ಸುದ್ದಿ

ಕಾಶ್ಮೀರದಲ್ಲಿ ಯಾರೇ ಗನ್​​ ಹಿಡಿದರೂ, ಅವರನ್ನು ಖಂಡಿತಾ ಕೊಂದು ಹಾಕುತ್ತೇವೆ…ವಾರ್ನಿಂಗ್ ಕೊಟ್ಟ ಭಾರತೀಯ ಸೇನೆ…

138

ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಜೊತೆಗೆ ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ.

ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು ಖಂಡಿತಾ ಕೊಂದು ಹಾಕುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ ಉಗ್ರರಿಗೆ ಶರಣಾಗತಿಗೆ ಒಂದು ಅವಕಾಶ ನೀಡುತ್ತೇವೆ. ಉಗ್ರತ್ವ ಬಿಟ್ಟು ಶರಣಾಗತಿಯಾದರೆ ಬದುಕಲು ಒಂದು ಅವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನೂ ಕೊಂದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪುಲ್ವಾಮಾ ದಾಳಿಯ ಸಂಚುಕೋರನ ಹತ್ಯೆಯಾದ ಬಳಿಕ ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಯಾರೆಲ್ಲ ಸ್ಥಳೀಯ ಉಗ್ರರ ಜೊತೆ ಸೇರಿದ್ದಾರೋ ಅವರೆಲ್ಲರೂ ಶರಣಾಗಬೇಕು. ತಾಯಂದಿರು ಮಕ್ಕಳನ್ನು ಶರಣಾಗುವಂತೆ ಮಾಡಬೇಕು ಎಂದು ಸೇನಾ ಅಧಿಕಾರಿಗಳು ಈ ವೇಳೆ ಮನವಿ ಮಾಡಿದರು.

ಪಾಕಿಸ್ತಾನ ಮುಂದಾಳತ್ವದ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಕಣಿವೆಯಿಂದ ಸಂಪೂರ್ಣವಾಗಿ ನಾವು ನಿರ್ಮೂಲನೆ ಮಾಡುತ್ತೇವೆ. ದೇಶವೂ ಗನ್ ಹಿಡಿದ ಕಾಶ್ಮೀರಿ ಯುವಕರಿಗೆ ಶರಣಾಗುವ ಅವಕಾಶವನ್ನು ನೀಡಿದೆ. ಈ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅವಕಾಶ ನೀಡಲಾಗಿದೆ ಎಂದು ಸೇನಾ ಲೆಫ್ಟಿನೆಂಟ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೊನ್ ಹೇಳಿದರು.

ಸೋಮವಾರ ನಡೆದ 16 ಗಂಟೆಗಳ ಎನ್​ಕೌಂಟರ್​ನಲ್ಲಿ ಹತ್ಯೆಯಾದವರನ್ನು ಕಮ್ರಾನ್, ಅಬ್ದುಲ್ ರಷೀದ್ ಅಲಿಯಾಸ್ ಘಾಜಿ ಹಾಗೂ ಹಿಲಾಲ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಅಬ್ದುಲ್ ರಷೀದ್ ಎಂಬಾತ ಪುಲ್ವಾಮದ ಉಗ್ರ ದಾಳಿಯ ಸೂತ್ರಧಾರ ಎನ್ನಲಾಗಿದೆ. ಇನ್ನು, ಅಬ್ದುಲ್ ರಷೀದ್ ಮತ್ತು ಕಮ್ರಾನ್ ಇಬ್ಬರೂ ಕೂಡ ಜೈಷೆ ಮೊಹಮ್ಮದ್ ಸಂಘಟನೆಯ ಡಿವಿಷನಲ್ ಕಮಾಂಡರ್ ಆಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಐಟಿ ರೇಡ್ ಆದ ಮೇಲೆ ಏರ್ಪೋರ್ಟ್ ನಿಂದ ಬಂದ ಯಶ್ ಮನೆಗೆ ಹೋಗದೆ ಮೊದಲು ಹೋಗಿದ್ದು ಎಲ್ಲಿಗೆ ಗೊತ್ತಾ?

    ನಟ ರಾಕಿಂಗ್ ಸ್ಟಾರ್ ಯಶ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಯಶ್ ಅವರು ಹೊಂದಿರುವ ಕೊಠಡಿಯನ್ನು ಕೂಡ ಪರಿಶೀಲಿಸಿದ್ದಾರೆ. ಯಶ್ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದು, ಐಟಿ ದಾಳಿಯ ಮಾಹಿತಿ ತಿಳಿದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಯಶ್, ಅಲ್ಲಿಂದ ನೇರವಾಗಿ ಹೋಟೆಲ್ ಗೆ ತೆರಳಿದ್ದಾರೆ. ಯಶ್ ಅವರು…

  • bank, ಬ್ಯಾಂಕ್

    ಆಧಾರ್ ಕಾರ್ಡ್- ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ದಂಡ ಗ್ಯಾರಂಟಿ

    ನವದೆಹಲಿ: ಇಂದಿನ ಕಾಲದಲ್ಲಿ ಪ್ಯಾನ್ ಕಾರ್ಡ್ (PAN card) ಕಡ್ಡಾಯ ದಾಖಲೆಯಾಗಿದೆ. ಇದು ಇಲ್ಲದೆ, ಯಾವುದೇ ಹಣಕಾಸಿನ ವಹಿವಾಟು ನಡೆಯುವುದಿಲ್ಲ. ಪ್ರತಿ ಹಣಕಾಸಿನ ವ್ಯವಹಾರವನ್ನು ಮಾಡಲು ಮತ್ತು ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಲು ಇದು ಅಗತ್ಯವಾಗಿರುತ್ತದೆ. ಬ್ಯಾಂಕಿನಿಂದ ಕಚೇರಿಯವರೆಗೆ, ನೀವು ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸಿನ ಕೆಲಸ ಮಾಡಲು ಸಾಧ್ಯವಿಲ್ಲ.   ಇದೀಗ ಪ್ಯಾನ್ ಕಾರ್ಡ್ ಅನ್ನು ಆಧಾರ್ (Adhaar) ಮತ್ತು ಎಲ್ಲೆಡೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೊದಲು ಅದರ ಕೊನೆಯ ದಿನಾಂಕ 30 ಸೆಪ್ಟೆಂಬರ್…

    Loading

  • ಸುದ್ದಿ

    ಯಶ್ ತುಂಬಿಸಿದ್ರು ಕೆರೆ, ಆಫಿಸರ್ಸ್ ತುಂಬಿಕೊಂಡ್ರು ಜೇಬು..!

    ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ ಒಂದು ಕೋಟಿ ಖರ್ಚು ಮಾಡಿದೆ ಅಂತಾ ಹಣ ಗುಳುಂ ಮಾಡಿದೆ. ನಟ ಯಶ್ 2017ರಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ಸ್ವಂತ ಖರ್ಚಿನಲ್ಲಿ ಬರೊಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು…

  • ಆರೋಗ್ಯ

    9 ಕ್ಯಾನ್ಸರ್‌ ಔಷಧಗಳ ಬೆಲೆ ಇಳಿಕೆ

    ಮಾರ್ಚ್‌ನಲ್ಲಿ ಸುಮಾರು 380 ಔಷಧಗಳ ದರಗಳನ್ನು ಸರಕಾರ ಕಡಿತಗೊಳಿಸಿತ್ತು.ಈ ಮೂಲಕ ಇದುವರೆಗೂ ಸುಮಾರು 1000 ಕ್ಯಾನ್ಸರ್‌ ಚಿಕಿತ್ಸೆ ಔಷಧಗಳ ದರವನ್ನು ಸರಕಾರ ಇಳಿಸಿದೆ ಎಂದು ತಿಳಿದುಬಂದಿದೆ. ಕಳೆದ ಫೆಬ್ರವರಿಯಲ್ಲಿ ಸರಕಾರ ಸುಮಾರು 42 ಕ್ಯಾನ್ಸರ್‌ ಔಷಧಗಳ ದರವನ್ನು ಶೇ. 30 ರಷ್ಟು ಇಳಿಸಿತ್ತು. ಇದರಿಂದ ಸುಮಾರು 355 ಬ್ರ್ಯಾಂಡ್‌ನ ಔಷಧಗಳ ಬೆಲೆಯಲ್ಲಿ ಕಡಿತವಾಗಿತ್ತು. ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿದ ಕೆಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ (ಎನ್‌ಪಿಪಿಎ) ಶೇ. 60ರಷ್ಟು ಇಳಿಕೆ ಮಾಡಿದೆ. ಎರ್ಲೊಟಿನಾಬ್‌,…

  • ಸುದ್ದಿ

    ಮಧುಮಗಳಿಲ್ಲದೆ ಮದುವೆ ಮಾಡಿ ಮಗನ ಕನಸನ್ನು ನನಸು ಮಾಡಿದ ಪೋಷಕರು…!

    ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಮಗನ ಕನಸನ್ನು ನನಸು ಮಾಡಿದ ತಂದೆ… ಅಜಯ್ ಬಾರೋಟ್ ಸಣ್ಣ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು. ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ…