ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ: ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಎಂಟ್ರಿ ನೀಡಲು ಮುಂದಾಗಿದೆ. ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ.ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. 100 ಜಿಬಿ ಡೇಟಾವನ್ನು 100 ಮೆಗಾಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ವೇಗದಲ್ಲಿ ಜಿಯೋ ಗ್ರಾಹಕರಿಗೆ ನೀಡುತ್ತಿದೆ. ಮುಂದಿನ 2 ತಿಂಗಳ ಒಳಗಡೆ ಅಧಿಕೃತವಾಗಿ ಈ ಸೇವೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕಂಪನಿಯ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಆರಂಭದಲ್ಲಿ ಉಚಿತ:
ಜಿಯೋ ಸೇವೆ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡ ಮೂರು ತಿಂಗಳು ಉಚಿತ ಸೇವೆ ನೀಡಿತ್ತು. ಜಿಯೋ ಫೈಬರ್ ಕೂಡ ಒಂದು ವರ್ಷ ಉಚಿತವಾಗಿ ಸಿಗಲಿದೆ. ಲ್ಯಾಂಡ್‍ಲೈನ್‍ನಲ್ಲಿ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿ ನೀಡಲಿದೆ. ಲ್ಯಾಂಡ್‍ಲೈನ್ ಮತ್ತು ಟಿವಿ ವಾಹಿನಿ ಸೇವೆಗಳು ಮೂರು ತಿಂಗಳಿನಲ್ಲಿ ಸೇರ್ಪಡೆಯಾಗಲಿದೆ. ಈಗಾಗಲೇ ಟಿವಿ ವೀಕ್ಷಣೆಗೆ ಜಿಯೋ ಟಿವಿ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ನಲ್ಲಿ ಬರುವ ಎಲ್ಲ ಟಿವಿಗಳನ್ನು ವೀಕ್ಷಿಸಬಹುದಾಗಿದೆ. ಈ ಸೇವೆ ಆರಂಭಗೊಂಡ ದಿನದಿಂದ ಒಂದು ವರ್ಷದವರೆಗೆ ಎಲ್ಲ ಸೇವೆಗಳು ಉಚಿತವಾಗಿ ಸಿಗಲಿದ್ದು, ಒಂದು ವರ್ಷದ ಬಳಿಕ ಗ್ರಾಹಕರು ಬೇಕಾದ ಪ್ಯಾಕ್‍ಗೆ ಅನುಗುಣವಾಗಿ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಸ್ಪೀಡ್ ಎಷ್ಟು?
ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಜಿಯೋದ ಡೌನ್‍ಲೋಡ್ ಸ್ಪೀಡ್ 22.2 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದೆ. ಸದ್ಯ ಜಿಯೋ ದೇಶದಲ್ಲಿ ಮೊಬೈಲ್ ಡೇಟಾ ಸ್ಪೀಡ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈಗ ಬರುತ್ತಿರುವ ಜಿಯೋ ಫೈಬರ್‍ನಲ್ಲಿ 100 ಎಂಬಿಪಿಎಸ್ ವೇಗದಲ್ಲಿ ಇಂಟರ್‍ನೆಟ್ ಸೇವೆ ಸಿಗಲಿದೆ.
ರೂಟರ್ ಖರೀದಿಸಬೇಕು:
ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀಸಬೇಕು. ಎಲ್ಲ ಇಂಟರ್‍ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು.ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.
ಎಲ್ಲೆಲ್ಲಿ ಸಿಗುತ್ತೆ?
ಸದ್ಯ ದೆಹಲಿ ಮತ್ತು ಮುಂಬೈ ನಗರದಲ್ಲಿ ಪರೀಕ್ಷೆಗಳು ನಡೆಯುತ್ತಿದೆ. ದೇಶದ 1,600 ನಗರಗಳಲ್ಲಿ ಜಿಯೋ ಫೈಬರ್ ನೀಡಲು ಕಂಪನಿ ಪ್ಲಾನ್ ಮಾಡಿದೆ. ಕಳೆದ ಆಗಸ್ಟ್ ತಿಂಗಳಿನಿಂದ ಜಿಯೋ ಫೈಬರ್ ಗ್ರಾಹಕರ ನೊಂದಣಿ ಆರಂಭಿಸಿದೆ.ಇಲ್ಲಿಯವರೆಗೆ ಕಂಪನಿ ಈ ಪ್ಲಾನ್ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ಅಧಿಕಾರಿಯೊಬ್ಬರು, ಇಲ್ಲಿಯವರೆಗೂ ಯಾವ ಪ್ಲಾನ್ ಬಗ್ಗೆ ಮಾಹಿತಿ ನಮಗೆ ಇಲ್ಲ. ಜಿಯೋ ಗಿಗಾ ಫೈಬರ್ ಬ್ರಾಂಡ್ ಮಾರುಕಟ್ಟೆಗೆ ಬರಲು ಅಂದಾಜು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.ಪ್ರಸ್ತುತ ಭಾರತದಲ್ಲಿ 1.8 ಕೋಟಿ ಜನ ಬ್ರಾಂಡ್ ಬ್ಯಾಂಡ್ ಬಳಕೆ ಮಾಡುತ್ತಿದ್ದರೆ 53 ಕೋಟಿ ಜನ ಮೊಬೈಲ್ ಡೇಟಾ ಬಳಕೆ ಮಾಡುತ್ತಿದ್ದಾರೆ. ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಅಧಿಕೃತವಾಗಿ ಆರಂಭವಾದರೆ ಟೆಲಿಕಾಂ ಕಂಪನಿಗಳಿಗೆ ಹೇಗೆ ಹೊಡೆತ ನೀಡಿತ್ತೋ ಅದೇ ರೀತಿಯಾಗಿ ಬ್ರಾಡ್‍ಬ್ಯಾಂಡ್ ಕಂಪನಿಗಳಿಗೆ ಹೊಡೆತ ನೀಡಬಹುದು ಎನ್ನುವ ವಿಶ್ಲೇಷಣೆ ಈಗಾಗಲೇ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.
ಒಮ್ಮೆ ಜಪಾನಿನ ಫುಕವೋಕಾ ಎನ್ನುವ ಊರಿನಲ್ಲಿ ನಾಲ್ಕು ರಸ್ತೆ ಕೂಡುವ ಸರ್ಕಲ್ ಕೂಡು ರಸ್ತೆ ಕುಸಿದು ಬಿದ್ದಿತ್ತು ! 98 ಅಡಿ ಉದ್ದ, 88 ಅಡಿ ಅಗಲ ಇದ್ದ ರಸ್ತೆ ಇದ್ದಕ್ಕಿದ್ದ ಹಾಗೆ ಕುಸಿದು ಹೋಗಿತ್ತು ,ಕುಸಿದದ್ದು ಎಂದರೆ ನಮ್ಮಲ್ಲಿನಂತೆ ಸಣ್ಣದಾಗಿ ಎರಡಡಿ ಕೆಳಕ್ಕಿಳಿದಿರಲಿಲ್ಲ ಬರೊಬ್ಬರಿ 50 ಅಡಿಯಷ್ಟು ಕೆಳಗೆ ಕುಸಿದು ಹೋಗಿತ್ತು ! ಈ ಭೂಕುಸಿತವು ಅವರಿಗೇನೂ ಹೊಸದಲ್ಲ ಏಕೆಂದರೆ ಎಂತೆತಹಾ ಭೂಕಂಪಗಳನ್ನು ಎದುರಿಸಿದವರಿಗೆ ಇದಾವ ಲೆಕ್ಕ , ಆದರೆ ಈ ಭೂ ಕುಸಿತ ಅಂತರಾಷ್ಟ್ರೀಯ…
ಭಟ್ಕಳ: ಪಾಲಕರಾದವರು ತಮ್ಮ ಮಕ್ಕಳಿಗೆ ಶಿಕ್ಷಣ ಒಂದರಲ್ಲಿಯೇ ಒತ್ತಡ ಹಾಕದೆ ಕ್ರೀಡೆ, ಸಾಂಸ್ಕೃತಿ ಹಾಗು ಎಲ್ಲಾ ರಂಗದಲ್ಲಿಯೂ ಕೂಡ ಹೆಚ್ಚು ಪ್ರೋತ್ಸಾಹ ನೀಡಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗುವಂತೆ ಮಾಡಬೇಕು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಅವರು ಗುರುವಾರದಂದು ಸರಕಾರಿ ಪ್ರೌಢಶಾಲೆ ಸೋನಾರಕೇರಿಯಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಹಾಗೂ ಸರಕಾರಿ ಪ್ರೌಢಶಾಲೆ ಸೋನಾರಕೇರಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ…
ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನು ಏನು ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, “ದರ್ಶನ್ ಹಾಗೂ ಯಶ್ ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನೇನೇ ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ. ಅಭಿಷೇಕ್ ನಿಂದ ನಿರೀಕ್ಷೆ ಮಾಡುವ ಎರಡರಷ್ಟು ನನ್ನಿಂದ ನಿರೀಕ್ಷೆ ಮಾಡಿ ಎಂದು ದರ್ಶನ್ ಹೇಳುತ್ತಾರೆ….
ದೇಶದಲ್ಲಿ ನಡೆಯುತ್ತಿರುವ ಮೊಬೈಲ್ ಡೇಟಾ ಕ್ರಾಂತಿ ಇಡೀ ವಿಶ್ವವನ್ನು ನಮ್ಮ ಕಡೆಗೆ ತಿರುಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಗೂಗಲ್-ಫೇಸ್ಬುಕ್ ಸೇರಿದಂತೆ ಎಲ್ಲಾ ದೈತ್ಯ ಕಂಪನಿಗಳು ಭಾರತದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಭಾರತೀಯರಿಗಾಗಿಗೇ ಸೇವೆಗಳನ್ನು ನೀಡಲು ಮುಂದಾಗಿವೆ.
ವಿಶ್ವದಾದ್ಯಂತ ಪ್ರತಿ ಮಹಿಳೆಯರೂ ತಮ್ಮ ಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಬಯಸ್ತಾರೆ. ಪತಿ ಆಯಸ್ಸು ವೃದ್ಧಿಗೆ ಅನೇಕ ಮಹಿಳೆಯರು ವೃತ, ಪೂಜೆಗಳನ್ನು ಮಾಡ್ತಾರೆ. ಪತಿ ಆಯಸ್ಸು ವೃದ್ಧಿಗೆ ನೀವೂ ಬಯಸಿದ್ದರೆ ಈ ಸುಲಭ ಉಪಾಯವನ್ನು ಅನುಸರಿಸಿ. ರಾಶಿಗೆ ಅನುಗುಣವಾಗಿ ಯಾವುದೇ ಮಹಿಳೆ ತನ್ನ ಬಳೆಯ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಆಕೆಯ ಪತಿ ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು…