ಆರೋಗ್ಯ

ಕೂದಲು ಉದುರುತ್ತಿದ್ದರೆ. ಅದನ್ನು ತಡೆಗಟ್ಟಲು ಸುಲಭ ಉಪಾಯ ಇಲ್ಲಿದೆ ನೋಡಿ.!

416

ಇಂದಿನ ದಿನದಲ್ಲಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಮಾಲಿನ್ಯ, ನೀರಿನಲ್ಲಿ ಬೆರೆಸುವ ರಾಸಾಯನಿಕ ಸೇರಿ, ನಗರಗಳಲ್ಲಿಪುರುಷರು ಹಾಗೂ ಮಹಿಳೆಯರಿಬ್ಬರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲು ಉದುರುವಿಕೆ ತಡೆಗಟ್ಟಲು ಮನೆಯಲ್ಲೇ ಏನು ಮಾಡಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

ಕೂದಲನ್ನು ಉದ್ದ ಬಿಡದಿರಿ

ಪ್ರತಿ 8 ಅಥವಾ 10 ವಾರಗಳಿಗೊಮ್ಮೆ ಕೂದಲನ್ನು ಸಣ್ಣದಾಗಿ ಕಟ್ಟಿಂಗ್‌ ಮಾಡಿಸಿರುವುದರಿಂದ ಕೂದಲು ಉದುರುವಿಕೆ ತಡೆಯಲು ಸಾಧ್ಯ. ಇದರಿಂದ ಕೂದಲಿನ ಬೆಳವಣಿಗೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಉದ್ದ ಕೂದಲಿಗೆ ಬೇಗನೆ ನಾಶವಾಗುತ್ತದೆ, ತುಂಡಾಗುತ್ತದೆ. ಇದಕ್ಕಾಗಿ ಸಣ್ಣದಾಗಿ ಕಟ್ಟಿಂಗ್‌ ಮಾಡಿಸುವುದು ಹೆಚ್ಚು ಸೂಕ್ತ.

ಹಾಟ್‌ ಆಯಿಲ್‌ ಮಸಾಜ್‌

ಒತ್ತಡಯುಕ್ತ ಕೆಲಸ ಹಾಗೂ ಚಿಂತೆಯಿಂದಲೂ ಕೂದಲು ಉದುರುತ್ತವೆ. ಹೀಗಾಗಿ ನಿಗದಿತ ಸಮಯಕ್ಕೆ ಒಮ್ಮೆ ಚೆನ್ನಾಗಿ ಬಿಸಿ ತೈಲದ ಮಸಾಜ್‌ ಮಾಡಿಸಿಕೊಳ್ಳುವುದು ಒಳ್ಳೆಯದು.

ನಿಯಮಿತವಾಗಿ ಕೂದಲಿಗೆ ಬ್ರಶ್‌ ಹಾಕಿ

ಹೆಚ್ಚು ಕೂದಲನ್ನು ಬಾಚುವುದು, ಬ್ರಶ್‌ ಮಾಡುವುದರಿಂದ ಕೂದಲು ಇನ್ನೂ ಹೆಚ್ಚು ಉದುರುತ್ತವೆ ಎಂದು ಕೇಳಿರಬಹುದು. ಆದರೆ ಇವು ಸಂಪೂರ್ಣ ಸತ್ಯವಲ್ಲ. ನಿಯಮಿತವಾಗಿ ಬ್ರಶ್‌ ಹಾಕಿ ಕೂದಲನ್ನು ಸ್ವಚ್ಛಗೊಳಿಸುವುದರಿಂದ ಸತ್ತಿರುವ ಕೂದಲುಗಳು ಹೋಗುತ್ತವೆ. ಅಲ್ಲದೆ ತಲೆಯಲ್ಲಿ ರಕ್ತ ಸಂಚಾರವನ್ನೂ ಹೆಚ್ಚಿಸುತ್ತದೆ. ಬೇರುಗಳನ್ನು ಇನ್ನಷ್ಟು ಸದೃಢವನ್ನಾಗಿಸುತ್ತದೆ.

ಒದ್ದೆ ಕೂದಲನ್ನು ಟವಲ್‌ನಿಂದ ಕಟ್ಟಬೇಡಿ

ತಲೆ ಸ್ನಾನದ ಬಳಿಕ, ತಲೆಗೆ ಟವಲ್‌ ಸುತ್ತಿಕೊಳ್ಳುವುದು, ಕೂದಲನ್ನು ಟವಲ್‌ನಿಂದ ಮುಚ್ಚಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದನ್ನು ಮಾಡಲೇ ಬೇಡಿ. ಇದರಿಂದ ಕೂದಲುಗಳು ಇನ್ನಷ್ಟು ಉದುರುತ್ತವೆ.

ಕೂದಲನ್ನು ಫ್ಲಿಪ್‌ ಮಾಡಿ

ಉದ್ದ ಕೂದಲಿರುವವರು ನಿಯಮಿತವಾಗಿ ಮೇಲೆ ಕೆಳಗೆ ಫ್ಲಿಪ್‌ ಮಾಡುವುದರಿಂದ ಕೂದಲು ಬೆಳವಣಿಗೆಗೆ ಅನುಕೂಲವಾಗುತ್ತದೆ. ಕನಿಷ್ಟ 3 ನಿಮಿಷಗಳ ಕಾಲ ಮೇಲೆ ಕೆಳಗೆ ಕೂದಲನ್ನು ಫ್ಲಿಪ್‌ ಮಾಡಬಹುದು

ಚಿಂತೆಯನ್ನು ದೂರವಿಡಿ

ಚಿಂತೆ ಹೆಚ್ಚಾದರೆ ಕೇವಲ ಕೂದಲು ಮಾತ್ರವಲ್ಲದೆ ದೇಹದ ಆರೋಗ್ಯದಲ್ಲೂ ವ್ಯತ್ಯಯವಾಗುತ್ತದೆ. ಚಿಂತೆ, ಒತ್ತಡದ ಜೀವನದಿಂದ ಕೂದಲಿನ ಬೆಳವಣಿಗೆಗೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿಯೇ ಧ್ಯಾನ, ಯೋಗಾಸನ, ಪ್ರಾಣಾಯಾಮ ಸೇರಿ ಇನ್ನಿತರ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಸೂಕ್ತ. ಒತ್ತಡದಿಂದ ಮುಕ್ತವಾದರೆ ಕೂದಲ ಬೆಳವಣಿಗೆ ಸಲೀಸಾಗುತ್ತದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ