ದೇವರು-ಧರ್ಮ

ಇಸ್ಕಾನ್ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ಗೋವರ್ಧನ ಪೂಜೆ…!ಇದರ ಇನ್ನಳೆಯೇನು ಗೊತ್ತಾ?

32

ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು.

ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ ಆಚರಿಸಲಾಗಿದೆ.

ಹಣ್ಣು- ಡ್ರೈ ಫ್ರೂಟ್ಸ್​ನ 1000ಕೆಜಿ ತೂಕದ ಕೇಕ್​ ಅನ್ನ ಗೋವರ್ಧನಗಿರಿ  ಬೆಟ್ಟ ಮಾದರಿಯಲ್ಲಿ ತಯಾರಿಸಲಾಗಿತ್ತು. ಜೊತೆಗೆ ದೇವರ ನೈವೇದ್ಯಕ್ಕೆ 56 ತರದ ತಿಂಡಿ ತಿನಿಸುಗಳನ್ನ ಇಡಲಾಯಿತು. ಎರಡು ಹಸುಗಳನ್ನ ತರಿಸಿ ಸಂಪ್ರದಾಯಿಕವಾಗಿ ಪೂಜೆಯನ್ನ ಕೂಡ ಸಲ್ಲಿಸಲಾಯಿತು.

ಪೂಜೆ ಪುನಸ್ಕಾರಗಳ ನಂತರ, ನೆರೆದಿದ್ದ ಸಾವಿರಾರು ಭಕ್ತರಿಗೆ ಅದೇ ಕೇಕ್​ನ್ನ ಪ್ರಸಾದವಾಗಿ ನೀಡಲಾಯಿತು. ಒಟ್ಟಾರೆ, ಈ ಬಾರಿ ಇಸ್ಕಾನ್​ನಲ್ಲಿ ನಡೆದ ಗೋವರ್ಧನ ಪೂಜೆ ತುಂಬಾನೆ ವಿಶೇಷವಾಗಿದ್ದು, ದೇವರ ದರ್ಶನ ಪಡೆದ ಭಕ್ತರು ಕೂಡ ಖುಷಿ ಪಟ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಕಡಿಮೆ ಖರ್ಚಿನಲ್ಲಿ ನಟಿ ಮತ್ತು ಟರ್ಕಿ ಕೋಳಿಯನ್ನು ಸಾಕಿ ಹೆಚ್ಚು ಹಣ ಗಳಿಸಿ!ತಿಳಿಯಲು ಈ ಮಾಹಿತಿ ನೋಡಿ…

    ಮಾಂಸಪ್ರಿಯರಿಗೆ ನಾಟಿ ಕೋಳಿ ಮಾಂಸ ಎಂದರೆ ಬಾಯಿಯಲ್ಲಿ ನೀರು ಬರುವುದಂತು ಗ್ಯಾರಂಟಿ ಏಕೆಂದರೆ ಇದರ ಮಾಂಸದ ರುಚಿ ಅಂತಹುದು. ನಗರೀಕರಣ ಮತ್ತು ಮಾಂಸದ ಬೇಡಿಕೆಯ ಕಾರಣದಿಂದ ಫಾರಂ ಮತ್ತು ಬ್ರಾಯ್ಲರ್​ ಕೋಳಿಗಳ ಸಾಕಾಣಿಕೆಯ ಕೇಂದ್ರಗಳು ತಲೆ ಎತ್ತಿವೆ. ಆದರೆ ಈ ಕೋಳಿಗಳ ಮಾಂಸ ನಾಟಿ ಕೋಳಿಯ ಮಾಂಸದ ರುಚಿಯಷ್ಟಿರುವುದಿಲ್ಲ. ನಗರಗಳಲ್ಲಿ ಜನರು ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಹಣ ಖರ್ಚಾದರೂ ಕೂಡ ನಾಟಿ ಕೋಳಿಯನ್ನು ಕೊಳ್ಳುತ್ತಾರೆ. ಟರ್ಕಿ ಕೋಳಿಯನ್ನು ಕರ್ನಾಟಕದಲ್ಲಿ ತಿನ್ನುವುದು ಕಡಿಮೆ, ಆದರೆ…

  • inspirational, ಉಪಯುಕ್ತ ಮಾಹಿತಿ

    ಉತ್ತಮ ಆರೋಗ್ಯ ಟಿಪ್ಸ್

    ಇಂದು ವಿಶ್ವ ಆರೋಗ್ಯ ದಿನ ನಾನು ಅನುಸರಿಸುವ ಕೆಲವೊಂದು ಆರೋಗ್ಯ ಟಿಪ್ಸ್ ನಿಮಗೂ ತಿಳಿಸುತ್ತಿದ್ದೇನೆ ತಾವು ಅನುಭವಿಸಿ ಉತ್ತಮವಾದ ಜೀವನಶೈಲಿಗೆ ಹತ್ತು ಆಚರಣೆಗಳು 1. ಪ್ರತಿನಿತ್ಯ 20 ನಿಮಿಷಗಳ ವರೆಗೆ ಧ್ಯಾನ ಮತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡೋಣ 2. ಮಿತ ಆಹಾರ ಸೇವನೆ ಮಾಡೋಣ 3. ಸಸ್ಯಾಹಾರಕ್ಕೆ ಬದಲಾಗೋಣ 4. ನಮ್ಮ ನೀರು ಸೇವನೆ ಪ್ರಮಾಣವನ್ನು ಕಾಪಾಡಿಕೊಳ್ಳೋಣ. 5. ಮಲಗುವುದಕ್ಕೆ ಮೂರು ಗಂಟೆ ಮುಂಚೆ ಆಹಾರ ಸೇವನೆ ಮಾಡಲು ಪ್ರಯತ್ನಿಸೋಣ. 6. ನಮ್ಮ ಮಾತುಗಳನ್ನು ಮತ್ತು…

  • ಸರ್ಕಾರದ ಯೋಜನೆಗಳು

    ಮೋದಿ ಸರ್ಕಾರದ ಮತ್ತೊಂದು ಯೋಜನೆ …!ತಿಳಿಯಲು ಈ ಲೇಖನ ಓದಿ..

    ನವದೆಹಲಿ, ನವೆಂಬರ್ 18 : ಮೂಡೀಸ್ ರೇಟಿಂಗ್ ಕೇಂದ್ರಕ್ಕೆ ಹೊಸ ಚೈತನ್ಯ ತುಂಬಿದಂತಿದೆ. ನೋಟ್ ಬ್ಯಾನ್, ಜಿ.ಎಸ್.ಟಿ ಅನ್ನು ವಿಷಯವಾಗಿರಿಸಿಕೊಂಡು ಕೇಂದ್ರವನ್ನು ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ ಮೂಡೀಸ್ ರೇಟಿಂಗ್.

  • ಆರೋಗ್ಯ

    ಗಂಟಲು ನೋವಿಗೆ ಮನೆಯಲ್ಲೇ ಔಷಧಿ ಸುಲಭವಾಗಿ ತಯಾರಿಸ ಬಹುದು ಈ ಲೇಖನ ಓದಿ ತಿಳಿಯಿರಿ….

    ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟ ವಾಗುತ್ತದೆ. ಆಹಾರ ಸೇವಿಸಲು ಸಹ ಕಷ್ಟ ವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ.

  • ಸುದ್ದಿ

    ಆರ್ಥಿಕವಾಗಿ ಕುಸಿಯುತ್ತಿರುವ ಪಾಕ್ ಗೆ ಎಫ್‍ಎಟಿಎಫ್‍ನಿಂದ ಕೊನೆಯ ಎಚ್ಚರಿಕೆ

    ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್) ಎಚ್ಚರಿಕೆ ನೀಡಿದೆ.ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಪ್ರಸ್ತುತವಾಗಿ ಎಫ್‍ಎಟಿಎಫ್ ಅಲ್ಲಿ…

  • ಸುದ್ದಿ

    ಇರುವೆ ಬಗೆಗಿನ ಈ 15 ವಿಷಯಗಳು ನಮ್ಮನ್ನ ರೋಮಾಂಚನಗೊಳಿಸುತ್ತೆ..!

    ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.