ಉಪಯುಕ್ತ ಮಾಹಿತಿ

ಮನೆಯಲ್ಲೇ ರೋಸ್ ವಾಟರ್ ಸುಲಭವಾಗಿ ತಯಾರಿಸುವ ವಿಧಾನ ಮತ್ತು ಅದರ ಉಪಯೋಗಗಳನ್ನು ತಿಳಿಯಿರಿ…

544

ರೋಸ್ ವಾಟರ್ ತ್ವಚೆಯ ಆರೈಕೆ ಗೆ ಉತ್ತಮವಾದದ್ದು. ಇದನ್ನು ಮುಖಕ್ಕೆ ದಿನವೂ ಹಚ್ಚುವುದರಿಂದ ಕಲೆಗಳು ನಿವಾರಣೆಯಾಗುತ್ತವೆ. ಚರ್ಮದ ಕಾಂತಿ ಹೆಚ್ಚಾಗುತ್ತದೆ. ಸುಕ್ಕು ಗಟ್ಟುವುದು ನಿಲ್ಲುತ್ತದೆ.

ಇದೂ ಕೇವಲ ಸೌಂದರ್ಯಕ್ಕೆ ಮಾತ್ರ ಒಳ್ಳೆಯದಲ್ಲ, ಇದರ ಪರಿಮಳ ನಮ್ಮ ಸ್ಟ್ರೆಸ್ ಅನ್ನು ದೂರವಾಗುತ್ತದೆ. ಮನಸ್ಸು ಇದರ ಸುವಾಸನೆಯಿಂದ ಹಗುರಾಗಿ ಹೊಸ ಚೈತನ್ಯ ದೊರಕುತ್ತದೆ.

ಆದರೆ ಮಾರುಕಟ್ಟೆಯಲ್ಲಿ ಸಿಗುವ ರೋಸ್ ವಾಟರ್ ದುಬಾರಿ ಮತ್ತು ಅದರಲ್ಲಿ ಕಲಬೇರಿಕೆಯೂ ಇರಬಹುದು. ಮನೆಯಲ್ಲೇ ತಯಾರಿಸಿದ ರೋಸ್ ವಾಟರ್ ಸುರಕ್ಷಿತವಾಗಿರುತ್ತದೆ ಮತ್ತು ನಾವು ಕಡಿಮೆ ಕರ್ಚಿನಲ್ಲಿ ಎಷ್ಟು ಬೇಕಾದರೂ ಉಪಯೋಗಿಸಬಹುದು.

ಮಾಡುವ ವಿಧಾನ

*ಕೆಂಪು ಬಣ್ಣದ ಪರಿಮಳ ಭರಿತ ಗುಲಾಬಿಗಳನ್ನು ಹಾರಿಸಿಕೊಳ್ಳಿ. ಅದರಲ್ಲೂ ನೀವು ಮನೆಯಲ್ಲಿ ಗುಲಾಬಿ ಬೆಳಸಿದ್ದರೆ ಇನ್ನೂ ಒಳ್ಳೆಯದು.

*ಗುಲಾಬಿಗಳನ್ನು ಮೂರ್ನಾಲ್ಕು ಬಾರಿ ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಅದರ ದಳಗಳನ್ನು ತೆಗೆದು ಇಟ್ಟುಕೊಳ್ಳಿ.

*ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕಾಯಿಸಿ. ನಂತರ ಒಲೆಯನ್ನು ಆರಿಸಿ ಬಿಡಿ. ಈ ಬಿಸಿನೀರನ್ನು ಒಲೆಯಿಂದ ಇಳಿಸಿ ದ ನಂತರ ತೊಳೆದ ಗುಲಾಬಿ ದಳಗಳನ್ನು ಹಾಕಿ ಮುಚ್ಚಳ ಮುಚ್ಚಿ ಒಂದು ಅರ್ಧ ಗಂಟೆ ಹಾಗೆ ಬಿಡಿ.

*ನಂತರ ಗುಲಾಬಿ ಈ ನೀರನ್ನು ಸೋಸಿ ಒಂದು ಡಬ್ಬಿಯಲ್ಲಿ ಶೇಖರಿಸಿ. ಈಗ ರೋಸ್ ವಾಟರ್ ಪರಿಮಳ ವಾಗಿಯೂ ಶುದ್ದವಾಗಿಯಯೂ ಇರುತ್ತದೆ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ