ಸುದ್ದಿ

ನೀವು ಎಲ್ಲಾದರೂ ಹಣ ಹೂಡಿಕೆ ಮಾಡುತ್ತೀರಾ,ಹಾಗಾದರೆ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ,.!

64

ಸಾಮಾನ್ಯವಾಗಿ  ಎಲ್ಲರೂ ಯಾವುದೊ ಒಂದು ಕಡೆ ಅಥವಾ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ . ಮುಖ್ಯವಾಗಿ  ಹೆಚ್ಚಿನ ಆದಾಯ ಬರುವ  ಭರವಸೆಗಳನ್ನು ನೀಡುವ ಕಡೆ ಮೊರೆ ಹೋಗುತ್ತಾರೆ. ಆದಾಯವನ್ನು ನೋಡುತ್ತಾರೆ ಹೊರತು ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ, ಮತ್ತು  ಏಜೆಂಟ್‌ಗಳ ಮೂಲಕ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಮಾಡಿರುವ ಕಂಪನಿಗಳ ಉದಾಹರಣೆಯು  ಸಹ ಸಾಕಷ್ಟಿದೆ.ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ. ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ಆಗಬೇಕೆಂದು ಕನಸು ಕಾಣುವವರೇನು ಕಮ್ಮಿಇಲ್ಲ. ನೀವು ಕಷ್ಟಪಟ್ಟು ದುಡಿದ ಹಣವು ನೀರಿನಂತೆ ಪೋಲಾಗದಂತೆ ನೋಡಿಕೊಳ್ಳುವುದು ಜಾಣತನ. ಯಾವುದೇ ವ್ಯಾಪಾರ ಅಥವಾ ವಹಿವಾಟಿನಲ್ಲಿ ನೀವು ಹಣವನ್ನು ಹೂಡುವ ಮುನ್ನ ನಿಮ್ಮನ್ನು ನೀವು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

1.ನಾವು ಮಾಡುವ ಹೂಡಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ? ಯಾವುದೇ ವ್ಯವಹಾರದಲ್ಲಿ , ಆಸ್ತಿನಿರ್ವಹಣಾ ಕಂಪನಿಗಳಲ್ಲಿ, ಇತರೆ ಹಣಕಾಸು ಸಂಸ್ಥೆಗಳಲ್ಲಿನೀವು ಕಷ್ಟ ಪಟ್ಟು ದುಡಿದಹಣವನ್ನು ಹೂಡುವ ಮುನ್ನ ನೀವುಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ ಇದಾಗಿದೆ.ನೀವು ಯಾವುದೇ ವಲಯದಲ್ಲಿ ಹಣ ಹೂಡಿಕೆ ಮುನ್ನಕಂಪನಿಯ ಅಥವಾ ಕ್ಷೇತ್ರದ ಬಗ್ಗೆಹೆಚ್ಚು ತಿಳಿದುಕೊಳ್ಳಿ.  ನಿಮ್ಮಹಣಕ್ಕೆ ಹೆಚ್ಚು ಆದಾಯ ಬರುತ್ತದೆಎಂದು ಭರವಸೆ ನೀಡುವ ಹೂಡಿಕೆಯತಾಣಗಳು ಸಾಕಷ್ಟಿವೆ. ಹಾಗಂತ ನೀವು ದಿಢೀರ್ಎಂದು ಹಣವನ್ನು ಹೂಡುವ ಮುನ್ನವ್ಯಾಪಾರದ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳಿ.

2. ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆಯೇ?ನೀವು ಯಾವಾಗ ಹಣ ಹೂಡಿಕೆಗೆಮುಂದಾಗುತ್ತೀರಾ ಎಂಬ ಅರಿವು ನಿಮಗಿರಲಿ.ನಿಮ್ಮ ಹೂಡಿಕೆಗೆ ಒಂದು ಗುರಿಯಿರಲಿ. ಸರಳವಾಗಿಹೆಚ್ಚುವರಿ ಹಣವನ್ನು ಪಡೆಯುವ ಮನಸ್ಸಿನಲ್ಲಿಮುಂದಾಗದಿರಿ.

3. ಹೂಡಿಕೆಯು ಒಳಗೊಂಡಿರುವ ಅಪಾಯಗಳು ಯಾವುವು? ಯಾವುದೇಹೂಡಿಕೆ ಮಾಡುವ ಮುನ್ನ ನಿಮ್ಮಹಣವನ್ನು ಕಳೆದುಕೊಳ್ಳುವ ಅಪಾಯಗಳಿಗೆ ಒಳಗಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನಿಮಗೆಹೆಚ್ಚಿನ ಆದಾಯ ಬರದಿದ್ದರೂ ಪರವಾಗಿಲ್ಲ,ನೀವು ಹೂಡಿಕೆ ಮಾಡಿದ ಹಣವನ್ನುಮಾತ್ರ ಕಳೆದುಕೊಳ್ಳಬಾರದು. ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳು ನಿಮ್ಮಹಣವನ್ನು ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ. ಅದರೊಂದಿಗೆಆಧಾರವಾಗಿರುವ ಆಸ್ತಿಯನ್ನು ಹೊಂದಿವೆ.

4. ಹೂಡಿಕೆಯಿಂದನಾನು ಎಷ್ಟು ಗಳಿಸಬೇಕೆಂದು ನಿರೀಕ್ಷಿಸುತ್ತೇನೆ?ನೀವು ಮೀಸಲಿಟ್ಟ ಹಣವು ಈ ಹೂಡಿಕೆಗೆಎಷ್ಟು ಮುಖ್ಯ? ನಿಮ್ಮ ಯೋಜನೆಯನ್ನುತಲುಪಲು ನೀವು ಹೂಡಿದ ಹಣದಿಂದಎಷ್ಟು ಆದಾಯವನ್ನು ಪಡೆಯಬೇಕು? ಈ ರೀತಿಯ ಪ್ರಶ್ನೆಗಳಿಗೆನಿಮ್ಮಲ್ಲಿ ನೀವು ಸ್ಪಷ್ಟತೆ ಪಡೆದುಕೊಳ್ಳಬೇಕು.ಆ ಮೂಲಕ ನಿಮ್ಮಭವಿಷ್ಯದ ವೆಚ್ಚಗಳು ಮತ್ತು ಗುರಿಗಳನ್ನು ಆರ್ಥಿಕವಾಗಿಯೋಜಿಸಲು ನಿಮಗೆ ಸಾಧ್ಯವಾಗುತ್ತದೆ.

5. ಹೂಡಿಕೆಯಿಂದ ಪ್ರತಿಫಲ ಪಡೆಯಲು ಎಷ್ಟುದಿನ ಕಾಯಬೇಕಾಗಬಹುದು? ನಿಮ್ಮ ಹೂಡಿಕೆಯು ನಿವೃತ್ತಿಗೆಸಂಬಂಧಿಸಿದ ಹಣಕಾಸಿನ ಅಗತ್ಯವಾದರೆ, ನೀವು60 ವರ್ಷ ವಯಸ್ಸಿನವರೆಗೂ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಇದೇ ರೀತಿ ನೀವುಯಾವುದರ ಮೇಲೆ ಹೂಡಿಕೆ ಮಾಡಲುಬಯಸುತ್ತಿರೋ ಆ ಹೂಡಿಕೆಯಿಂದ ಪ್ರತಿಫಲಬರುವವರೆಗೂ ನೀವು ಬಂಡವಾಳ ಹೂಡಿಕೆಗೆಸಮರ್ಥರೋ, ಅಥವಾ ಹೂಡಿಕೆ ಸಾಧ್ಯವೇಎಂಬುದನ್ನು ಅರಿಯಿರಿ. ಜೊತೆಗೆ ನಿಮ್ಮ ಅಪೇಕ್ಷಿತಮೊತ್ತವನ್ನು ಪಡೆಯಲು ನೀವು ಎಷ್ಟುಸಮಯದವರೆಗೆ ಕಾಯಲು ಸಿದ್ಧರಿದ್ದೀರಿ ಎಂಬುದನ್ನುತಿಳಿದುಕೊಳ್ಳಿ. ಈ ಪ್ರಶ್ನೆಗಳಿಗೆ ಉತ್ತರಿಸಿದಾಗಅದಕ್ಕೆ ತಕ್ಕಂತಹ ಸೂಕ್ತ ಹೂಡಿಕೆಯನ್ನುನೀವು ಮಾಡಲು ಸಾಧ್ಯ.

6. ಹೂಡಿಕೆ ನೋಂದಾಯಿಸಲಾಗಿದೆಯೇ? ಕಳೆದ ಹಲವು ವರ್ಷಗಳಿಂದಅನೇಕ ಹಗರಣಗಳು ವರದಿಯಾಗಿವೆ. ಜನರನ್ನುನಂಬಿಸಿ ಮೋಸ ಮಾಡುವ ವಂಚಕರುಹೆಚ್ಚಾಗಿದ್ದಾರೆ. ಜನರ ನಂಬಿಕೆಗಳು ಮತ್ತುಸಂಬಂಧಗಳ ಆಧಾರದ ಮೇಲೆ ಜನರಿಗೆಮಂಕು ಬೂದಿ ಎರಚುತ್ತಾರೆ. ಈವಂಚಕರ ಮೇಲೆ ನ್ಯಾಯಾಲಯದ ಪ್ರಕರಣಗಳುಸಾಕಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಇದರಿಂದ ನಿಮಗೆ ಆರ್ಥಿಕಮತ್ತು ಮಾನಸಿಕ ತೊಂದರೆಯೇ ಹೆಚ್ಚು.ಹೀಗಾಗಿ ನೀವು ಯಾವುದರ ಮೇಲೆಹೂಡಿಕೆ ಮಾಡುತ್ತೀರೋ ಆ ಹಣಕಾಸು ಸಂಸ್ಥೆಮತ್ತು ಅದರ ಯೋಜನೆಗಳ ಬಗ್ಗೆಸಂಪೂರ್ಣ ಹಿನ್ನೆಲೆ ಪರಿಶೀಲನೆ ಬಹಳ ಮುಖ್ಯ.

7. ಹೂಡಿಕೆ ವಿಫಲವಾದರೆ ನಾನು ಏನು ಮಾಡಬೇಕು?ನಿಮ್ಮ ಹೂಡಿಕೆ ವಿಫಲವಾದರೆ ನಿಮ್ಮಆಯ್ಕೆಗಳು ಯಾವುವು? ತಪ್ಪನ್ನು ಸರಿಪಡಿಸಲುಅಥವಾ ನಿಮ್ಮ ಹಣವನ್ನು ಮರಳಿಪಡೆಯಲು ನೀವು ಯಾರನ್ನು ಸಂಪರ್ಕಿಸಬಹುದು?ನೀವು ಗ್ರಾಹಕರಾಗಿರುವ ಹಣಕಾಸು ಸಂಸ್ಥೆ ಆರ್‌ಬಿಐ ಅಥವಾ ಸೆಬಿಅಥವಾ ಐಆರ್‌ಡಿಎಐಗೆ ಉತ್ತರಿಸುತ್ತದೆಯೇಎಂದು ಮೊದಲು ತಿಳಿದುಕೊಳ್ಳಬೇಕು. ಆಮೂಲಕ ನೀವು ಸಹಾಯಕ್ಕಾಗಿ ಅವುಗಳನ್ನುಸಂಪರ್ಕಿಸಬಹುದು. ಏಕೆಂದರೆ ನೀವು ಮಾಡುವವ್ಯವಹಾರ ಕುರಿತಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಇವು ಒದಗಿಸುತ್ತವೆ. ಜೊತೆಗೆದೂರುಗಳನ್ನು ಎದುರಿಸಲು, ಅವರ ಕುಂದುಕೊರತೆಗಳಿಗೆ ಪರಿಹಾರವಿಧಾನಗಳನ್ನು ಸಹ ಅವು ಹೊಂದಿರುತ್ತವೆ.

8. ಹೂಡಿಕೆಯಲ್ಲಿ ನನ್ನ ನಿರ್ಗಮನ ಆಯ್ಕೆಗಳುಯಾವುವು? ನೀವು ಯಾವುದೇ ಯೋಜನೆಯಲ್ಲಿಹಣ ಹೂಡುವ ಮುನ್ನ ಎಷ್ಟುಕಾಲ ಹಣ ಹೂಡಿಕೆ ಮಾಡಬೇಕಾಗಬಹುದುಎಂದು ಅರಿತುಕೊಳ್ಳಿ. ಮತ್ತು ಮೆಚುರಿಟಿ ತಲುಪುವುದಕ್ಕೂಮುನ್ನ ಪೂರ್ವಾವಧಿ ನಿರ್ಗಮನದ ನಿಯಮಗಳೇನು? ಎಷ್ಟು ವರ್ಷಗಳ ಬಳಿಕಪೂರ್ವ ನಿರ್ಗಮನವಾಗಬಹುದು ಎಂದು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ,ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಮೊದಲು ಗ್ರಾಹಕರು ಕನಿಷ್ಠಅವಧಿಗೆ ಮುಂದುವರಿಯಬೇಕು ಎಂಬ ನಿಯಮವಿರುತ್ತದೆ. ಅದನ್ನುಪೂರೈಸದೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.ಹೀಗಾಗಿ ನೀವು ಯಾವುದೇ ಯೋಜನೆಗೆಸಹಿ ಮಾಡುವ ಮೊದಲು ಯೋಜನೆಗೆಸಂಬಂಧಿತ ದಾಖಲೆಗಳನ್ನು ಎಚ್ಚರದಿಂದ ಓದಿ. ಅಲ್ಲದೆ ಹೂಡಿಕೆಯಪೂರ್ವ ನಿರ್ಗಮನದ ಬಗ್ಗೆ ಅರಿಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಮಾದರಿಯಾದ ಕೊಡಗು SP..!

    ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವ ಮೂಲಕ ಮಾದರಿಯಾಗಿದ್ದರೆ. ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸಿ  ಕನ್ನಡ ಕಲಿಗೆ ಒತ್ತು ನೀಡಿದ್ದಾರೆ.ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಗುವನ್ನು ಅಂಗನವಾಡಿಗೆ ನಿತ್ಯವೂ ಕಳಿಸಿ ತಾವು ಕೆಲಸಕ್ಕೆ ತೆರಳುತ್ತಾರೆ ಸುಮನ್. ಕಲಿಕೆ, ಆಟ, ಊಟದ ಜೊತೆಗೆ ಮಕ್ಕಳೊಂದಿಗೆ ಈ ಅಂಗನವಾಡಿಯಲ್ಲಿ ಎಸ್‍ಪಿ ಮಗಳು ಸಹ ಬೆರೆಯುತ್ತಿದ್ದಾಳೆ. ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಯಲ್ಲಿ ಎಸ್‍ಪಿ ಪುತ್ರಿ ಖುಷಿ ಸಹ ಪಾಠ…

  • ಉಪಯುಕ್ತ ಮಾಹಿತಿ

    ನಿಮ್ಮ ಹುಟ್ಟು ಹಬ್ಬದ ಸಂಧರ್ಭದಲ್ಲಿ ಕೇಕ್ ಮೇಲೆ ಮೋಂಬತ್ತಿ ಉರಿಸುತ್ತಿರಾ!ಹಾಗದ್ರೆ ತಪ್ಪದೇ ಈ ಸುದ್ದಿ ನೋಡಿ..

    ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲೆ ಕ್ಯಾಂಡಲ್ ಗಳನ್ನು ಉರಿಸಿ ಅದನ್ನು ಆರಿಸೋದು ಕಾಮನ್. ಎಲ್ಲರೂ ಖುಷಿ ಖುಷಿಯಾಗಿ ಮೋಂಬತ್ತಿಗಳನ್ನು ಆರಿಸಿ ನಂತರ ಆ ಕೇಕ್ ಅನ್ನು ಕತ್ತರಿಸ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳು ತುಂಬಿಕೊಳ್ಳುತ್ತವೆ. ದಕ್ಷಿಣ ಕೆರೊಲಿನಾದ ಕ್ಲೆಮ್ಸನ್ ಯೂನಿವರ್ಸಿಟಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಮೋಂಬತ್ತಿ ಆರಿಸುವ ವೇಳೆ ಉಗುಳು ಕೂಡ ಕೇಕ್ ಮೇಲೆ ಬೀಳುತ್ತದೆ. ಇದರಿಂದಾಗಿ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಶೇ. 1400 ರಷ್ಟು ಜಾಸ್ತಿಯಾಗುತ್ತದೆ. ಕ್ಯಾಂಡಲ್…

  • ಸುದ್ದಿ

    ತಾಮ್ರ ಬಳಸುವುದರಿಂದ ಆಗುವ ಉಪಯೋಗಗಳೇನು ಗೊತ್ತಾ? ತಾಮ್ರದಲ್ಲಿದೆ ರೋಗಮುಕ್ತ ಗುಣಗಳು..!

    ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…

  • ಸಿನಿಮಾ

    ಸ್ಯಾಂಡಲ್ ವುಡ್ ನಟರ ಮನೆಯ ಮೇಲೆ ಐಟಿ ದಾಳಿ…ರೊಚ್ಚಿಗೆದ್ದ ಅಭಿಮಾನಿಗಳು ಮೋದಿಯವರಿಗೆ ಹೇಳಿದ್ದೇನು ಗೊತ್ತೆ?

    ಇಂದು ಮುಂಜಾನೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಗಳಾದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ , ಪವರ್ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಅಲ್ಲದೆ ನಿರ್ಮಾಪಕರುಗಳಾದ ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ಮಾಪಕರಾದ ಕಿರಂಗದೂರ್ ವಿಜಯ್, ಮನೋಹರ್, ರಾಕ್ ಲೈನ್ ವೆಂಕಟೇಶ್ ಅವರ ಮನೆಯ ಮೇಲೂ ಸಹ ದಾಳಿ ನಡೆದಿದೆ. ಸಿನಿಮಾ ಕ್ಷೇತ್ರದಲ್ಲಿ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಆಗಿ ಬದಲಾವಣೆ…

  • ಕಾನೂನು

    ಶಾಕಿಂಗ್ ಸುದ್ದಿ! ಸುಪ್ರೀಂ ಕೋರ್ಟ್ನಿಂದ ದೀಪಾವಳಿಗೆ ಪಟಾಕಿ ನಿಷೇಧ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ನವೆಂಬರ್ 1ರವರೆಗೆ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ರಾಜಧಾನಿ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ದೀಪಾವಳಿ ಆಚರಣೆ ವೇಳೆ ಸಿಡಿಮದ್ದು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿರುವುದನ್ನು ಯೋಗಗುರು ಬಾಬಾ ರಾಮ್ ದೇವ್ ಮತ್ತು ಶಿವಸೇನೆ ತೀವ್ರವಾಗಿ ಖಂಡಿಸಿದ್ದಾರೆ.

  • Health

    ಬಾಯಿ ಹುಣ್ಣಾಗಿ ಏನೂ ತಿನ್ನೋಕೆ ಆಗ್ತಿಲ್ವಾ..? ಇಲ್ಲಿದೆ ನೋಡಿ ಮನೆಮದ್ದು.

    ಬಾಯಿ ಹುಣ್ಣು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ, ಆಹಾರ ಸೇವನೆಗೂ ಇದು ಅವಕಾಶ ನೀಡುವುದಿಲ್ಲ. ಇದು ಕೆಲವೊಮ್ಮೆ ಹಲವಾರು ದಿನಗಳ ಕಾಲ ಬಾಯಿಯಲ್ಲಿ ನೋವುಂಟು ಮಾಡುತ್ತ ಲಿರುತ್ತದೆ. ಇಂತಹ ಸಮಯದಲ್ಲಿ ಇದನ್ನು ನಿವಾರಣೆ ಮಾಡಲು ನೀವು ತುಂಬಾ ಶ್ರಮ ಪಟ್ಟಿರಬಹುದು. ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿ ಬಾಯಿಯ ಹುಣ್ಣು ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆ : ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯು…