ಸುದ್ದಿ

ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಹಣ ಹಂಚಿದ್ರಾ ಜೆಡಿಎಸ್ ಮುಖಂಡ..!?

93

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‍ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.

ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿರುದ್ಧ ಮತ ಹಾಕುವಂತೆ ಹೇಳಿ ಮಂಜುನಾಥ್ ಅವರು ಪ್ರತಿ ಬೂತ್‍ಗೆ 35 ಸಾವಿರ ರೂಪಾಯಿ ಹಂಚಿದ್ದಾರೆ. ಮುಖಂಡನ ಮಾತು ಕೇಳಿ ಜನರು ಕೂಡ ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಾಗಿ ಚಾಮರಾಜನಗರದ ಕಾಂಗ್ರೆಸ್ ಆರ್.ಧ್ರುವನಾರಾಯಣ್‍ಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮಂಜುನಾಥ್, ನನ್ನ ಮೇಲೆ ಸುಳ್ಳು ಆರೋಪ ಕೇಳಿಬರುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಜುನಾಥ್ ಅವರು ಹನೂರು ಅಸೆಂಬ್ಲಿಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋತಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಡಾರ್ಲಿಂಗ್ ಪ್ರಭಾಸ್ ಮನ ಕದ್ದ ಚೆಲುವೆ ಇವರೇನಾ..?

    ಟಾಲಿವುಡ್ ನ ಮೋಸ್ಟ್ ಹ್ಯಾಂಡ್ ಸಮ್ ಹಾಗೂ ಎಲಿಜಿಬಲ್ ಬ್ಯಾಚುಲರ್ ನಟ ಪ್ರಭಾಸ್ ಮದುವೆ ಯಾವಾಗ ಯಾವಾಗ ಎಂದು ಕೇಳುತ್ತಿದ್ದ, ಟಾಲಿವುಡ್ ಮಂದಿಗೆ ಡಾರ್ಲಿಂಗ್ ಪ್ರಭಾಸ್ ಮದುವೆ ವಿಚಾರವಾಗಿ ಸಣ್ಣದೊಂದು ಕ್ಲೂ ಸಿಕ್ಕಿದೆ ಹೌದು ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ನಟಿ ಅನುಷ್ಕಾ ಶೆಟ್ಟಿಯನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು, ಜೊತೆಗೆ ಇದಕ್ಕೆ ಪುಷ್ಠಿ ನೀಡುವಂತೆ ಈ ಬಾಹುಬಲಿ ಜೋಡಿ ಹಲವು ಸಮಾರಂಭಗಳಲ್ಲಿ, ಅಲ್ಲಿ ಇಲ್ಲಿ ಒಟ್ಟಾಗಿ ಸುತ್ತಾಡಿದ್ದರು.  ಅಷ್ಟೇಲ್ಲದೆ ಕೆಲ ದಿನಗಳ ಹಿಂದೆ…

  • ಉಪಯುಕ್ತ ಮಾಹಿತಿ

    ಯಾವುದೇ ಕೆಮಿಕಲ್ ಸೇರಿಸದೆ ಮನೆಯಲ್ಲೇ ಸಿಗುವ ಆರೋಗ್ಯಕರ ಪದಾರ್ಥಗಳಿಂದ ಲಿಪ್ ಬಾಮ್ ತಯಾರಿಸುವ ಅತಿ ಸರಳ ವಿಧಾನ..ಇದನ್ನು ತಯಾರಿಸಲು ಕೇವಲ ಎರಡು ವಸ್ತುಗಳು ಮಾತ್ರ ಸಾಕು

    ಚಳಿಗಾಲದಲ್ಲಿ ತುಟಿಗಳು ವಿಪರೀತ ಹೊಡೆಯುತ್ತವೆ. ಕೆಲವೊಮ್ಮೆ ಬಿರುಕು ಬಂದು ರಕ್ತವೂ ಸುರಿಯುತ್ತದೆ. ಇದರ ಉಪಶಮನಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ನಿಂದು ತಯಾರಾದ ಕ್ರೀಮ್ ಗಳು ಲಿಪ್ ಬಾಮ್ ಗಳನ್ನು ಬಳಸಿದಷ್ಟೂ ಇದರ ತಿಂದರೆ ಹೆಚ್ಚಾಗುತ್ತದೆ. ಅದರ ಬದಲು ಮನೆಯಲ್ಲಿಯೇ ಸಿಗುವ ನ್ಯಾಚುರಲ್ ಪದಾರ್ಥಗಳನ್ನು ಬಳಸಿ ಲಿಪ್ ಬಾಮ್ ತಯಾರಿಸಿ ಬಳಸಿದರೆ ತುಟಿಗಳನ್ನು ರಕ್ಷಿಸಬಹುದು ಮತ್ತು ಹಣವನ್ನೂ ಉಳಿಸ ಬಹುದು. ಇದಕ್ಕಾಗಿ ಅಗತ್ಯವಿರುವ ಪದಾರ್ಥ ಗಳೆಂದರೆ ಕೇವಲ ನೀರು, ಬೀಟ್ ರೂಟ್ ಮತ್ತು ತುಪ್ಪ. ಮಾಡುವ ವಿಧಾನ. ಒಂದು…

  • ಕ್ರೀಡೆ

    ಮುಂಬೈ ಇಂಡಿಯನ್ಸ್‌ ಆಟಗಾರನ, ಬೆತ್ತಲೆ ಕುಣಿತ !!!

    ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಿಸುತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡದ ಜೋಸ್‌ ಬಟ್ಲರ್‌, ಮೈ ಒರಸುವ ಬಟ್ಟೆಯನ್ನು ಕಿತ್ತೆಸೆದು ಬೆತ್ತಲೆಯಾಗಿ ಕುಣಿದು ಸಂಭ್ರಮಿಸಿದ ವಿಡಿಯೊವನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಉಪಯುಕ್ತ ಮಾಹಿತಿ

    ಈಗ ಬಂದಿದೆ ಹೊಸ ಸ್ಫೋಟಗೊಳ್ಳದ ಪಾರದರ್ಶಕ ಗ್ಯಾಸ್ ಸಿಲಿಂಡರ್..!ತಿಲಿಯಲು ಈ ಲೇಖನ ಓದಿ..

    ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್‌ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.

  • ಸುದ್ದಿ

    ಮೈತ್ರಿ ಸರ್ಕಾರ ಆದ ನಂತರ ಮೊದಲ ಬಾರಿಗೆ ಜೆಡಿಎಸ್ ವಿರುದ್ದ ಗುಡುಗಿದ ಸಿದ್ದರಾಮಯ್ಯನವರು ಹೇಳಿದ್ದೇನು ಗೊತ್ತಾ..?

    ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ಹೆಚ್. ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಪ್ರತಿಕ್ರಿಯಿಸಲಾರೆ. ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅವರ ಬೆಂಬಲಿಗರು ಚಮಚಾಗಿರಿ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದರೆ 130 ಸ್ಥಾನಗಳಿಂದ 78 ಸ್ಥಾನಗಳಿಗೆ ಕುಸಿದಿದ್ದು ಏಕೆ ಎಂದು ವಿಶ್ವನಾಥ್ ಹೇಳಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್ ನಲ್ಲಿ ಅನಿಸಿಕೆ ಹಂಚಿಕೊಂಡ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ…

  • inspirational

    ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಪತ್ತೆಯಾದ ಅಸ್ಥಿಪಂಜರ….!

    ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್‍ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು…