ಉಪಯುಕ್ತ ಮಾಹಿತಿ

ಕೇವಲ ಮನೆಯಲ್ಲಿರುವ ಈ ವಸ್ತುವಿನಿಂದ ಹೀಗೆ ಮಾಡಿ ಜಿರಳೆ ಮತ್ತೆ ಬರೊದಿಲ್ಲ.!

324

ಮನೆಯಲ್ಲಿರುವ  ಜಿರಳೆ  ಶಾಶ್ವತವಾಗಿ ತೊಲಗಿಸಲು ಸರಳ ಮನೆಮದ್ದು. ಮನೆ ಮಳಿಗೆ ಎಂದ ಮೇಲೆ ಕೀಟಗಳ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ ಇದು ಸಾಮಾನ್ಯ ಸಮಸ್ಯೆಯಂತು ಅಲ್ಲ. ಏಕೆಂದರೆ ಮನೆ ಎಷ್ಟೇ ಸ್ವಚ್ಛಂದವಾಗಿದ್ದರೂ ಅತಿಥಿಗಳ ಬಂದಾಗ ಒಂದು ಜಿರಲೆ ಕಾಣಿಸಿಕೊಂಡರೂ ಮುಜುಗರಕ್ಕೀಡಾಗುತ್ತೀರಿ. 
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇಲಿ ಜಿರಳೆ ಇರುತ್ತದೆ ಇವುಗಳು ನಾನು ರೀತಿಯ ಸಾಂಕ್ರಮಿಕ ರೋಗಗಳು ತರಿಸುವಂತಹ ಕ್ರಿಮಿಗಳು ಇದ್ದೇ ಇರುತ್ತದೆ ಮನೆಯಲ್ಲಿರುವ ವಸ್ತುಗಳನ್ನು ಹಾಳುಮಾಡುವುದು ಆಹಾರ ಪದಾರ್ಥವನ್ನು ನಾಶಮಾಡುವುದು ಜಿರಳೆಗಳ ಕೆಲಸವಾಗಿದೆ. ಹಾಗೆಯೇ ಅಡುಗೆ ಕೋಣೆಯಲ್ಲಿ ಜಿರಳೆಗಳು ಹೆಚ್ಚಾದಂತೆ ಅಪಾಯ ಕಟ್ಟಿಟ್ಟಬುತ್ತಿ. ಆಹಾರಗಳ ಮೇಲೆ ಜಿರಳೆಗಳು ಓಡಾಡುವುದರಿಂದ ಫುಡ್​ ಪಾಯಿಸನ್ ಹಾಗೂ ಇನ್ನಿತರ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ಜಿರಳೆಗಳು ತೇವಾಂಶ ಮತ್ತು ಕತ್ತಲೆಯಲ್ಲಿ ಬಹಳ ವೇಗವಾಗಿ ಮತ್ತು ಸುಲಭವಾಗಿ ಸಂತಾನೋತ್ಪತಿ ಮಾಡಿಕೊಳ್ಳುತ್ತವೆ. ಅವುಗಳನ್ನು ತೊಡೆದುಹಾಕುವುದು ಕೂಡ ಅಷ್ಟು ಸುಲಭವಲ್ಲ. ಏಕೆಂದರೆ ಇಂದಿನ ಮಾಡ್ಯುಲರ್ ಅಡಿಗೆ ಮನೆಗಳಲ್ಲಿ ಅವರು ಸಾಕಷ್ಟು ಮರೆಮಾಚುವ ಸ್ಥಳಗಳನ್ನು ಕೀಟಗಳು ಬಹಳ ಸುಲಭವಾಗಿ ವಾಸಸ್ಥಾನವಾಗಿಸುತ್ತದೆ. ಕತ್ತಲೆ ಹೊಂದಿರುವ ಜಾಗ ಮತ್ತು ನೀರಿನ ಸಿಂಕ್‌ನಿಂದ ತೇವಾಂಶ ಹೊಂದಿರುವ ಸ್ಥಳಗಳು ಜಿರಳೆಗಳಿಗೆ ಅನುಕೂಲಕರವಾಗಿರುತ್ತದೆ.

ಜಿರಳೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಕೀಟನಾಶಕಗಳಿದ್ದರೂ, ಅವುಗಳ ಬಳಕೆಯಿಂದ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಅಲರ್ಜಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಅವುಗಳನ್ನು ಹೇಗೆ ತೊಡೆದುಹಾಕಬೇಕು ಎಂದು ನಾವು ನಿಮಗೆ ತಿಳಿಸುತ್ತೇವೆ. 

ಬೇವಿನ ಎಲೆಗಳ ಬಳಕೆ : ಅಡುಗೆಮನೆಯಲ್ಲಿ ಜಿರಳೆಗಳನ್ನು ಹೋಗಲಾಡಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬೇವಿನ ಎಲೆಗಳ ಬಳಕೆ. ಅಡುಗೆಮನೆಯ ವಿವಿಧ ಮೂಲೆಗಳಲ್ಲಿ ಬೇವಿನ ಎಲೆಗಳನ್ನು ಅರೆದು ಇಟ್ಟುಬಿಡಿ. ಇದರ ಸುಗಂಧದಿಂದ ಜಿರಳೆಗಳು ಓಡಿಹೋಗುತ್ತವೆ. ಹಾಗೆಯೇ ಇದನ್ನು ಬದಲಾಯಿಸುತ್ತಿದ್ದರೆ ಜಿರಳೆಗಳು ಸಮಸ್ಯೆ ಇರುವುದಿಲ್ಲ.

ಲವಂಗಗಳ ಬಳಕೆ : ಲವಂಗವನ್ನು ಕಿಚನ್ ಡ್ರಾಯರ್‌ಗಳಲ್ಲಿ ಇರಿಸಿದರೂ ಜಿರಲೆಗಳು ಬರುವುದಿಲ್ಲ. ಇದರ ವಾಸನೆಯಿಂದ ಜಿರಳೆಗಳು ಹೊರ ಹೋಗುತ್ತವೆ. ವಾರಕ್ಕೊಮ್ಮೆ ಜಿರಳೆಗಳಿರುವ ಜಾಗದಲ್ಲಿ ಲವಂಗವನ್ನು ಇರಿಸುವುದರಿಂದ ಕೀಟಗಳ ತೊಂದರೆಯನ್ನು ದೂರ ಮಾಡಬಹುದು.

ಬೋರಿಕ್ ಪೌಡರ್ ಮತ್ತು ಸಕ್ಕರೆಯ ಮಿಶ್ರಣ : ಬೋರಿಕ್ ಪುಡಿ ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜಿರಲೆಗಳಿರುವ ಮೂಲೆಗಳಲ್ಲಿ ಇರಿಸಿ. ವಿಶೇಷವಾಗಿ ಹೆಚ್ಚು ಕತ್ತಲೆ ಮತ್ತು ತೇವಾಂಶ ಇರುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಹಾಕಿದರೆ ಜಿರಲೆಗಳು ಓಡಿ ಹೋಗುತ್ತವೆ.

ಬೇವಿನ ಬಳಕೆ : ಬೇವು ಮತ್ತು ಅದರ ಎಲೆಗಳು ಅನೇಕ ಸಮಸ್ಯೆಗಳಿಗೆ ರಾಮಬಾಣ. ಹಾಗೆಯೇ ಜಿರಳೆಗಳನ್ನು ತೊಡೆದುಹಾಕಲು ನೀವು ಬೇವಿನ ಎಣ್ಣೆ ಅಥವಾ ಪುಡಿ ಎರಡನ್ನೂ ಬಳಸಬಹುದು. ರಾತ್ರಿಯ ವೇಳೆ ಅಡುಗೆಮನೆಯಲ್ಲಿ ಮತ್ತು ಒದ್ದೆಯಾದ ಸ್ಥಳದಲ್ಲಿ ಬೇವಿನ ಎಣ್ಣೆ ಅಥವಾ ಪುಡಿಯನ್ನು ಹಾಕಿದರೆ ಜಿರಲೆಗಳು ಬರುವುದಿಲ್ಲ. ದಿನ ಕಳೆದಂತೆ ಇದೇ ಕ್ರಮವನ್ನು ಪುನರಾವರ್ತಿಸುತ್ತಿದ್ದರೆ ಜಿರಲೆ ಸಮಸ್ಯೆ ಮಾಯವಾಗುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ