ಸುದ್ದಿ

ಜಿಯೋ ಕಂಪನಿಯ ಈ ಆಫರ್ ಕೇಳಿ DTH, ಕೇಬಲ್‌ ಆಪರೇಟರ್‌ ಗಳಲ್ಲಿ ಶುರುವಾಗಿದೆ ನಡುಕ!ಸೆಪ್ಟೆಂಬರ್ 5ರ ನಂತ್ರ…

63

ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಳಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಜಿಯೋ ಗಿಗಾ ಫೈಬರ್ ಮೂಲಕ ದೊಡ್ಡ ಮಾಡಲು ಸಜ್ಜಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ದೊಡ್ಡ ಬಾಂಬ್ ಸಿಡಿಸಿದ್ದಾರೆ.

ಸೆಪ್ಟೆಂಬರ್ 5ರ ನಂತರ ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿರುವ ಜಿಯೋ ಕಂಪನಿ ಒಡೆತನದ ಮುಖೇಶ್ ಅಂಬಾನಿಯವರ ಜಿಯೋ ಗಿಗಾ ಫೈಬರ್ ಮಾಹಿತಿ ನೀಡುತ್ತಿದ್ದಂತೆ ಡಿಟಿಹೆಚ್ ಹಾಗೂ ಕೇಬಲ್ ಆಪರೇಟರ್ ನಡುಕ ಶುರುವಾಗಿದೆ. ತನ್ನ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಕೊಡಬೇಕೆಂದು ನಿರ್ಧರಿಸಿರುವ ಜಿಯೋ, ಜಿಯೋ ಗಿಗಾ ಫೈಬರ್ ಮತ್ತು ಜಿಯೋ ಸೆಟ್ ಟಾಪ್ ಬಾಕ್ಸ್‌ಗಾಗಿ ಬಂಪರ್ ಯೋಜನೆಗಳನ್ನೇ ಹಾಕಿಕೊಂಡಿದೆ.

ಜಿಯೋ ಗಿಗಾ ಫೈಬರ್ ಮತ್ತು ಜಿಯೋ ಸೆಟ್ ಟಾಪ್ ಬಾಕ್ಸ್‌ ನ ಎವರ್ ಪ್ಲಾನ್ ಪಡೆದವರಿಗೆ ಬಂಪರ್ ಆಫರ್!ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿರುವಂತೆ ‘ಜಿಯೋ ಗಿಗಾ ಫೈಬರ್ ಮತ್ತು ಜಿಯೋ ಸೆಟ್ ಟಾಪ್ ಬಾಕ್ಸ್‌ ನ ಎವರ್ ಪ್ಲಾನ್’ ಪಡೆದುಕೊಂಡ ಗ್ರಾಹಕರಿಗೆ 4K HD TV ಮತ್ತು 4K ಸೆಟ್ ಟಾಪ್ ಬಾಕ್ಸ್ ನ್ನು ಕಂಪನಿಯು ಎಂದು ಹೇಳಿದ್ದಾರೆ.

ಆದರೆ ಈ ಪ್ಲಾನ್ ನ ಬೆಲೆ ಎಷ್ಟು ಎಂಬುದನ್ನ ಸೆಪ್ಟೆಂಬರ್ ೫ರ ನಂತರ ಬಹಿರಂಗಮಾಡುವುದಾಗಿ ಕಂಪನಿ ಹೇಳಿದೆ ಎಂದು ಹೇಳಲಾಗಿದೆ. ಆದರೆ ಉಚಿತವಾಗಿ ಕೊಡುವ ಟಿವಿ ಯಾವ ಕಂಪೆನಿಯದ್ದು ಎಂಬುದನ್ನವು ಸಹ ಕಂಪನಿ ಇದುವರೆಗೂ ಹೇಳಿಲ್ಲ. ಸೆಪ್ಟೆಂಬರ್ ೫ರ ನಂತ್ರ ಜಿಯೋ ಗಿಗಾ ಫೈಬರ್ ಸೇವೆ ಶುರುವಾಗಲಿದ್ದು, ನಂತರವೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ