ತಂತ್ರಜ್ಞಾನ

ವಿಮಾನಕ್ಕೆ ಯಾಕೆ ಸಿಡಿಲು ಹೊಡೆಯುವುದಿಲ್ಲ, JCB ಬಣ್ಣ ಯಾಕೆ ಹಳದಿ ಇರುತ್ತದೆ. ತಿಳಿಯದ ರೋಚಕ ಸತ್ಯ.

144

ಆಕಾಶದಲ್ಲಿ ವಿಮಾನಗಳು ಸಂಚರಿಸುವಾಗ ಯಾಕೆ ಅವುಗಳಿಗೆ ಸಿಡಿಲು ಬಡಿಯುವುದಿಲ್ಲ ಅನ್ನುವುದು, ಹೌದು ನಿಮಗೆ ಸಾಮಾನ್ಯವಾಗಿ ಅನಿಸಿರುತ್ತದೆ ಮಳೆಗಾಲದ ಸಮಯದಲ್ಲಿ ಗುಡುಗು ಮತ್ತು ಮಿಂಚು ಇರುವುದು ಸಾಮಾನ್ಯ, ಆದರೆ ಜೋರಾಗಿ ಮಿಂಚು ಬರುವ ಸಮಯದಲ್ಲಿ ವಿಮಾನ ಯಾವುದೇ ತೊಂದರೆ ಇಲ್ಲದೆ ಚಲಿಸುತ್ತದೆ ಮತ್ತು ವಿಮಾನಕ್ಕೆ ಯಾಕೆ ಸಿಡಿಲು ಹೊಡೆಯುವುದಿಲ್ಲ ಅನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಎಲ್ಲಾ ವಿಮಾನಗಳು ಅಲ್ಯೂಮಿನಿಯಂ ಗಳಿಂದ ಮಾಡಲ್ಪಟ್ಟಿರುತ್ತದೆ, ಇನ್ನು ಅಲ್ಯೂಮಿನಿಯಂ ಉತ್ತಮ ವಿದ್ಯುತ್ ವಾಹಕ ಆದ್ದರಿಂದ ವಿಮಾನಗಳಿಗೆ ಸಿಡಿಲು ಹೊಡೆದರು ಕೂಡ ಅದೂ ಹೊರಭಾಗಕ್ಕೆ ಮಾತ್ರ ಸ್ಪರ್ಶ ಆಗುತ್ತದೆ, ಆದರೆ ವಿಮಾನದ ಒಳಗೆ ಯಾವುದೇ ಕಾರಣಕ್ಕೂ ಸಿಡಿಲುಗಳು ಪ್ರವೇಶ ಪಡೆಯುವುದಿಲ್ಲ.

ಮಳೆಗಾಲದ ಸಮಯದಲ್ಲಿ ಸಿಡಿಲು ಹೊಡೆಯುವಾಗ ನೀವು ಕಾರಿನ ಒಳಗೆ ಇದ್ದರೂ ಕೂಡ ನಿಮಗೆ ಯಾವುದೇ ತೊಂದರೆ ಇಲ್ಲ, ಸ್ನೇಹಿತರೆ ಬರಿ ಕಾರು ಮಾತ್ರವಲ್ಲದೆ ನೀವು ಯಾವುದಾದರೂ ಅಲ್ಯೂಮಿನಿಯಂ ಬಾಕ್ಸ್ ನಲ್ಲಿ ಕುಳಿತುಕೊಂಡರು ಕೂಡ ನಿಮಗೆ ಸಿಡಿಲು ಬಡಿಯುವುದಿಲ್ಲ. ಅಲ್ಯೂಮಿನಿಯಂ ಅನ್ನುವುದು ಒಂದು ಉತ್ತಮ ವಿದ್ಯುತ್ ವಾಹಕ ಆಗಿರುವ ಕಾರಣ ಅಲ್ಯೂಮಿನಿಯಂ ಗೆ ಯಾವುದೇ ರೀತಿಯಲ್ಲಿ ಸಿಡಿಲು ಬಡಿಯುವುದಿಲ್ಲ.

ಇನ್ನು ಎರಡನೆಯದಾಗಿ ಜೆಸಿಬಿ ಅಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಹಿಂದೆ ಎಲ್ಲಾ ಕೆಲಸಗಳನ್ನ ಮನುಷ್ಯನೇ ಮಾಡಬೇಕಾಗಿತ್ತು ಮತ್ತು ಕೆಲವು ಕೆಲಸಗಳಿಗೆ ಪ್ರಾಣಿಗಳನ್ನ ಬಳಕೆ ಮಾಡಲಾಗುತ್ತಿದ್ದು, ಆದರೆ ಈ ಯಂತ್ರ ಬಂದಮೇಲೆ ಮನುಷ್ಯನ ಮತ್ತು ಪ್ರಾಣಿಗಳನ್ನ ಕೆಲಸಕ್ಕೆ ಬಳಸಿಕೊಳ್ಳುವುದು ಕಡಿಮೆಯಾಗಿದೆ. ಹೌದು ಮನುಷ್ಯ ಮಾಡುವ ಅದೆಷ್ಟೋ ಕೆಲಸಗಳನ್ನ ಕ್ಷಣಾರ್ಧದಲ್ಲಿ ಮಾಡುವ ಯಂತ್ರ ಅಂದರೆ ಜೆಸಿಬಿ, ಹಿಂದೆ ದೊಡ್ಡ ಕೆಲಸಗಳನ್ನ ಮಾಡಲು ಆನೆಗಳನ್ನ ಬಳಕೆ ಮಾಡಲಾಗುತ್ತಿತ್ತು ಆದರೆ ಜೆಸಿಬಿ ಅನ್ನುವ ಯಂತ್ರ ಬಂದಮೇಲೆ ಅದೆಷ್ಟೋ ಆನೆಗಳು ಮಾಡುವ ಕೆಲಸಗಳನ್ನ ಜೆಸಿಬಿಗಳು ಮಾಡುತ್ತಿದೆ.

ಸಾಮಾನ್ಯವಾಗಿ ವಾಹನಗಳಲ್ಲಿ ಎರಡು ಬಗೆ ಇರುತ್ತದೆ, ಹೌದು ಕಾರ್ ಮತ್ತು ಬೈಕ್ ನಂತಹ ಸಾಮಾನ್ಯ ವಾಹನಗಳು ಮತ್ತು ಎರಡನೆಯದು ಸ್ಪೆಷಲ್ ವೆಹಿಕಲ್ಸ್ ಅಂದರೆ ಜೆಸಿಬಿ, ಶಾಲಾ ವಾಹನ ಮತ್ತು ದೊಡ್ಡ ದೊಡ್ಡ ಬಸ್ ಗಳು. ಹಳದಿ ಬಣ್ಣ ಅನ್ನುವುದು ಎಲ್ಲರನ್ನ ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ ಮತ್ತು ದೂರ ಹಳದಿ ಬಣ್ಣ ಸ್ವಚ್ಛವಾಗಿ ಕಾಣುತ್ತದೆ, ಜನರ ಗುಂಪಿನಿಂದ ಸಪರೇಟ್ ಆಗಿ ಕಾಣುವಂತೆ ಮಾಡುವ ಉದ್ದೇಶದಿಂದ ಜೆಸಿಬಿಗೆ ಹಳದಿ ಬಣ್ಣವನ್ನ ಕೊಡಲಾಗಿದೆ. ಇನ್ನು ಈ ದೊಡ್ಡ ಗಾತ್ರದ ಜೆಸಿಬಿ ಅನ್ನುವ ಯಂತ್ರವನ್ನ ಕಂಡು ಹಿಡಿದಿದ್ದು ಜೋಸೆಫ್ ಸೈರಿಲ್ ಬ್ಯಾನ್ಫೋರ್ಡ್, ಅಂದರೆ ಶಾರ್ಟ್ ಆಗಿ ಜೆಸಿಬಿ ಮತ್ತು ಈತನ ಹೆಸರನ್ನೇ ಈತ ಕಂಡುಹಿಡಿದ ಯಂತ್ರಕ್ಕೆ ಇಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ