ಸಿನಿಮಾ

ಮಗನ ಫೋಟೋ ಹಾಕಿ ನಟ ಜಗ್ಗೇಶ್ ರವರನ್ನು ಟ್ರೊಲ್ ಮಾಡಿದ ರಮ್ಯಾ ಬೆಂಬಲಿಗರು..ಇದಕ್ಕೆ ಜಗ್ಗೇಶ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

1541

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದ ರಮ್ಯಾರನ್ನು ಹಾಸ್ಯ ನಟ ಬುಲೆಟ್ ಪ್ರಕಾಶ್ ತರಾಟೆಗೆ ತೆಗೆದುಕೊಂಡಿದ್ದರು. ಬುಲೆಟ್ ಪ್ರಕಾಶ್ ಅವರಿಗೆ ನವರಸನಾಯಕ ಜಗ್ಗೇಶ್ ಸಾಥ್ ಕೊಟ್ಟು ಟ್ವೀಟ್ ಮಾಡಿದ್ದರು.

ಈಗ ಜಗ್ಗೇಶ್ ಟ್ವೀಟ್ ಮಾಡಿದ್ದಕ್ಕೆ ಅವರ ಕುಟುಂಬದ ವಿಚಾರವನ್ನು ಎಳೆದು ರಮ್ಯಾ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ.

ರಮ್ಯಾ ಬಗ್ಗೆ ಈ ರೀತಿಯ ಟೀಕೆಗೆ ಮಾಡಿದಕ್ಕೆ ಅವರ ಬೆಂಬಲಿಗರು ಜಗ್ಗೇಶ್ ಅವರ ವಿದೇಶಿ ಸೊಸೆಯ ಬಗ್ಗೆ ಪ್ರಶ್ನಿಸಿದ್ದಾರೆ. ವಿದೇಶಿ ಯುವತಿಯನ್ನು ಮದುವೆಯಾಗಿರುವ ಜಗ್ಗೇಶ್ ಮಗನ ಫೋಟೋ ಹಾಕಿ, “ದಾರಿ ತಪ್ಪಿದ ಮಕ್ಕಳ ತಿದ್ದಬಹುದು. ದಾರಿ ತಪ್ಪಲೇ ಹುಟ್ಟಿದ ಮಕ್ಕಳ ತಿದ್ದಬಾರದು” ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, “ಈ ಅದ್ಭುತ ಜೀವನ ದೇವರು ನಿಮಗೂ ದಯಪಾಲಿಸಲಿ. 3 ಮಾಸ್ಟರ್ ಡಿಗ್ರಿ, ಸೈಂಟಿಸ್ಟ್ ಅಪ್ಪ-ಅಮ್ಮ, ದೇಶ ಬಿಟ್ಟು ನನ್ನ ಮನೆಯ ಮೆಚ್ಚಿನ ಹೆಣ್ಣುಕುಲ. 13 ಲಕ್ಷ ಸಂಬಳ ತ್ಯಜಿಸಿ ಮಗನ ಪ್ರೀತಿಗಾಗಿ 2 ಲಕ್ಷ ಸಂಬಳಕ್ಕೆ ಬಂದು ಅದ್ಭುತ ಮೊಮ್ಮಗನ ನೀಡಿ ಮಾವನ ಜೊತೆ ಭಾರತ್ ಮಾತಾ ಕೀ ಜೈ ಅನ್ನುತ್ತಾಳೆ.

ದೇವರು ಅವಳ ಯೋಗ, ಯೋಗ್ಯತೆ ನಿಮಗೂ ದಯಪಾಲಿಸಲಿ. ನಿಮ್ದೂ ಒಂದು ಜನ್ಮ ಎಂದು ರಮ್ಯಾ ಬೆಂಬಲಿಗರಿಗೆ ಟಾಂಗ್ ಕೊಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ