ಸುದ್ದಿ

ರಾಮ..ರಾಮ..ಮತ್ತೆ ಭಗವಾನ್ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಭಕ್ತರ ಕೆಂಗಣ್ಣಿಗೆ ಗುರಿಯಾದ ಪ್ರೊಫೆಸರ್ ಭಗವಾನ್..!

190

ತಾವು ಬುದ್ದಿವಂತರು ವಿಚಾರವಾದಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ದೇವತೆಗಳನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ. ಅವರಲ್ಲಿ ಒಬ್ಬರು ಪ್ರೊಫೆಸರ್ ಭಗವಾನ್. ಯಾವಾಗಲೂ ಹಿಂದೂ ದೇವತೆಗಳ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ವಿವಾದಾತ್ಮಕ ಕೊಟ್ಟು ಸುದ್ದಿಯಾಗುವ ಇವರು ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿದ್ದಾರೆ.

ವಿಚಾರವಾದಿ ಆಗಿರುವ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸಿ, ಭಕ್ತರ ಭಾವನೆಗಳನ್ನು ಕೆರಳಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರೊಫೆಸರ್ ಭಗವಾನ್‍ರವರು ರಾಮ ಮಂದಿರ ಏಕೆ ಬೇಡ? ಎಂಬ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ರಾಮನ ಬಗ್ಗೆ ವಿವಾದಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಮ, ಮಹಾತ್ಮ ಗಾಂಧೀಜಿ ಹಾಗೂ ಚಾಮುಂಡಿ ದೇವಿಯನ್ನು ಟೀಕಿಸಿದ್ದಾರೆ.

ಭಗವಾನ್‍ ರವರು ಬರೆದಿರುವ ಪುಸ್ತಕದಲ್ಲಿ ಏನೆಲ್ಲಾ ವಿವಾದಾತ್ಮಕ ಅಂಶಗಳಿವೆ ಗೊತ್ತಾ..?

ರಾಮ ಹಾಗೂ ಸೀತೆ ಮಾಂಸವನ್ನು ಸೇವಿಸುತ್ತಿದ್ದರು. ಮದ್ಯಪಾನವನ್ನು ಮಾಡುತ್ತಿದ್ದರು. ರಾಮ ತನ್ನ ಕೈಯಿಂದ ಸೀತೆಗೆ ಮದ್ಯಪಾನ ಮಾಡಿಸುತ್ತಿದ್ದ. ರಾಮ ಏಕಪತ್ನಿವ್ರತಸ್ಥ ಎನ್ನುವುದು ಕಟ್ಟುಕತೆ. ರಾಮ ಹುಡುಗಿಯರ ಹಾಗೂ ವನಿತೆಯರ ಜೊತೆ ಕುಡಿದು ನೃತ್ಯ ಮಾಡಿ, ಅವರನ್ನು ಸಂತೋಷ ಪಡಿಸುತ್ತಿದ್ದ. ರಾಮ ದೇವರೇ ಅಲ್ಲ, ಅವನೊಬ್ಬ ಕೊಲೆಗಡುಕ. ದಾಳಿಕೋರರಿಂದ ತಪ್ಪಿಸಿಕೊಳ್ಳಲಾಗದವರು, ದೇವರುಗಳೇ ಅಲ್ಲವೆಂದು ಉಲ್ಲೇಖಿಸಿದ್ದಾರೆ.

ಇದಲ್ಲದೇ ಕೃಷ್ಣ, ಶಿವ, ಚಾಮುಂಡಿ ಹಾಗೂ ಮಾರಮ್ಮರನ್ನು ಕಸದಂತೆ ತಿರಸ್ಕರಿಸಿ ಎಸೆಯಿರಿ. ಮಹಾತ್ಮ ಗಾಂಧೀಜಿಯೂ ಒಬ್ಬ ಮತಾಂಧ ಹಾಗೂ ಮೂಲಭೂತವಾದಿಯಾಗಿದ್ದಾನೆ. ಗಾಂಧೀಜಿ, ರಾಮ, ಗೀತೆ, ಚಾತುರ್ವರ್ಣ ಪ್ರತಿಪಾದಿಸಿದ್ದು, ಶೂದ್ರರಿಗೆ ಮಾಡಿದ ಮಹಾ ದ್ರೋಹ ಎಂದು ಬರೆದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • govt, modi

    ಗೋ ಮಾತೆ ರಕ್ಷಿಸಿವ ಪ್ರಯತ್ನ ಮಾಡಿದ ಭಾರತದ ಮೊದಲ ಧೈರ್ಯವಂತ ಪ್ರಧಾನಿ – ನಮೋ- ನಮೋ

    ದೇಶಾದ್ಯಂತ ಗೋ ಹತ್ಯೆ ನಿಷೇಧ, ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ, ಬಲಿಕೊಡಲು ಅಥವಾ ಕೊಲ್ಲಲು ಕೊಡುವಂತಿಲ್ಲ, ಕೇವಲ ರೈತರಿಗಷ್ಟೇ ಮಾರಾಟ ಮಾಡಬಹುದು ಯಾರಿಗೆ ಮಾರಾಟ ಮಾಡಿದೆ ಅನ್ನೋ ದಾಖಲೆ ಹೊಂದಿರಬೇಕು, ಮಾರಾಟ ಮಾಡಿದ ಮತ್ತು ಖರೀದಿ ಮಾಡಿದ ವ್ಯಕ್ತಿಗಳು ರಸೀದಿ ಹೊಂದಿರಬೇಕು.

  • ಸುದ್ದಿ

    ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಇಲಾಖೆ ನಿರ್ದೇಶಕ ಅಮಾನತು..!

    ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯದೆ ‘ಸಂವಿಧಾನ ದಿನಾಚರಣೆ’ಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿ, ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಕೆ.ಎಸ್‌.ಮಣಿ ಸೇರಿ ನಾಲ್ವರನ್ನು ಸರಕಾರ ಅಮಾನತು ಮಾಡಿದೆ. ಇಲಾಖೆಯು ನ.26ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಹಮ್ಮಿ ಕೊಂಡಿರುವ ‘ಸಂವಿಧಾನ ದಿನಾಚರಣೆ’ಯ ಜಾಗೃತಿ ಅಭಿಯಾನದ ಮಾರ್ಗ ದರ್ಶಿಗಳನ್ನು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿಕೊಟ್ಟಿತ್ತು. ಈ ಮಾರ್ಗದರ್ಶಿಯಲ್ಲಿ, ‘ಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ವಾಕ್ಯವನ್ನು ಸೇರಿಸಲಾಗಿತ್ತು. ಈ ಮಾರ್ಗಸೂಚಿಗಳನ್ನು…

  • ರಾಜಕೀಯ

    ನ್ಯಾಯ ಸಿಗದೇ ಆತ್ಮಹತ್ಯಗೆ ಪ್ರಯತ್ನಿಸಿ ಆಸ್ಪತ್ರೆ ಸೇರಿದ ಶಾಸಕ..!

    ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಶಿವಮೊಗ್ಗ  ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಜೊತೆ…

  • ಸುದ್ದಿ

    ಸರ್ಕಾರದಿಂದ ಗುಡ್ ನ್ಯೂಸ್. ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಬಂದಿದೆ ಹೊಸ ಮನೆಗಳು.

    ಈಗಿನ ಪರಿಸ್ಥಿತಿಯಲ್ಲಿ ಅದೆಷ್ಟೋ ಜನರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಇದ್ದಾರೆ ಮತ್ತು ಕೆಲವು ಜನರು ಸ್ವಂತ ಜಾಗ ಇಲ್ಲದೆ ಕೂಡ ಬಾಡಿಗೆ ಮನೆಯಲ್ಲಿ ವಾಸ ಇದ್ದಾರೆ, ಇನ್ನು ಈಗ ಸ್ವಂತ ಮನೆ ಇಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸ ಇರುವವರಿಗೆ ಕೇಂದ್ರ ಸರ್ಕಾರವು ಮತ್ತೇ ಬಂಪರ್ ಕೊಡುಗೆಯನ್ನ ನೀಡಿದೆ. ಹಲವು ಜನರಿಗೆ ನಗರ ಪ್ರದೇಶದಲ್ಲಿ ಮನೆಯನ್ನ ಖರೀದಿ ಮಾಡಬೇಕು ಅನ್ನುವ ಆಸೆ ಇದ್ದೆ ಇರುತ್ತದೆ ಮತ್ತು ನಗರ ಪ್ರದೇಶದಲ್ಲಿ ಮನೆ ಖರೀದಿ ಮಾಡಬೇಕು ಅಂದು…

  • ಜ್ಯೋತಿಷ್ಯ

    ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾದ ಪ್ರೇಮಿಗಳು….!

    75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್‍ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್‍ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್‍ರನ್ನು ಭೇಟಿ ಆಗಿದ್ದಾರೆ. ಪ್ರೀತಿ ಶುರುವಾಗಿದ್ದು ಹೇಗೆ? 1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ…

  • ಸುದ್ದಿ

    ನಮ್ಗೆ ಪ್ರಚಾರ ನಿಲ್ಲಿಸುವಂತೆ ಹೇಳುತ್ತಾರೆ..ಅವರಿಗೆ ಅವಧಿ ಮೀರಿದ್ರೂ ಪ್ರಚಾರ ಮಾಡಲು ಅವಕಾಶ ಕೊಡುತ್ತಾರೆ ಎಂದು ದೂರು ಕೊಟ್ಟ ಸುಮಲತಾ…

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆದ ಗೊಂದಲಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಮಾಹಿತಿ ತಿಳಿದುಕೊಳ್ಳಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾಗಿ ಅವರು ಹೇಳಿದ್ದಾರೆ ನಮಗೆ ರಾತ್ರಿ 9.30 ಕ್ಕೆ ಪ್ರಚಾರ ನಿಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ….