲೇ ಒಂದು ವರ್ಷ ಪೂರೈಸಿರುವ ಈ ಭೀಮ್…
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ 2 ಹಂತದಲ್ಲಿ ಮತದಾನ ನಡೆದಿದ್ದು, ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಇದಕ್ಕೆ ನಿದರ್ಶನವೆನ್ನುವಂತೆ ಚುನಾವಣೆ ಆಯೋಗ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂ. ಜಪ್ತಿ ಮಾಡಿದೆ. ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಖರ್ಚು ವೆಚ್ಚದ ಮಾಹಿತಿ ನೀಡಿದ್ದು, ಆಯೋಗ ನಿಗದಿಪಡಿಸಿದ 70 ಲಕ್ಷ ರೂ. ಮಿತಿಯನ್ನು ಯಾರೂ ದಾಟಿಲ್ಲ. ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 33 ಲಕ್ಷ ರೂ. ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಜೆಡಿಎಸ್…