Sports

ಭಾರತ 6 – ಪಾಕಿಸ್ತಾನ ಸೊನ್ನೆ, 1996ರಲ್ಲಿ ಬೆಂಗಳೂರಲ್ಲೂ ಸೋಲನ್ನಪ್ಪಿತ್ತು ಪಾಕಿಸ್ತಾನ….!

31

ಈ ಬಾರಿಯ ವಿಶ್ವಕಪ್‍ನ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಿಗೆ ಮಳೆರಾಯನೇ ವಿಲನ್ ಆಗುತ್ತಿದ್ದು, ಭಾನುವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶ್ವಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 6 ಪಂದ್ಯಗಳಲ್ಲಿ ಸೆಣಸಾಡಿದ್ದು, ಆರು ಬಾರಿಯೂ ಭಾರತವೇ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾನುವಾರ 7ನೇ ಪಂದ್ಯ ನಡೆಯಲಿದ್ದು ವಿಜಯಲಕ್ಷ್ಮಿ ಯಾರ ಪರವಾಗಿದ್ದಾಳೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ಧ 39 ರನ್‍ಗಳಿಂದ ಸೋಲನುಭವಿಸಿತ್ತು. ವಿಶ್ವಕಪ್‍ನಲ್ಲಿ ಇತ್ತಂಡಗಳೂ 4 ವರ್ಷ ಹಿಂದೆ 2015ರಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ 76 ರನ್‍ಗಳಿಂದ ಗೆಲುವು ಸಾಧಿಸಿತ್ತು.1992ರಲ್ಲಿ ಭಾರತ-ಪಾಕ್ ಮೊದಲ ಬಾರಿಗೆ ವಿಶ್ವಕಪ್‍ನಲ್ಲಿ ಪರಸ್ಪರ ಸೆಣಸಾಡಿತ್ತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 43 ರನ್‍ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 54 ರನ್ ಗಳಿಸಿದ್ದರು. ಜೊತೆಗೆ 10 ಓವರ್ ನಲ್ಲಿ 37 ರನ್ ನೀಡಿ 1 ವಿಕೆಟ್ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದ್ದರು.

ವಿಶ್ವಕಪ್ 1999 – ಬೆಂಗಳೂರಲ್ಲಿ ಸಿಧು, ವೆಂಕಟೇಶ್ ಪ್ರಸಾದ್, ಕುಂಬ್ಳೆ ಹೀರೋ: 1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‍ನ ಕಾರ್ಟರ್ ಫೈನಲ್ ಅಹರ್ನಿಶಿ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 39 ರನ್‍ಗಳಿಂದ ಪರಾಭವಗೊಳಿಸಿತ್ತು. ಈ ಪಂದ್ಯದಲ್ಲಿ 93 ರನ್ ಗಳಿಸಿದ ನವಜೋತ್ ಸಿಂಗ್ ಸಿಧು ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಸಚಿನ್ 31, ಸಂಜಯ್ ಮಾಂಜ್ರೇಕರ್ 20, ಮೊಹಮ್ಮದ್ ಅಜರುದ್ದೀನ್ 20, ವಿನೋದ್ ಕಾಂಬ್ಳಿ 24, ಅಜಯ್ ಜಡೇಜ 45, ಅನಿಲ್ ಕುಂಬ್ಳೆ 10, ಜಾವಗಲ್ ಶ್ರೀನಾಥ್ 12, ನಯನ್ ಮೊಂಗಿಯ 3 ರನ್ ಗಳಿಸಿ ನಿಗದಿತ 50 ಓವರ್ ಮುಗಿದಾಗ ಭಾರತ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು.

ಪಾಕಿಸ್ತಾನದ ಪರವಾಗಿ ವಖಾರ್ ಯೂನಿಸ್ ಹಾಗೂ ಮುಷ್ತಾಖ್ ಅಹ್ಮದ್ ತಲಾ 2 ವಿಕೆಟ್ ಗಳಿಸಿದರೆ. ಅತಾ-ಉರ್-ರೆಹ್ಮಾನ್, ಆಖಿಬ್ ಜಾವೇದ್, ಅಮೀಲ್ ಸೊಹೇಲ್ ತಲಾ 1 ವಿಕೆಟ್ ಗಳಿಸಿದರು. ವಖಾರ್ ಯೂನಿಸ್ ಹಾಗೂ ಆಖಿಬ್ ಜಾವೇದ್ 10 ಓವರ್‍ಗಳಲ್ಲಿ ತಲಾ 67 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.ವಿಶ್ವಕಪ್ 2015: ಆಸ್ಟ್ರೇಲಿಯಾದ ಆಡಿಲೇಡ್‍ನಲ್ಲಿ 2015ರಲ್ಲಿ ಭಾರತ ನೀಡಿದ 300 ರನ್ ಟಾರ್ಗೆಟ್ ಗೆ ಉತ್ತರವಾಗಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ 224 ರನ್‍ಗಳಿಗೆ ಆಲೌಟಾಗಿ ಭಾರತಕ್ಕೆ 76 ರನ್‍ಗಳ ಗೆಲುವು ನೀಡಿತು. ಈ ಪಂದ್ಯದಲ್ಲಿ 107 ರನ್ ಗಳಿಸಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ