ಸುದ್ದಿ

IMA ವಿರುದ್ಧ 11 ಸಾವಿರಕ್ಕು ಹೆಚ್ಚು ದಾಕಲಾದ ಕಂಪ್ಲೆಂಟ್…..!

22

ಐಎಂಎ ಜ್ಯುವೆಲ್ಲರ್ಸ್ ನಿಂದ ಮೋಸಕ್ಕೊಳಗಾಗಿರುವವರ ಕಂಪ್ಲೆಂಟ್ ಸಂಖ್ಯೆ 11 ಸಾವಿರಕ್ಕೇರಿದೆ. ಶಿವಾಜಿನಗರ ಸಮದ್ ಹೌಸ್ ಚೌಟ್ರಿಯಲ್ಲಿ ಬಂಡಲ್ ಬಂಡಲ್‍ಗಟ್ಟೆ ಕಂಪ್ಲೆಂಟ್‍ಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ.

ಎಸ್‍ಐಟಿ ಮುಖ್ಯಸ್ಥರನ್ನಾಗಿ ಎಡಿಜಿಪಿ ಸಲೀಂ ನೇಮಕ ಬಹುತೇಕ ಖಚಿತ ಅಂತ ತಿಳಿದು ಬಂದಿದೆ. ಮುಸ್ಲಿಂ ಸಮುದಾಯದವರೇ ಆಗಿರುವ ಸಲೀಂ ನಿಯೋಜಿಸಿದ್ರೆ ಉತ್ತಮ, ತನಿಖೆಗೆ ಸಹಕಾರಿಯಾಗುತ್ತದೆ ಅನ್ನೋದು ಗೃಹ ಸಚಿವ ಎಂ.ಬಿ. ಪಾಟೀಲರ ಭಾವನೆ. ಹೀಗಾಗಿ, ಇಂದು ಗೃಹ ಸಚಿವರು ಆದೇಶ ಹೊರಡಿಸುವ ಸಾಧ್ಯತೆ ಇದೆ.

ಒಂದು ವೇಳೆ, ಸಲೀಂ ಹಿಂದೆ ಸರಿದರೆ, ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ನೇಮಿಸುವ ಸಾಧ್ಯತೆಯೂ ಇದೆ. ಈ ಮಧ್ಯೆ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ನಾಪತ್ತೆಯಾಗಿರುವ ಐಎಂಎ ಮಾಲೀಕನ ವಿರುದ್ಧ ರಸ್ತೆಗಿಳಿದಿದ್ದ ಮೋಸ ಹೋದವರು, ಧಿಡೀರ್ ಅಂತ ಶಾಸಕ ರೋಷನ್ ಬೇಗ್ ಮನೆಗೆ ಲಗ್ಗೆ ಇಟ್ಟಿದರು. ಕೋಲ್ಸ್ ಪಾರ್ಕ್ ನಲ್ಲಿರುವ ರೋಷನ್ ಬೇಗ್ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪ್ರತಿಭಟನಾಕಾರರನ್ನ ಪೊಲೀಸರು ಮನವೊಲಿಸೋ ಯತ್ನ ಮಾಡಿದರು. ರೋಷನ್ ಬೇಗ್ ಮನೆಯಲ್ಲಿ ಇಲ್ಲ ಅನ್ನೋದು ತಿಳಿದು ಪ್ರತಿಭಟನಾಕಾರರು ಜಾಗ ಖಾಲಿ ಮಾಡಿದರು. ಶಾಸಕ ರೋಷನ್ ಬೇಗ್ ದೆಹಲಿಯಿಂದ ಬೆಂಗಳೂರಿಗೆ ಮರಳುತ್ತಿದ್ದು ಮುಂಜಾಗೃತ ಕ್ರಮವಾಗಿ ರೋಷನ್ ಬೇಗ್ ಮನೆ ಬಳಿ ಪೊಲೀಸ್ ಬೀಗಿ ಭದ್ರತೆ ಒದಗಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಎಲೆಕ್ಷನ್ ಮುಗಿದ ನಂತರ, ಸುಮಲತಾ ಅಂಬರೀಶ್ ಊರು ಖಾಲಿ ಮಾಡುತ್ತಾರೆ ಎಂದ ರೇವಣ್ಣ..?

    ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ದ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರೆದಿದೆ. ಸಂಸದ ಎಲ್.ಆರ್. ಶಿವರಾಮೇಗೌಡ, ಸುಮಲತಾ ಗೌಡತಿ ಅಲ್ಲ. ಅವರು ನಾಯ್ಡು ಎಂದು ಹೇಳಿದ್ದರಲ್ಲದೆ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ ಕಂಡು ಸುಮಲತಾ ಈ ಚುನಾವಣೆಗೆ ನಿಂತಿದ್ದಾರೆಂದು ಕಾಣಿಸುತ್ತದೆ ಎಂದಿದ್ದರು. ಇದೀಗ ಸಚಿವ ರೇವಣ್ಣ ಸುಮಲತಾ ವಿರುದ್ದ ವಾಗ್ದಾಳಿ ಮುಂದುವರೆಸಿದ್ದು, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಮೇ 23 ರ…

  • ಸಿನಿಮಾ

    ಕೊನೆಗೂ ತಮ್ಮ ಮಗಳ ಫೋಟೋವನ್ನು ಬಹಿರಂಗ ಮಾಡಿದ ಯಶ್ ರಾಧಿಕಾ ಪಂಡಿತ್ ದಪತಿ..ಯಾವ ಹೆಸರು ಇಟ್ಟಿದ್ದಾರೆ ನೋಡಿ…

    ಸ್ಯಾಂಡಲ್ ವುಡ್ ನ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ. ಅಕ್ಷಯ ತೃತೀಯ ದಿನ ಮಂಗಳವಾರದಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು…

  • ಸುದ್ದಿ

    ಇನ್ಫೋಸಿಸ್ ಉದ್ಯೋಗಿಗಳಿಗೆ ಕಾದಿದೆ ಒಂದು ಶಾಕಿಂಗ್ ಸುದ್ದಿ ; 10000 ಸಿಬ್ಬಂದಿ ಕೆಲಸಕ್ಕೆ ಕತ್ತರಿ..! ಯಾಕೆ ಗೊತ್ತಾ?

    ಉದ್ಯೋಗ ಹಂತ 6ರಲ್ಲಿ ಬರುವ ಹಿರಿಯ ಮ್ಯಾನೇಜರ್‌ಗಳ ಕೆಲಸಕ್ಕೆ ಇದೀಗ ಕುತ್ತು ಬಂದಿದೆ. ಇನ್ಫೋಸಿಸ್ನ ಹಂತ 6,7, ಹಾಗೂ 8ರಲ್ಲಿ ಒಟ್ಟು 30,092 ಉದ್ಯೋಗಿಗಳು ಇದೀಗ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 2,200 ಮಂದಿ ಉದ್ಯೋಗ ಕಳೆದು ಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಐಟಿ ದ್ಯತ್ಯ ಕಾಗ್ನಿಜೆಂಟ್ಸಂಸ್ಥೆ ಕೂಡಾ ತನ್ನ 13,000 ನೌಕರರನ್ನು ಕೆಲಸದಿಂದ ಕಿತ್ತು ಹಾಕಿತ್ತು. ಇನ್ಫೋಸಿಸ್ಕೂಡಾ ಇದೀಗ ಕಾಗ್ನಿಜೆಂಟ್ ಹಾದಿಯನ್ನೇ ತುಳಿಯುತ್ತಿದೆ. ಹಿರಿಯ ಉದ್ಯೋಗಿಗಳ ಕಥೆ ಹೀಗಾದ್ರೆ, ಕಿರಿಯ ಉದ್ಯೋಗಿಗಳೂ ಕೂಡಾ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿ ಇದ್ದಾರೆ….

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(20 ಫೆಬ್ರವರಿ, 2019) ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ದಿನದಲ್ಲಿ…

  • inspirational

    ನೀರೊಳಗಿರುವ ಟೈಟಾನಿಕ್ ಹಡಗನ್ನು ಮೇಲೆತ್ತುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ ಏಕೆ? ರೋಚಕ ಸತ್ಯವನ್ನು ತಿಳಿಯಿರಿ.

    ಟೈಟಾನಿಕ್ ಸಿನಿಮಾವನ್ನ ಯಾರು ತಾನೇ ನೋಡಿಲ್ಲ ಹೇಳಿ, ಭಾರಿ ಗಾತ್ರದ ಈ ಹಡಗು ಪ್ರಯಾಣಿಸಿದ ರೀತಿ ಹಾಗು ಹೇಗೆ ಮುಳುಗಿತು ಎನ್ನುವುದನ್ನು ವಿವರವಾಗಿ ಹೇಳಿಕೊಟ್ಟ ಈ ಚಿತ್ರ ಇಂದಿಗೂ ದಾಖಲೆಯನ್ನು ಬರೆದಿದೆ. ಹಾಲಿವುಡ್ ನ ಸಿನಿಮಾ ನಿರ್ಮಾಣದ ರೂಪುರೇಷೆಯನ್ನೇ ಬದಲಿಸಿದ್ದ ಈ ಚಿತ್ರ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ಆಗಿತ್ತು, ಚಿತ್ರ ನೋಡಿದವರು ಕೂಡ ಒಂದು ಕ್ಷಣ ದಂಗಾಗಿದ್ದರು, ಅಷ್ಟು ಎಫೆಕ್ಟ್ ನೀಡಿ ಇಡೀ ಚಿತ್ರ ತಂಡ ಇದೊಂದು ಘಟನೆಯನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದರು….

  • nation

    400 ಶಾಲಾ ಮಕ್ಕಳ ಪ್ರಾಣ ಉಳಿಸಲು,10ಕೆಜಿ ಬಾಂಬ್ ಎತ್ತುಕೊಂಡು 1ಕಿಮೀ ಓಡಿದ, ಈ ಪೇದೆ ರಿಯಲ್ ಸಿಂಗಂ!ಈ ಲೇಖನಿ ಓದಿ ಶಾಕ್ ಆಗ್ತೀರಾ..!

    ಅಭಿಷೇಕ್ ಪಟೇಲ್ ಎಂಬ ಪೇದೆಯೊಬ್ಬರು 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು, 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.