ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಶಕಗಳ ಹಿಂದೆ ಅಪರ್ಣಾ ಎಂದರೇ ನೆನಪಾಗುವುದು ಅಚ್ಚ ಕನ್ನಡದಲ್ಲಿ ಮಾತನಾಡುವ ಹೆಮ್ಮೆಯ ಕನ್ನಡತಿ. 90ರ ದಶದಲ್ಲಿ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಲವು ಕಾರ್ಯಕ್ರಮಗಳ ನಿರೂಪಕರಾಗಿ ಕೆಲಸ ಮಾಡಿ ತಮ್ಮನ್ನು ತಾವು ಸ್ಥಾಪಿಸಿಕೊಂಡ್ಡಿದ್ದರು. ಅವರ ಅಚ್ಛ ಕನ್ನಡದ ನಿರೂಪಣೆ ಎಲ್ಲರಿಗೂ ಬಹಳ ಇಷ್ಟುವಾಗುತ್ತಿತ್ತು. ಅದೆಷ್ಟೋ ಜನರಿಗೆ ತಿಳಿದಿಲ್ಲ ಬೆಂಗಳೂರು ಮೆಟ್ರೊದಲ್ಲಿ ಮಾಡಿದ ಪ್ರಯಾಣಿಕರ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್‌ನ ದಾಖಲೆಯ ಪ್ರಕಟಣೆಗಳಿಗಾಗಿ ಅಪರ್ಣಾ ಧ್ವನಿ ನೀಡಿದ್ದಾರೆ ಎಂಬುದು.

ಕನ್ನಡದ ದಿಗ್ಗಜ ನಟರಾದ ಡಾ.ವಿಷ್ಣುವರ್ಧನ್, ಅಂಬರೀಶ್, ಆರತಿ, ಜೈಜಗದೀಶ್, ವಜ್ರಮುನಿ, ಪದ್ಮಾವಾಸಂತಿ ಸೇರಿದಂತೆ ಹಲವು ತಾರೆಯರನ್ನು ಕನ್ನಡ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟವರು ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್. ಇವರು ನಿರ್ದೇಶನದ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಪ್ರತಿಭಾವಂತೆ ಅಪರ್ಣಾ ಅವರು.

1984 ರಲ್ಲಿ ಪುಟ್ಟಣ್ಣ ಕಣಗಲ್ ಅವರ ಚಲನಚಿತ್ರ ಮಸನದ ಹೂವು ಚಿತ್ರದಲ್ಲಿ ಅಪರ್ಣಾ ತಮ್ಮ ಚೊಚ್ಚಲ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಅಂಬರೀಶ್ ಮತ್ತು ಜಯಂತಿ ಅವರೊಂದಿಗೆ ನಟಿಸಿದ್ದಾರೆ. ಬಳಿಕ ಚಲನಚಿತ್ರಗಳಿಗಾಗಿ ಬಣ್ಣ ಹಚ್ಚಿದ್ದು ಅಪರೂಪ. ಆಲ್ ಇಂಡಿಯಾ ರೇಡಿಯೋ ಮತ್ತು ಎಫ್.ಎಂ.ರೇನ್ ಬೋದಲ್ಲಿ ರೇಡಿಯೋ ಜಾಕಿ ಆಗಿ ಕಾರ್ಯ ನಿರ್ವಹಿಸಿದ ಅಪರ್ಣಾ, ಡಿಡಿ ಚಂದನ ವಾಹಿನಿಯ ಹಲವು ಕಾರ್ಯಕ್ರಮಗಳಿಗೂ ನಿರೂಪಣೆ ಮಾಡಿದ್ದಾರೆ.

ಅಲ್ಲದೆ ದೈನಂದಿನ ಧಾರಾವಾಹಿಗಳಾದ ಮುಕ್ತ , ಮೂಡಲಮನೆ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು. ಆದರೆ ಹೆಚ್ಚು ಜನಪ್ರಿಯತೆ ಗಳಿಸಿದ್ದು ಸೃಜನ್ ಲೋಕೇಶ್ ಅವರ ನೇತೃತ್ವದಲ್ಲಿ ಬರುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮದಲ್ಲಿ ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಅಪರ್ಣಾ ಅವರಿಗೆ ಕಾಮಿಡಿ ಚಿತ್ರಗಳು ಇದೀಗ ಹುಡುಕಿಕೊಂಡು ಬರುತ್ತಿವೆ. ಆದರೆ ಒಂದು ಕಾಲದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮವನ್ನು ಬಿಟ್ಟು ಬಿಡೋಣ ಎಂದು ನಿರ್ಧಾರ ಮಾಡಿದ್ದರಂತೆ.

ಮಜಾ ಟಾಕೀಸ್’ನಲ್ಲಿ ವರಲಕ್ಷ್ಮಿ ಆಗಿ ಕಾಣಿಸಿಕೊಂಡ ಮೇಲೆ ಅಪರ್ಣಾ ಟ್ರೋಲ್ ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಪರ್ಣಾ ಬಗ್ಗೆ ಕೆಲವರು ನೆಗೆಟಿವ್ ಕಾಮೆಂಟ್ ಹಾಕಿದ್ದರು. ಆಗ ಬೇಸರಗೊಂಡಿದ್ದ ಅಪರ್ಣಾ ‘ಮಜಾ ಟಾಕೀಸ್’ ಕಾರ್ಯಕ್ರಮವನ್ನು ಬಿಡಲು ಮುಂದಾಗಿದ್ದರು. ಬಳಿಕ ನೆಗೆಟಿವ್ ಗಿಂತ ಪಾಸಿಟಿವ್ ಟಾಕ್ ಹೆಚ್ಚಿದೆ ಅಂತ ಸೃಜನ್ ಲೋಕೇಶ್ ಮನವೊಲಿಸಿದ ಮೇಲೆ ಕಾರ್ಯಕ್ರಮದಲ್ಲಿ ಅಪರ್ಣಾ ಮುಂದುವರೆದರು.

ಹೀಗೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಅಪರ್ಣಾ ಅವರಿಗೆ ಕಾಮಿಡಿ ಸಿನಿಮಾಗಳು ಸಾಲು ಸಾಲು ಬರುತ್ತಿವೆಯಂತೆ. ಆದರೆ ಕಾಮಿಡಿ ಸಿನಿಮಾಗಳಲ್ಲಿ ನಟಿಸಲು ಒಲವು ಹೊಂದಿರದ ಅಪರ್ಣಾ ಈ ಸಿನಿಮಾಗಳನ್ನೆಲ್ಲ ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ ಕಾಮಿಡಿ ಸಿನಿಮಾಗಳನ್ನು ರಿಜೆಕ್ಟ್ ಮಾಡಲು ಕಾರಣವೇನೆಂದರೆ ”ಜನರನ್ನು ನಗಿಸುವುದು ಸುಲಭ ಅಲ್ಲ. ಅದು ತುಂಬಾ ಕಷ್ಟದ ಕೆಲಸ. ನಾನು ಕಾಮಿಡಿಯನ್ ಅಲ್ಲ. ಆದ್ದರಿಂದ ನಾನು ಕಾಮಿಡಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ” ಎನ್ನುತ್ತಾರೆ ಅಪರ್ಣಾ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವ್ಯಕ್ತಿಯೋರ್ವನ ತಪಾಸಣೆಯ ಸಮಯದಲ್ಲಿ, ಒಂದು ವೇಳೆ ಆತನಿಗೆ ಅಥವಾ ಆಕೆಗೆ ಕ್ಯಾನ್ಸರ್ ಇದೆ ಎಂದು ದೃಢಪಟ್ಟರೆ, ಅವರು ತಮ್ಮ ಭವಿಷ್ಯ ಜೀವನದ ಕುರಿತು ವೈರಾಗ್ಯ ಭಾವವನ್ನು ಹೊಂದುವಂತಾಗುತ್ತದೆ. ಅಂತಹ ಭೀಷಣ ರೋಗ ಈ ಕ್ಯಾನ್ಸರ್.
ಎಲ್ಪಿಜಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಎಲ್ಪಿಜಿ ಡೀಲರ್ಬಳಿಯೇ ಹೋಗಬೇಕೆಂದೇನಿಲ್ಲ. ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ಜತೆಗೆ ಈ ಪ್ರಕ್ರಿಯೆಯನ್ನುಪೂರ್ತಿಯಾಗಿ ಡಿಜಿಟಲೀಕರಣ ಮಾಡಿರುವುದರಿಂದ, ಅಗತ್ಯವಿರುವವರು ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆಡೀಲರ್ ಬಳಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸುವುದು ಕಿರಿಕಿರಿ ಪ್ರಕ್ರಿಯೆ ಎನ್ನಿಸಿದರೆ, ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ದೇಶದ ಪ್ರಮುಖ 3 ಎಲ್ಪಿಜಿ ಪೂರೈಕೆದಾರ ಕಂಪನಿಗಳ ವೆಬ್ಸೈಟ್ ಮೂಲಕ ಹೊಸ ಎಲ್ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. ಜತೆಗೆ ಪ್ರತಿ ಕಂಪನಿಗಳು ಕೂಡ ಪ್ರತ್ಯೇಕ ಆ್ಯಪ್ ಹೊಂದಿದ್ದು, ಅದರ…
ಎಲೊನ್ ಮಸ್ಕ್ ಅವರ ಟೆಸ್ಲಾ ಮೋಟಾರ್ಸ್ ಸದ್ಯದಲ್ಲೇ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಭಾರತದ ರಸ್ತೆಗಿಳಿಸುವುದಾಗಿ ಹೇಳಿದೆ. ಇನ್ನೊಂದ್ಕಡೆ ನಟ ರಿತೇಶ್ ದೇಶ್ಮುಖ್ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್ ಯು ವಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ ಸಿನಿಪ್ರಿಯರ ಬಹುದಿನಗಳ ಕನಸು ಏನೆಂದರೆ, ದರ್ಶನ್ ಮತ್ತು ಸುದೀಪ್ ಒಟ್ಟಿಗೆ ನಟಿಸುವುದು! ಬೆಳ್ಳಿತೆರೆ ಮೇಲೆ ಅವರಿಬ್ಬರನ್ನು ಏಕಕಾಲಕ್ಕೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಇಬ್ಬರು ಕನ್ನಡದ ಸ್ಟಾರ್ ನಟರು. ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಅವರಿಬ್ಬರು ಒಟ್ಟಿಗೆ ನಟಿಸಿಬಿಟ್ಟರೆ? ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಅದಿನ್ನೂ ಸಾಧ್ಯವಾಗಿಲ್ಲ. ಮುಂದೆ ಯಾವತ್ತು ಆಗುತ್ತದೆಯೋ ಅದು ಗೊತ್ತಿಲ್ಲ. ಆದರೆ, ಬಹುವರ್ಷಗಳ ಈ ಹಿಂದೆ ಸ್ಟಾರ್ ನಟರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನವೊಂದು ನಡೆದಿತ್ತು! ಅವರಿಬ್ಬರು…
ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ…
ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ.