ಸುದ್ದಿ

ಇನ್ನು ಮುಂದೆ ಈ ಸಿಮ್ ಗಳು ಬ್ಯಾನ್; ಬಳಕೆದಾರರೂ ಬೇಗ ಎಚ್ಚೆತ್ತುಕೊಳ್ಳಿ, ಈ ಸುದ್ದಿಯನ್ನು ಓದಿ,.!

65

ಪ್ರಸ್ತುತ  ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಈ  ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಟೆಲಿಕಾಂ ಆಪರೇಟರ್ ವಡಾಫೋನ್​ ಐಡಿಯಾ​ಗೆ ಶಾಕ್​ ಉಂಟಾಗಿದೆ. ಸಂಸ್ಥೆಗೆ  ಎರಡನೇ ತ್ರೈಮಾಸಿಕದಲ್ಲಿ 50,921 ಕೋಟಿ ರೂ  ನಷ್ಟ ಉಂಟಾಗಿದೆ.ಭಾರತದ ಟೆಲಿಕಾಂ ಸಂಸ್ಥೆಯೊಂದು ಇಷ್ಟೊಂದು ನಷ್ಟ ಅನುಭವಿಸಿರುವುದು ಇದೇ ಮೊದಲ ಭಾರಿ ಎನ್ನಲಾಗಿದೆ.

ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ನೆಟ್ವರ್ಕ್ ಏರ್ಟೆಲ್ಗೆ 23,045 ಕೋಟಿ ರೂ ನಷ್ಟ ಉಂಟಾಗಿದೆ. ಬಾಕಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶದ ನಂತರ ಏರ್ಟೆಲ್, ವಡಾಫೋನ್​ ಐಡಿಯಾ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ.

ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ವಡಾಫೋನ್​ ಐಡಿಯಾ ಕೇವಲ 4,874 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ, ನಷ್ಟದ ಮೊತ್ತ ಮಿತಿಮೀರಿ ಏರಿಕೆ ಆಗಿದ್ದು, ಸಂಸ್ಥೆಗೆ ನುಂಗಲಾರದ ತುತ್ತಾಗಿದೆ.ವಡಾಫೋನ್​ ಐಡಿಯಾ ಸಂಸ್ಥೆ ಇತ್ತೀಚೆಗೆ ಸಂಸ್ಥೆಯನ್ನು ಮುಚ್ಚಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಅದು ನಿಜವಾಗುವ ಲಕ್ಷಣ ಗೋಚರವಾಗಿದೆ.

ಉಂಟಾಗಿರುವ ನಷ್ಟವನ್ನು ತುಂಬಿಕೊಡಲು ಸರ್ಕಾರದ ಬಳಿ ಕೇಳುತ್ತೇವೆ. ಇದರ ಆದಾರದ ಮೇಲೆ ಉದ್ಯಮ ಮುಂದುವರಿಸಬೇಕೆ ಬೇಡವೇ ಎನ್ನುವುದನ್ನು ನಿರ್ಧಾರ ಮಾಡುತ್ತೇವೆ ಎಂದು ವಡಾಫೋನ್ ಐಡಿಯಾ ಹೇಳಿದೆ. ಈ ಮೂಲಕ ವಡಾಫೋನ್​ ಐಡಿಯಾ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ