ಸುದ್ದಿ

ದುಡ್ಡಿನ ಆಸೆಗಾಗಿ ಹೆಣ್ಣನ್ನು ಅಶ್ಲೀಲವಾಗಿ ತೋರಿಸ್ತೀರಾ…, ‘ಐ ಲವ್ ಯು’ ಟೀಂ ವಿರುದ್ಧ ವೆಂಕಟ್ ಕಿಡಿ…!

243

ಐ ಲವ್ ಯು’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ಅವರ ಹಾಟ್ ದೃಶ್ಯದ ಸಾಂಗ್ ಬಗ್ಗೆ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ.

ನಿರ್ದೇಶಕ ಆರ್. ಚಂದ್ರು ವಿರುದ್ಧ ಕಿಡಿಕಾರಿರುವ ಹುಚ್ಚ ವೆಂಕಟ್, ಹೆಣ್ಣನ್ನು ಅಶ್ಲೀಲವಾಗಿ ತೋರಿಸಿ ಅದರಿಂದ ಬರುವ ದುಡ್ಡಿನಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ? ನಿಮ್ಮ ಮನೆಯಲ್ಲಿನ ಹೆಣ್ಣುಮಕ್ಕಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೀರಿ. ಬೇರೆಯವರ ಮನೆಯ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ತೋರಿಸುತ್ತೀರಿ ಎಂದು ಹರಿಹಾಯ್ದಿದ್ದಾರೆ.

ಆರ್. ಚಂದ್ರು ನಿರ್ದೇಶಿಸಿರುವ ‘ಐ ಲವ್ ಯು’ ಚಿತ್ರದಲ್ಲಿ ಉಪೇಂದ್ರ, ರಚಿತಾ ರಾಮ್ ಸೇರಿದಂತೆ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರ ಕಳೆದ ವಾರ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ದೃಶ್ಯಗಳ ಕುರಿತಾಗಿ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ.

ಸಿನಿಮಾ ನೋಡಿ ನಿಮ್ಮ ಮನೆಯವರು ಏನಂದ್ರು? ಚೆನ್ನಾಗಿ ಸಿನಿಮಾ ಮಾಡಿದ್ದೀರಿ ಅಂದ್ರಾ? ಸಂಸ್ಕೃತಿ, ಸಂಪ್ರದಾಯ ಬಿಟ್ಟು ಹೆಣ್ಣನ್ನು ಕೆಟ್ಟದಾಗಿ ತೋರಿಸಿದ್ದೀರಿ. ದುಡ್ಡಿಗಾಗಿ ಏನೆಲ್ಲಾ ಮಾಡ್ತೀರಿ ಅಲ್ವಾ? ರಚಿತಾ ರಾಮ್ ಬಗ್ಗೆಯೂ ಗರಂ ಆಗಿ ಮಾತನಾಡಿದ್ದಾರೆ. ನಿಮ್ಮಿಂದ ಹುಡುಗರು ಹಾಳಾಗ್ತಾರೆ. ಲವ್ ಅರ್ಥ ಗೊತ್ತಿಲ್ಲದೇ ರೊಮ್ಯಾನ್ಸ್ ಸಿನಿಮಾ ಮಾಡಿದ್ದೀರಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ