ಸುದ್ದಿ, ಸ್ಪೂರ್ತಿ

ಕೇವಲ ಒಂದೇ ವಾರದಲ್ಲಿ ತನ್ನ ಊರಿಗೆ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಮಾಂಜಿ..!

1542

ತನ್ನ ಹೆಂಡತಿಗಾಗಿ ರಸ್ತೆಯನ್ನೇ ನಿರ್ಮಿಸಿದ್ದ ಮಾಂಜಿಯ ಕಥೆ ನಮಗೆಲ್ಲಾ ಗೊತ್ತಿದೆ. ಇದೀಗ ಕೀನ್ಯಾದಲ್ಲೂ ಒಬ್ಬ ಮಾಂಜಿ ಇದ್ದಾರೆ. ಆದ್ರೆ, ಈತ ತನ್ನ ಹೆಂಡತಿಗಾಗಿ ಅಲ್ಲ, ಇಡೀ ಊರಿನ ಜನರಿಗೆ ನೆರವಾಗಲಿ ಅಂತ ತಾನೇ ರಸ್ತೆ ನಿರ್ಮಿಸಿ ಈಗ ಎಲ್ಲರ ದೃಷ್ಟಿಯಲ್ಲೂ ಹೀರೋ ಆಗಿದ್ದಾರೆ.

ಕೀನ್ಯಾದ ಕಗಂಡಾ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶವಿದೆ. ಅದರ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ಸರಿಯಾದ ರಸ್ತೆಯೇ ಇರಲಿಲ್ಲ. ಈ ಬಗ್ಗೆ ಗ್ರಾಮದ ನಿಕೋಲಸ್ ಮುಚಾಮಿ ಹಲವು ಬಾರಿ ಸರ್ಕಾರಕ್ಕೆ ಹಾಗೂ ಸ್ಥಳೀಯ ನಾಯಕರಿಗೆ ಮನವಿ ಮಾಡಿದ್ದರು.

ಊರಿನಿಂದ ಶಾಪಿಂಗ್ ಸೆಂಟರ್, ಚರ್ಚ್, ಬೇರೆ ಏನೇ ಬೇಕಂದ್ರೂ ಹೋಗೋಕೆ ಕಷ್ಟವಾಗುತ್ತೆ, ಸರಿಯಾದ ರಸ್ತೆ ನಿರ್ಮಿಸಿ ಕೊಡಿ ಅಂತ ಕೇಳಿದ್ರೂ ಯಾರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಮುಚಾಮಿ ತಾವೇ ಖುದ್ದು ಒಂದು ಕಿಲೋಮೀಟರ್ ದೂರ ರಸ್ತೆ ನಿರ್ಮಿಸಿದ್ದಾರೆ. ಕಡಿದಾದ ಗುಡ್ಡ, ಕಾಡು ಇರುವ ಮಾರ್ಗದಲ್ಲಿ ಮರಗಳನ್ನ ಕಡಿದು, ತನ್ನ ಬಳಿ ಇದ್ದ ಕೃಷಿ ಉಪಕರಣಗಳ ನೆರವಿನಿಂದಲೇ ಮುಚಾಮಿ 1 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಿಸಿದ್ದಾರೆ.

ಇದರಿಂದಾಗಿ ಈಗ ಇಲ್ಲಿನ ಜನ ಸುಲಭವಾಗಿ ರಸ್ತೆ ಬಳಸಿ ಕಗಂಡಾ ಶಾಪಿಂಗ್ ಸೆಂಟರ್​​ಗೆ ಹಾಗೂ ಚರ್ಚ್​ಗೆ ಹೋಗಬಹುದು. ಜನರ ಸಮಯ ಉಳಿಸಲು ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗಲಿ ಅಂತ ನಾನು ಈ ರಸ್ತೆ ನಿರ್ಮಿಸಿದೆ ಅಂತ ಮುಚಾಮಿ ಹೇಳ್ತಾರೆ. ಇದಕ್ಕಾಗಿ 6 ದಿನಗಳ ಕಾಲ ಏಕಾಂಗಿಯಾಗಿ ಕಷ್ಟಪಟ್ಟಿದ್ದು, ಪ್ರತಿನಿತ್ಯ ಬೆಳಗ್ಗೆ 6ರಿಂದ ಸಂಜೆ 6ವರೆಗೂ ಶ್ರಮ ವಹಿಸುತ್ತಿದ್ದರಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಹಸಿದ ಬಾಲಕನಿಗೆ ಊಟ ನೀಡಿದಕ್ಕೆ ವೇಯ್ಟರ್‌ ಗೆ ʼಶಿಕ್ಷೆʼ….!

    ಶಾಲಾ ಬಾಲಕನೊಬ್ಬ ಎಂಟು ಡಾಲರ್ ಮೌಲ್ಯದ ಊಟ ಮಾಡಿ, ಬಳಿಕ‌ ಹಣ ಪಾವತಿಸಲು ಸಾಧ್ಯವಾಗಿಲ್ಲವೆಂದು‌ ಸರ್ವ್ ಮಾಡಿದ ಲಂಚ್ ಲೇಡಿಯನ್ನು ‌ವಜಾಗೊಳಿಸಿರುವ ಘಟನೆ ನಡೆದಿದೆ. ಈ‌ ಘಟನೆ ನ್ಯೂ ಹ್ಯಾಮ್‌ಶೈರ್ ಭಾಗದ ಮಸ್ಕೋಮಾ ವ್ಯಾಲಿಯಲ್ಲಿರುವ ಶಾಲಾ ಭಾಗದಲ್ಲಿ ನಡೆದಿದೆ. ಬೋನಿ‌ ಕಿಂಬಲ್ ಎನ್ನುವ ಲಂಚ್ ಲೇಡಿ, ಬಾಲಕ ಕೇಳಿರುವ ಆಹಾರ‌ ಒದಗಿಸಿದ್ದಾಳೆ. ಆದರೆ ತಿಂದ ಬಳಿಕ ಪಾವತಿಸಲು ಬಾಲಕನ ಬಳಿ ಹಣವಿಲ್ಲ. ಆದ್ದರಿಂದ ಹಣವಿಲ್ಲದ ಬಾಲಕನಿಗೆ ಆಹಾರ ನೀಡಿದ್ದಕ್ಕೆ ಆಕೆಯನ್ನು ವಜಾಗೊಳಿಸಲಾಗಿದೆ. ಈ‌ ವಿಷಯ ಹರಡುತ್ತಿದ್ದಂತೆ ವಿದ್ಯಾರ್ಥಿಗಳು…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 14 ಜನವರಿ, 2019 ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು…

  • ದೇಗುಲ ದರ್ಶನ, ದೇವರು, ದೇವರು-ಧರ್ಮ

    ಪರಮಪೂಜ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ.

    ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ…

  • ಉಪಯುಕ್ತ ಮಾಹಿತಿ

    ಮೊಟ್ಟೆ ಚಿಪ್ಪು ಬಿಸಾಡಬೇಡಿ!ಮತ್ತೆ ತಿನ್ನೋಕೆ ಆಗುತ್ತಾ ಅಂತೀರಾ!ಈ ಲೇಖನ ಓದಿ ಶೇರ್ ಮಾಡಿ…

    ಮೊಟ್ಟೆ ಪೌಸ್ಟಿಕವಾದ ಆಹಾರ.ನಾವು ಸಾಮಾನ್ಯವಾಗಿ ಮೊಟ್ಟೆ ಬೇಯಿಸಿದಾಗ ಅಥವಾ ಆಮ್ಲೆಟ್ ಮಾಡಲು ಹೋದಾಗ ಮೊಟ್ಟೆ ಹೊಡೆದು ಮೊಟ್ಟೆ ಚಿಪ್ಪನ್ನು ಬಿಸಾಡುತ್ತೇವೆ.

  • ಸಿನಿಮಾ

    ಚಿತ್ರೀಕರಣದ ಸೆಟ್ ನಲ್ಲೇ ಕುರಿ ಬಲಿ ನೀಡಿದ್ರಾ ರಾಧಿಕಾ ಕುಮಾರಸ್ವಾಮಿ!ಕಾರಣ ಏನು ಗೊತ್ತಾ?

    ನಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿದ್ದು  ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದಲ್ಲಿ ಕಾಳಿಮಾತೆಯ ಅವತಾರ ತಾಳಿದ್ದ ರಾಧಿಕಾ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುವ ವೇಳೆ ಗೋರಿ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡಿದ್ದರು. ಅಂದು ಅಮಾವಾಸ್ಯೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಚಿತ್ರತಂಡಕ್ಕೆ ಅಡ್ಡಿಯಾಗಿದೆ. ಹೀಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಕುರಿಬಲಿ ನೀಡಲಾಗಿದೆ ಎಂಬ ಸುದ್ದಿ…