ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡಿಜಿಟಲ್ ವಾಲೆಟ್ ಮತ್ತು ಜನಪ್ರಿಯ ಆನ್ಲೈನ್ ಪಾವತಿ ವ್ಯವಸ್ಥೆ ‘ಗೂಗಲ್ ಪೇ’ ಅಪ್ಲಿಕೇಶನ್ಗೆ ಇದೀಗ ಬಯೋಮೆಟ್ರಿಕ್ ಭದ್ರತೆಯನ್ನು ಪರಿಚಯಿಸಲಾಗಿದೆ. ಆಂಡ್ರಾಯ್ಡ್ 10 ನೊಂದಿಗೆ ಗೂಗಲ್ ಪರಿಚಯಿಸಿದ ಬಯೋಮೆಟ್ರಿಕ್ ಭದ್ರತೆ ವೈಶಿಷ್ಟ್ಯವನ್ನು ಗೂಗಲ್ ಪೇ ಅಪ್ಲಿಕೇಶನ್ನ ಇತ್ತೀಚಿನ 2.100 ಆವೃತ್ತಿಯಲ್ಲಿ ತರಲಾಗಿದ್ದು, ಇದು ಫಿಂಗರ್ಪ್ರಿಂಟ್ ಮತ್ತು ಮುಖ ಗುರುತಿಸುವಿಕೆ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಆನ್ಲೈನ್ ವಹಿವಾಟುಗಳನ್ನು ರಕ್ಷಿಸಲು ಅನುವು ಮಾಡಿಕೊಡಲಿದೆ.

ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರರು ಈ ಹಿಂದೆ ತಮ್ಮ ವಹಿವಾಟುಗಳನ್ನು ಭದ್ರಪಡಿಸಿಕೊಳ್ಳಲು ಪಿನ್ ನಮೂದಿಸಬೇಕಾಗಿತ್ತು. ಆದರೆ, ಇತ್ತೀಚಿನ ನವೀಕರಣದೊಂದಿಗೆ ಇದು ಈಗ ಬದಲಾಗಿದ್ದು, ಗೂಗಲ್ ಈಗ ಬಯೋಮೆಟ್ರಿಕ್ಸ್ APIಗೆ ಬೆಂಬಲವನ್ನು ಸೇರಿಸಿರುವುದರಿಂದ ನಿಮ್ಮ ಹಣ ವರ್ಗಾವಣೆಯನ್ನು ದೃಢೀಕರಿಸಲು ನಿಮ್ಮ ಬೆರಳಚ್ಚುಗಳನ್ನು ಅಥವಾ ಮುಖವನ್ನು ಬಳಸಬಹುದು. ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ 10 ಸಾಧನಗಳಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಈ ವೈಶಿಷ್ಟ್ಯವು ಶೀಘ್ರದಲ್ಲೇ ಆಂಡ್ರಾಯ್ಡ್ 9 ಫೋನ್ಗಳಿಗೆ ಬರುತ್ತಿದೆ.

ಗೂಗಲ್ ಪೇ ಬಳಕೆದಾರರು ವೈಶಿಷ್ಟ್ಯವನ್ನು ಅಪ್ಲಿಕೇಶನ್ನಲ್ಲಿ ಹಣ ಕಳುಹಿಸುವ ವಿಭಾಗದಲ್ಲಿ ಕಾಣಬಹುದಾಗಿದ್ದು, ಬಳಕೆದಾರರು ಪಿನ್ನಿಂದ ಬಯೋಮೆಟ್ರಿಕ್ ಭದ್ರತೆಗೆ ಬದಲಾಯಿಸಬಹುದು ಅಥವಾ ಅಪ್ಲಿಕೇಶನ್ ಮೂಲಕ ಮಾಡಿದ ಹಣ ವರ್ಗಾವಣೆಯನ್ನು ರಕ್ಷಿಸಲು ಎರಡೂ ಆಯ್ಕೆಗಳನ್ನು ಇರಿಸಿಕೊಳ್ಳಬಹುದು. ಆದಾಗ್ಯೂ, ಬಯೋಮೆಟ್ರಿಕ್ ಭದ್ರತಾ ವೈಶಿಷ್ಟ್ಯವು ಹಣ ವರ್ಗಾವಣೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಇದು ಮಳಿಗೆಗಳಲ್ಲಿ ಎನ್ಎಫ್ಸಿ ಪಾವತಿಗಳಿಗೆ ಸಾಧ್ಯವಾಗುವುದಿಲ್ಲ ಅದಕ್ಕಾಗಿ, ನೀವು ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಲೇಬೇಕು.

ಗೂಗಲ್ ಪೇ ಯುಪಿಐ ಆಧಾರಿತ ತೇಜ್ ಅಪ್ಲಿಕೇಶನ್ನ ರಿಬ್ರಾಂಡೆಡ್ ಆವೃತ್ತಿಯಾಗಿದ್ದು, ಇದು 2017 ರಲ್ಲಿ ಪ್ರಾರಂಭವಾಯಿತು. ಕಂಪನಿಯು ಇದನ್ನು 2018 ರಲ್ಲಿ ಗೂಗಲ್ ಪೇ ಎಂದು ಮರುಹೆಸರಿಸಿದೆ. ಈ ಅಪ್ಲಿಕೇಶನ್ ಇಂದು ಭಾರತದಲ್ಲಿ 67 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಗೂಗಲ್ ಪೇ ಇತ್ತೀಚೆಗೆ ತಮ್ಮ ವ್ಯವಹಾರಗಳ ಬಗ್ಗೆ ತಿಳಿಸುವ ಬಳಕೆದಾರರಿಗೆ ಅಪ್ಲಿಕೇಶನ್ ಅಧಿಸೂಚನೆಗಳು ಮತ್ತು SMS ಕಳುಹಿಸಲು ಪ್ರಾರಂಭಿಸಿದೆ. ಇದೀಗ ಪಿನ್ ಆಧಾರಿತ ಭದ್ರತೆಗಿಂತ ಬಯೋಮೆಟ್ರಿಕ್ ಭದ್ರತೆಗೆ ನೀಡಿ ಅನುಕೂಲ ಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ. ಅಲ್ಲದೆ, ಈ ಮಕ್ಕಳ ಹೋಂ ವರ್ಕ್ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ…
ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು.
ಈ ಹಣ್ಣಿನಲ್ಲಿರುವ ಅಮಿನೋ ಆ್ಯಸಿಡ್ ಎಂಬ ರಾಸಾಯನಿಕ ಅಂಶದಿಂದಾಗಿ ಮಕ್ಕಳಲ್ಲಿ ಸಿಡುಬು ಮತ್ತು ದಡಾರಾ ಕಾಯಿಲೆಯ ಲಕ್ಷಣಗಳು ಗೋಚರಿಸುವಂತೆ ಮಾಡುತ್ತಿವೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಅಂಶ ಗಣನೀಯವಾಗಿ ಇಳಿಯುವಂತೆ ಮಾಡಿ ಮಕ್ಕಳಲ್ಲಿ ಹೈಪೊಗ್ಲಿಸಿಮಿಯಾ ಎಂಬ ಸಮಸ್ಯೆಯನ್ನು ತಂದೊಡ್ಡುತ್ತದೆ
ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತು ಶುಭಂ ಕರೋತಿ ಎನ್ನುವ ಸಂಜೆಯ ಪ್ರಾರ್ಥನೆಯನ್ನ ಮಾಡ್ತಿದ್ರು, ಆದ್ರೆ ಈಗಿನ ಮಕ್ಕಳಿಗೆ ಸಂಜೆಯ ಹೊತ್ತು ಟಿ.ವಿ . ನೋಡುವುದಕ್ಕೆ ಸಮಯವಿರುವುದಿಲ್ಲ. ಎಲ್ಲೋ ಹಿಂದೂಗಳು ನಮ್ಮ ಹಿಂದೂ ಸಂಸ್ಕೃತಿ ಇಂದ ಆಚಾರ ಧರ್ಮಗಳಿಂದ ದೂರ ಸರಿಯುತ್ತಿದೇವೆ ಎನ್ನಿಸುತ್ತಿದೆ. ಆಚಾರಧರ್ಮಗಳನ್ನ ಪಾಲಿಸುವುದೇ ಆಧ್ಯತ್ಮೀಕತೆಗೆ ಅಡಿಪಾಯವಾಗಿದೆ. ಸಂಧ್ಯಾ ಕಾಲ ವೆಂದರೆ ಸೂರ್ಯೋದಯಕ್ಕೂ ಮೊದಲು, ಸೂರ್ಯಾಸ್ತದ ನಂತರ ೪೮ ನಿಮಿಷಗಳ ಸಮಯವನ್ನು ಸಂಧಿಕಾಲವೆಂದು ಅಥವಾ ಪರ್ವಕಾಲವೆಂದು ಕರೆಯಲಾಗುತ್ತದೆ.ಸಂಧ್ಯಾ ಕಾಲ / ಸಂಜೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ಉಚಿತ…
ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ. ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಬಹುಶಃ ದರ್ಶನ್ ಅವರು ಭಯ ಪಡುವ…
ಸಮಯ ಮತ್ತು ಸಂದರ್ಭದ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿಮಾಡಿ ಕೊಡುತ್ತದೆ. ಇಂತಹದ್ದೇ ಒಂದು ಕೆಲಸವನ್ನ ಇಂಜಿನಿಯರಿಂಗ್ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮಾಡಿದ್ದಾನೆ ಮತ್ತು ಈತ ಮಾಡಿದ ಕೆಲಸಕ್ಕೆ ಒಂದು ಕ್ಷಣ ಎಲ್ಲರೂ ಬೆರಗಾಗಿದ್ದಾರೆ. ಇನ್ನು ಇದೂ ದೊಡ್ಡ ಸುದ್ದಿ ಅಲ್ಲದೆ ಇರಬಹುದು ಆದರೆ ಇದು ವಿಭಿನ್ನ ಅನ್ನುವ ಕಾರಣಕ್ಕೆ ನಾವು ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ…