ಮನರಂಜನೆ

ಮಜಾಭಾರತಕ್ಕೆ ಬಂದ ಜೂನಿಯರ್ ದರ್ಶನ್ ನೋಡಿ ಶಾಕ್ ಆದ ರಚಿತಾ ರಾಮ್!ಜೂನಿಯರ್ ದರ್ಶನ್ ನಲ್ಲಿ ಇಟ್ಟ ಬೇಡಿಕೆ ಏನು ಗೊತ್ತಾ..?

444

ಪ್ರತಿಯೊಬ್ಬ ಸ್ಟಾರ್ ನಟರಂತೆ ಕಾಣುವ ಒಬ್ಬೊಬ್ಬ ಜೂನಿಯರ್ ನಟ ಇರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹಾವ-ಭಾವ ನೋಡಿ ಅವರಂತಯೇ ಮಾತನಾಡುವುದು, ಲುಕ್ ಹಾಗೂ ವಾಕಿಂಗ್ ಸ್ಟೈಲ್ ಅನ್ನು ಅನುಸರಿಸುತ್ತಾರೆ. ಈಗ ಅದೇ ರೀತಿ ಜೂನಿಯರ್ ದರ್ಶನ್ ನೋಡಿ ನಟಿ ರಚಿತಾ ರಾಮ್ ಶಾಕ್ ಆಗಿದ್ದರು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ನಂತರ ಇದೀಗ ಮಜಾಭಾರತ ಸೀಸನ್ ಮೂರು ಶುರುವಾಗಿದೆ.. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಂತೆಯೇ ಕಾಣುವ ಜೂನಿಯರ್ ದರ್ಶನ್ ಬಂದಿದ್ದರು. ಅಲ್ಲಿ ಅವರನ್ನು ನೋಡಿ ರಚಿತಾ ರಾಮ್ ಶಾಕ್ ಆಗಿದ್ದರು. ವಿಶೇಷವೆಂದರೆ ಈತ ಥೇಟ್ ದರ್ಶನ್ ಅವರಂತೆಯೇ ಇದ್ದು, ನಡೆಯುವ ಶೈಲಿ ಮಾತನಾಡುವ ರೀತಿ ಪ್ರತಿಯೊಂದೂ ಕೂಡ ದರ್ಶನ್ ಅವರಂತೆಯೇ..

ಅವಿನಾಶ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ವೃತ್ತಿಯಲ್ಲಿ ಆಟೋ ಡ್ರೈವರ್ ಕೆಲಸ ಮಾಡುತ್ತಿದ್ದಾರೆ. ಅವಿನಾಶ್ ನಟ ದರ್ಶನ್ ಅಭಿಮಾನಿಯಾಗಿದ್ದು, ಅವರ ಮಾತು, ವಾಕಿಂಗ್ ಸ್ಟೈಲ್ ಮತ್ತು ಲುಕ್ ಇತ್ಯಾದಿ ಎಲ್ಲವನ್ನು ಅನುಸರಿಸಿ ಅವರಂತೆಯೇ ಇರುತ್ತಾರೆ. ಆದ್ದರಿಂದ ಜೂನಿಯರ್ ದರ್ಶನ್ ಥರ ಕಾಣುತ್ತಾರೆ.

ಅವಿನಾಶ್ ಕಾರ್ಯಕ್ರಮಕ್ಕೆ ದರ್ಶನ್ ರೀತಿ ನಡೆದುಕೊಂಡು ಬಂದು ಅವರ ಸಿನಿಮಾದ ಡೈಲಾಗ್ ಹೇಳುತ್ತಾರೆ. ಇದನ್ನೆಲ್ಲಾ ನೋಡಿದ ರಚಿತಾ ರಾಮ್ ಶಾಕ್ ಆಗಿ ಹತ್ತಿರ ಬಂದು ಅವಿನಾಶ್‌ಗೆ ಶೇಖ್ ಹ್ಯಾಂಡ್ ಮಾಡಿ ಮಾತನಾಡಿಸಿದ್ದಾರೆ..

ನಟಿ ರಚಿತಾ ರಾಮ್ ಜೊತೆ ಅವಿಶಾನ್ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಆಗ ರಚಿತಾ ಅವರು, ನಿಮ್ಮ ದರ್ಶನ್ ಸ್ಟೈಲ್ ಚೇಂಜ್ ಮಾಡಿಕೊಳ್ಳಿ, ನಿಮ್ಮತರ ಇರಿ ಎಂದು ಖುಷಿಯಿಂದ ಹೇಳಿದ್ದಾರೆ… ಸಾಮಾನ್ಯವಾಗಿ ಸ್ಟಾರ್ ಗಳ ವಾಯ್ಸ್ ಗಳನ್ನು ಇಮಿಟೇಟ್ ಮಾಡುತ್ತಾರೆ.. ಅಥವಾ ಅವರಂತೆ ಆಕ್ಟ್ ಮಾಡುತ್ತಾರೆ.. ಆದರೆ ಅವಿನಾಶ್ ಅವರ ಮಾತು ಇರುವ ಶೈಲಿ ಎಲ್ಲವೂ ದರ್ಶನ್ ಅವರಂತೆಯೇ ಇದೆ..

ಕೊನೆಗೆ ನೀವು ಜೀವನದಲ್ಲಿ ದರ್ಶನ್ ಅವರ ರೀತಿ ಸಾಧನೆ ಮಾಡಿ, ಅವರಂತೆಯೇ ದೊಡ್ಡ ಮಟ್ಟಕ್ಕೆ ಹೋಗಿ ಎಂದು ಶುಭ ಕೋರಿದ್ದಾರೆ..ಅಂದಹಾಗೆ ಆಟೋ ಓಡಿಸುತ್ತಿದ್ದ ಅವಿನಾಶ್ ಕೂಡ ಮಜಾಭಾರತ ಕಾಮಿಡಿ ಷೋ ನಲ್ಲಿ ಸ್ಪ್ರಧಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ