ಆರೋಗ್ಯ

ನೇರಳೆಹಣ್ಣು ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ…!

457

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ.

  • ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಪರಸ್, ಸೋಡಿಯಂ, ವಿಟಮಿನ್ ಸಿ, ಥಿಯಾಮಿನ್, ಫೋಲಿಕ್ ಆಸಿಡ್, ನಾರಿನಂಶ, ಕೆರೋಟಿನ್ ಮತ್ತು ಪ್ರೋಟೀನ್ ಗಳು ಹೇರಳವಾಗಿದೆ.
  • ಮಧುಮೇಹ ಇರುವವರಿಗೆ ನೇರಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.
  • ಜೀರ್ಣ ವ್ಯವಸ್ಥೆಗೆ ನೇರಳೆ ಹಣ್ಣು ಬಹಳ ಸಹಾಯ ಮಾಡುತ್ತದೆ. ದೇಹದಲ್ಲಿನ ವ್ಯರ್ಥ ಪದಾರ್ಥಗಳನ್ನು ಹೊರಕ್ಕೆ ಪಂಪ್ ಮಾಡುತ್ತದೆ. ರಕ್ತವು ಶುದ್ಧಿಯಾಗುತ್ತದೆ.
  • ರಕ್ತ ಹೀನತೆ ಸಮಸ್ಯೆ ಎದುರಿಸುವವರು ನೇರಳೆ ಹಣ್ಣನ್ನು ತಿನ್ನುವುದರಿಂದ ಬಳಲಿಕೆ ತೊಲಗುತ್ತದೆ. ಶಕ್ತಿ, ಚೈತನ್ಯ ಬರುತ್ತದೆ. ದೇಹಕ್ಕೆ ಸಾಕಷ್ಟು ಕಬ್ಬಿಣಾಂಶವು ಲಭ್ಯವಾಗುತ್ತದೆ.
  • 100 ಗ್ರಾಂಗಳ ನೇರಳೆ ಹಣ್ಣಿನಲ್ಲಿ ಶೇಕಡ 55ರಷ್ಟು ಪೊಟ್ಯಾಶಿಯಂ ಇರುತ್ತದೆ. ಹೃದಯ, ಮಧುಮೇಹ, ರಕ್ತದೊತ್ತಡ ಇರುವವರು ಒಂದೇ ಒಂದು ಹಣ್ಣು ತಿಂದರೂ ಸರಿಹೋಗುತ್ತದೆ.
  • ಜೀರ್ಣಶಕ್ತಿ ಸರಿಯಾಗಿಲ್ಲದಿರುವಾಗ ಒಂದು ಕಪ್ ಮೊಸರಿಗೆ 4 ಚಮಚ ನೇರಳೆ ಹಣ್ಣಿನ ರಸ ಬೆರೆಸಿ ಸೇವಿಸಿದರೆ ಉಪಶಮನವಾಗುತ್ತದೆ.
  • ಒಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ, ಮಾತನಾಡಲು ಆಗದೆ ಹಲ್ಲುಗಳು ನೋಯುತ್ತಿದ್ದರೆ, ಬಾಯಿ ದುರ್ವಾಸನೆ ಸಮಸ್ಯೆಗಳಿಗೆ ನೇರಳೆಹಣ್ಣು ದಿವ್ಯೌಷಧ. ಇದನ್ನು ಅಗಿದಾಗ ಹುಳಿ, ಸಿಹಿ ಒಗರು ಸುವಾಸಿತ ಜ್ಯೂಸ್ ಬಾಯಿಯ ದುರ್ನಾತವನ್ನು ದೂರಮಾಡುತ್ತದೆ. ಬಾಯಿಯ ಆರೋಗ್ಯವನ್ನು ಸಂರಕ್ಷಿಸುತ್ತದೆ.
  • ನೇರಳೆಹಣ್ಣನ್ನು ಎಂಥ ಪರಿಸ್ಥಿತಿಯಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ತಪ್ಪದೇ ಏನಾದರೂ ಸ್ವಲ್ಪ ಆಹಾರವನ್ನು ಸೇವಿಸಿದ ಆನಂತರವೇ ತಿನ್ನಬೇಕು. ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವವರು ವೈದ್ಯರ ಸಲಹೆ ಮೇರೆಗೆ ನೇರಳೆಹಣ್ಣನ್ನು ಸೇವಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ರೆಬೆಲ್ ಸ್ಟಾರ್ ಅಂಬಿ ಅಂತ್ಯಕ್ರಿಯೆಗೆ, ರಮ್ಯ ಬಾರದೆ ಇರಲು ಕಾರಣವೇ ಇದು!

    ಶನಿವಾರದಂದು ವಿಧಿವಶರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ಅವರ ಅಂತ್ಯಕ್ರಿಯೆ, ಸೋಮವಾರದಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.ಅಂಬರೀಶ್ ನಿಧನದ ಸಂದರ್ಭದಲ್ಲಿ ಸಂತಾಪ ಕೋರಿ ಟ್ವೀಟ್ ಮಾಡಿದ್ದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ, ಅಂತ್ಯಕ್ರಿಯೆಗೆ ಬಾರದಿರುವುದು ಅಂಬರೀಶ್ ಅಭಿಮಾನಿಗಳನ್ನು ಕೆರಳಿಸಿತ್ತು. ಅಂಬರೀಶ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದಲೂ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದ ಖ್ಯಾತನಾಮರು, ಅಂತಿಮ ದರ್ಶನದಿಂದ ಅಂತ್ಯಸಂಸ್ಕಾರದವರೆಗೆ ಹಾಜರಾಗಿದ್ದರೂ ರಮ್ಯಾ…

  • ಸುದ್ದಿ

    ಪರೀಕ್ಷೆಗೆ ಲೇಟಾಗುತ್ತೆ ಎಂದು ಓನ್ ವೇ ನಲ್ಲಿ ಬೈಕ್ ಓಡಿಸಿಕೊಂಡು ಹೋದ ವಿಧ್ಯಾರ್ಥಿನಿ. ಅಡ್ಡಗಟ್ಟಿದ ಟ್ರಾಫಿಕ್ ಪೋಲಿಸ್ ಮಾಡಿದ್ದೇನು ಗೊತ್ತಾ?

    ನಮ್ಮ ಸುರಕ್ಷತೆಗೋಸ್ಕರ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿ ನಾವು ವಾಹನ ಚಲಾಯಿಸಬೇಕಾಗುತ್ತದೆ. ಆದರೆ ಕೆಲವೊಂದು ಸಮಯಗಳಲ್ಲಿ ಮಾತ್ರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸದೇ ಬೇರೆ ವಿದಿಯೇ ಇಲ್ಲ. ಇದೇ ರೀತಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿಯೊಬ್ಬಳು ಪರೀಕ್ಷೆಗೆ ತಡವಾಗುತ್ತದೆ ಎಂಬ ಕಾರಣದಿಂದ ರಸ್ತೆ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸಿದ ಕಾರಣ ಪೊಲೀಸರು ತಡೆದಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಪರೀಕ್ಷೆಗೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಓನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ರಸ್ತೆ ಸಂಚಾರ…

  • ಸುದ್ದಿ

    ರಾಜಕಾರಣಿಯಾ ಕಚೇರಿ ಮುಂದೆಯೆ ಗೊಬ್ಬರ ಸುರಿದ ಭೂಪ….ಕಾರಣವೇನು ಗೊತ್ತಾ?

    ರಾಜಕಾರಣಿಗಳು ಕೆಲಸ ಮಾಡದಿದ್ದರೆ ಅವರ ವಿರುದ್ಧ ಜನರು ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಆದರೆ ಆಗಾಗ ಕೆಲವು ಪ್ರತಿಭಟನೆಗಳು ಎಲ್ಲರ ಗಮನ ಸೆಳೆಯುತ್ತವೆ. ಆಸ್ಟ್ರೇಲಿಯಾದ ತಾಸ್ಮಾನಿಯಾದ ಈ ವ್ಯಕ್ತಿ ಮಾಡಿದ ಪ್ರತಿಭಟನೆ ಕೂಡ ಬಹಳ ವಿಶಿಷ್ಟವಾಗಿದೆ. 51 ವರ್ಷದ ವ್ಯಕ್ತಿಯೊಬ್ಬ ಸ್ಥಳೀಯ ಜನಪ್ರತಿನಿಧಿ ಅವನ ಮಾತು ಕೇಳಲಿಲ್ಲವೆಂದು ಅವರ ಕಚೇರಿಯ ಮುಂದೆ 8000 ಕೆಜಿಯಷ್ಟು ಗೊಬ್ಬರ ಹಾಕಲು ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವನಿಗೆ ಬೇಕಾಗಿರುವ ಸರ್ಕಾರದ ಅನುದಾನದ ಬಗ್ಗೆ ಕೇಳಿದ್ದಾನೆ. ಯಾವಾಗ ಅವರು ಅವನ ಪ್ರಶ್ನೆಗೆ ಉತ್ತರಿಸಲಿಲ್ಲವೋ…

  • ಸುದ್ದಿ

    “ಬರದ ನಾಡಿಗೆ ಭಗೀರಥನ ಪ್ರಯತ್ನ” ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯನೂರಾರು ಕೆರೆಗಳಿಗೆ ನೀರು…!

    ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…

  • ಸಿನಿಮಾ

    ಸಿನಿಮಾಗಳಲ್ಲಿ ನಮ್ಮ ಸ್ಟಾರ್‌‍ಗಳು ಹಾಕಿಕೊಳ್ಳುವ ಬಟ್ಟೆಗಳನ್ನು ಸಿನಿಮಾ ಮುಗಿದ ಬಳಿಕ ಏನು ಮಾಡುತ್ತಾರೆಂದು ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಸಿನಿಮಾಗಳಲ್ಲಿ ಸ್ಟಾರ್‌‍ಗಳು ಬಳಸುವ ಬಟ್ಟೆಗಳೆಂದರೆ ಅಭಿಮಾನಿಗಳಿಗೆ ತುಂಬಾ ಕ್ರೇಜ್ ಇರುತ್ತದೆ. ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಹಾಕಿಕೊಂಡರೆ ಇನ್ನಷ್ಟು ಕ್ರೇಜ್ ಬೆಳೆಯುತ್ತದೆ. ಸದ್ಯಕ್ಕೆ ಹೀರೋಗಳು ಸಹ ಟ್ರೆಂಡ್ ಸೆಟ್ ಮಾಡಬೇಕೆಂಬ ಉದ್ದೇಶದಿಂದ ಟ್ರೆಂಡಿ ಬಟ್ಟೆಗಳನ್ನು ಹಾಕಿಕೊಂಡು ಅವಕ್ಕೆ ಕ್ರೇಜ್ ತರುತ್ತಿರುತ್ತಾರೆ. ಆಗಿನ ಕಾಲದಲ್ಲಿ ಆರತಿ, ಭಾರತಿ, ಕಲ್ಪನಾರ ಸೀರೆ ಅವರಿಟ್ಟುಕೊಳ್ಳುವ ಕುಂಕುಮವನ್ನು ಫಾಲೋ ಆಗುತ್ತಿದ್ದರು.

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ..

    ಗುರುವಾರ, 05/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ… ಮೇಷ:– ಬಹುದಿನದ ನೀರಿಕ್ಷಿತ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉ  ನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು. ವೃಷಭ:- ಇವತ್ತಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ…