ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಸ್ತುತ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಟೆಲಿಕಾಂ ಆಪರೇಟರ್ ವಡಾಫೋನ್ ಐಡಿಯಾಗೆ ಶಾಕ್ ಉಂಟಾಗಿದೆ. ಸಂಸ್ಥೆಗೆ ಎರಡನೇ ತ್ರೈಮಾಸಿಕದಲ್ಲಿ 50,921 ಕೋಟಿ ರೂ ನಷ್ಟ ಉಂಟಾಗಿದೆ.ಭಾರತದ ಟೆಲಿಕಾಂ ಸಂಸ್ಥೆಯೊಂದು ಇಷ್ಟೊಂದು ನಷ್ಟ ಅನುಭವಿಸಿರುವುದು ಇದೇ ಮೊದಲ ಭಾರಿ ಎನ್ನಲಾಗಿದೆ.

ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ನೆಟ್ವರ್ಕ್ ಏರ್ಟೆಲ್ಗೆ 23,045 ಕೋಟಿ ರೂ ನಷ್ಟ ಉಂಟಾಗಿದೆ. ಬಾಕಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶದ ನಂತರ ಏರ್ಟೆಲ್, ವಡಾಫೋನ್ ಐಡಿಯಾ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ.

ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ವಡಾಫೋನ್ ಐಡಿಯಾ ಕೇವಲ 4,874 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ, ನಷ್ಟದ ಮೊತ್ತ ಮಿತಿಮೀರಿ ಏರಿಕೆ ಆಗಿದ್ದು, ಸಂಸ್ಥೆಗೆ ನುಂಗಲಾರದ ತುತ್ತಾಗಿದೆ.ವಡಾಫೋನ್ ಐಡಿಯಾ ಸಂಸ್ಥೆ ಇತ್ತೀಚೆಗೆ ಸಂಸ್ಥೆಯನ್ನು ಮುಚ್ಚಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಅದು ನಿಜವಾಗುವ ಲಕ್ಷಣ ಗೋಚರವಾಗಿದೆ.

ಉಂಟಾಗಿರುವ ನಷ್ಟವನ್ನು ತುಂಬಿಕೊಡಲು ಸರ್ಕಾರದ ಬಳಿ ಕೇಳುತ್ತೇವೆ. ಇದರ ಆದಾರದ ಮೇಲೆ ಉದ್ಯಮ ಮುಂದುವರಿಸಬೇಕೆ ಬೇಡವೇ ಎನ್ನುವುದನ್ನು ನಿರ್ಧಾರ ಮಾಡುತ್ತೇವೆ ಎಂದು ವಡಾಫೋನ್ ಐಡಿಯಾ ಹೇಳಿದೆ. ಈ ಮೂಲಕ ವಡಾಫೋನ್ ಐಡಿಯಾ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಊಟ ಆದ್ಮೇಲೆ ಬಾಳೆ ಹಣ್ಣು ತಿನ್ನುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಅಂತ ತಜ್ಞರು ಹೇಳಿದ್ದಾರೆ. ಬೊಜ್ಜು ನಿಯಂತ್ರಿಸುತ್ತದೆ :- ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , 5000 ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರುಢಪಟ್ಟಿದೆ….
ನಮ್ಮ ಸುರಕ್ಷತೆಗೋಸ್ಕರ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿ ನಾವು ವಾಹನ ಚಲಾಯಿಸಬೇಕಾಗುತ್ತದೆ. ಆದರೆ ಕೆಲವೊಂದು ಸಮಯಗಳಲ್ಲಿ ಮಾತ್ರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸದೇ ಬೇರೆ ವಿದಿಯೇ ಇಲ್ಲ. ಇದೇ ರೀತಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿಯೊಬ್ಬಳು ಪರೀಕ್ಷೆಗೆ ತಡವಾಗುತ್ತದೆ ಎಂಬ ಕಾರಣದಿಂದ ರಸ್ತೆ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸಿದ ಕಾರಣ ಪೊಲೀಸರು ತಡೆದಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಪರೀಕ್ಷೆಗೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಓನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ರಸ್ತೆ ಸಂಚಾರ…
ನೀವು ಯಾವುದೇ ದೇವರ ಪೂಜೆಯನ್ನುಮಾಡಿ, ಆದ್ರೆ ಪೂಜೆಯನ್ನುಮಾಡಿ ಮಾಡುವಾಗ ಪ್ರಮುಖವಾಗಿ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು ನಂಬಿಕೆ ಹಾಗೂ ಶ್ರದ್ಧೆ.ಇವೆರಡು ಅಂಶಗಳು ಮನಸ್ಸಿನಲ್ಲಿಲ್ಲದಿದ್ದರೆ ಮಾಡುವ ಪೂಜಾವಿಧಾನಗಳು ವ್ಯರ್ಥವೆನಿಸುತ್ತವೆ…
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.
ಮತ್ತೆ ನಮ್ಮ ಗಣೇಶ ಬಂದ. ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬುಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.