ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯೌವ್ವನದಲ್ಲಿ ತ್ವಚೆಯ ಸೌಂದರ್ಯದ ಕಾಳಜಿವಹಿಸಿದರೆ ವಯಸ್ಸಾದಂತೆ ಅದರ ಪ್ರತಿಫಲ ಕಾಣಬಹುದು. ಸಾಮಾನ್ಯವಾಗಿ ಹೆಚ್ಚಿನವರು ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಹಲವು ರೀತಿಯ ರಾಸಾಯನಿಕ ಸೌಂದರ್ಯವರ್ಧಕಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಎಲ್ಲ ಕಡೆಯು ಹೇರಳವಾಗಿ ದೊರೆಯುವ ಕೆಲ ಗಿಡಗಳಿಂದಲೂ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹೌದು, ಲೋಳೆಸರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಅಲೋವೇರ ಎಲೆಗಳನ್ನು ಬಳಸಿ ಕೂಡ ತ್ವಚೆಯನ್ನು ಆರೈಕೆ ಮಾಡಬಹುದು. ಪ್ರಸ್ತುತ ಅನೇಕ ಕಂಪೆನಿಗಳು ಸಹ ಅಲೋವೇರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಆದರೆ ನೇರವಾಗಿ ಲೋಳೆಸರ ಎಲೆಗಳಿಂದಲೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನೆನಪಿರಲಿ.

ಅಲೋವೇರಾ ಚರ್ಮದ ಮೇಲೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಬರುತ್ತದೆ. ಅಲ್ಲದೆ, ಚರ್ಮಕ್ಕೆ ಬೇಕಾದ ಪೋಷಕಾಂಶ ಕೂಡ ಲೋಳೆರಸದಿಂದ ಸಿಗುತ್ತದೆ. ಒಂದು ವೇಳೆ ಚರ್ಮದ ಅಲರ್ಜಿಯಿದ್ದರೆ ನೀವು ಅಲೋವೇರ ಜೆಲ್ಗಳನ್ನು ಬಳಸದಿರುವುದು ಉತ್ತಮ.
ಚರ್ಮದ ಹೊಳಪು : ಚರ್ಮದ ಸೌಂದರ್ಯವನ್ನು ಸುಧಾರಿಸಲು ಬಯಸಿದರೆ, ಅಲೋವೆರಾ ಜೆಲ್ ಅನ್ನು ಬಳಸುವುದು ಉತ್ತಮ. ನಿಮ್ಮ ಮುಖದಿಂದ ಧೂಳು, ಕೊಳಕು, ಡೆಡ್ ಸ್ಕಿನ್ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ಇದು ತುಂಬಾ ಸಹಾಯಕವಾಗಿದೆ. ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೆ ಆಕರ್ಷಣೀಯವಾಗಿಸುತ್ತದೆ.

ವಿರೋಧಿ ಗುಣಲಕ್ಷಣಗಳು: ವಯಸ್ಸಾಗುವಿಕೆಯ ವಿರೋಧಿ ಗುಣಗಳು ಅಲೋವೆರಾದಲ್ಲಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳೂ ಮುಖದ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ಪ್ರತಿದಿನ ಬಳಸುವುದರಿಂದ ಯೌವ್ವನ ಮತ್ತು ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.

ಬಿಸಿಲಿನ ಬೇಗೆ : ಸನ್ ಬರ್ನ್ ಸಮಸ್ಯೆಯನ್ನು ತೊಡೆದುಹಾಕಲು ಅಲೋವೆರಾ ಜೆಲ್ ಸಹಕಾರಿ. ಪಿಂಪಲ್ಗಳನ್ನು ಹೋಗಲಾಡಿಸುವಲ್ಲಿ ಅಲೋವೆರಾ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಮುಖದಿಂದ ಮೇಕ್ಅಪ್ ತೆಗೆದುಹಾಕಲು ಸಹ ಅಲೋವೆರಾ ಜೆಲ್ ತುಂಬಾ ಉಪಯುಕ್ತ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಪಾದದ ತೊಂದರೆ : ಕಣಕಾಲುಗಳನ್ನು ಮೃದು ಮತ್ತು ಸುಂದರವಾಗಿಸಲು ಮತ್ತು ಪಾದದ ಬಿರುಕಿನ ಸಮಸ್ಯೆಗೂ ಅಲೋವೆರಾ ಜೆಲ್ಗಳನ್ನು ಬಳಸಬಹುದು. ಹಾಗೆಯೇ ಈ ಜೆಲ್ ಅನ್ನು ತುಟಿಗಳನ್ನು ಮೃದುವಾಗಿ ಮತ್ತು ಗುಲಾಬಿಯಂತೆ ಸುಂದರವಾಗಿಸಲು ಸಹ ಪರಿಣಾಮಕಾರಿಯಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ವಿಶ್ವ ಆರೋಗ್ಯ ದಿನ ನಾನು ಅನುಸರಿಸುವ ಕೆಲವೊಂದು ಆರೋಗ್ಯ ಟಿಪ್ಸ್ ನಿಮಗೂ ತಿಳಿಸುತ್ತಿದ್ದೇನೆ ತಾವು ಅನುಭವಿಸಿ ಉತ್ತಮವಾದ ಜೀವನಶೈಲಿಗೆ ಹತ್ತು ಆಚರಣೆಗಳು 1. ಪ್ರತಿನಿತ್ಯ 20 ನಿಮಿಷಗಳ ವರೆಗೆ ಧ್ಯಾನ ಮತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡೋಣ 2. ಮಿತ ಆಹಾರ ಸೇವನೆ ಮಾಡೋಣ 3. ಸಸ್ಯಾಹಾರಕ್ಕೆ ಬದಲಾಗೋಣ 4. ನಮ್ಮ ನೀರು ಸೇವನೆ ಪ್ರಮಾಣವನ್ನು ಕಾಪಾಡಿಕೊಳ್ಳೋಣ. 5. ಮಲಗುವುದಕ್ಕೆ ಮೂರು ಗಂಟೆ ಮುಂಚೆ ಆಹಾರ ಸೇವನೆ ಮಾಡಲು ಪ್ರಯತ್ನಿಸೋಣ. 6. ನಮ್ಮ ಮಾತುಗಳನ್ನು ಮತ್ತು…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಬಹುತೇಕ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ಬೆನ್ನಲ್ಲೇ, ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿದ್ದಾರೆ. ತಮ್ಮ ಬೆಂಬಲಿಗರಾದ ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ ಮತ್ತು ಸಾಗರದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಇನ್ನು ಎರಡನೇ ಪಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರು ಈ ಕೆಳಗಿನಂತಿವೆ.. 1) ಜಮಖಂಡಿ- ಶ್ರೀಕಾಂತ್ ಕುಲಕರ್ಣಿ…
ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ದ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರೆದಿದೆ. ಸಂಸದ ಎಲ್.ಆರ್. ಶಿವರಾಮೇಗೌಡ, ಸುಮಲತಾ ಗೌಡತಿ ಅಲ್ಲ. ಅವರು ನಾಯ್ಡು ಎಂದು ಹೇಳಿದ್ದರಲ್ಲದೆ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ ಕಂಡು ಸುಮಲತಾ ಈ ಚುನಾವಣೆಗೆ ನಿಂತಿದ್ದಾರೆಂದು ಕಾಣಿಸುತ್ತದೆ ಎಂದಿದ್ದರು. ಇದೀಗ ಸಚಿವ ರೇವಣ್ಣ ಸುಮಲತಾ ವಿರುದ್ದ ವಾಗ್ದಾಳಿ ಮುಂದುವರೆಸಿದ್ದು, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಮೇ 23 ರ…
ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.
ನೂತನ ಸಿಎಂ ಯಡಿಯೂರಪ್ಪ ಮೊದಲ ಪತ್ರಿಕಾಗೋಷ್ಠಿ| ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಹೆಚ್ಚಳ| ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರ್ಪಡೆ| ರೈತ ಸಮುದಾಯಕ್ಕೆ ವಾರ್ಷಿಕ 10 ಸಾವಿರ ರೂ. ಸಹಾಯಧನ| ನೇಕಾರರ 100 ಕೋಟಿ ರೂ. ಸಾಲಮನ್ನಾ ಘೋಷಿಸಿದ ಸಿಎಂ ಯಡಿಯೂರಪ್ಪ| 2019ರ ಮಾರ್ಚ್ 30ಕ್ಕೆ ಅನ್ವಯವಾಗುವಂತೆ ನೇಕಾರರ 100 ಕೋಟಿ ರೂ. ಸಾಲಮನ್ನಾ| ಬೆಂಗಳೂರು(ಜು.26): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಬಿಎಸ್ ಯಡಿಯೂರಪ್ಪ ರಾಜ್ಯದ ರೈತ…
ಸರ್ಕಾರಿ ಶಾಲೆ ಯೊಂದರಲ್ಲಿ ಮಕ್ಕಳ ಬಿಸಿ ಊಟದಲ್ಲಿ ಹಾವು ಬಿದ್ದಿರುವ ಘಟನೆ ನಡೆದಿದೆ. ಈ ಶಾಲೆಗೆ ಊಟ ಸರಬರಾಜು ಮಾಡುತ್ತಿದ್ದದ್ದು ಒಂದು ಸರ್ಕಾರೇತರ ಖಾಸಗಿ ಸಂಸ್ಥೆ ಯಾಗಿದ್ದು , ಇದು ಶಾಲೆಗೆ ಕಳುಹಿಸಿಕೊಟ್ಟ ಆಹಾರದಲ್ಲಿ ಹಾವು ಇರುವುದು ಪತ್ತೆಯಾಗಿದೆ. ಮಾಧ್ಯಮಗಳಲ್ಲಿ ಈ ಸುದ್ಧಿ ವರದಿಯಾಗಿದ್ದು ಈ ಕುರಿತು ವಿಚಾರಣೆ ನಡೆಸಿ ಆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ.ಇಲ್ಲಿನ ಗಾರ್ಗವನ್…