ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಿನ ಕಾಲದಲ್ಲಿ ಗೂಗಲ್ ಬಳಸದೆ ಇರುವ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಾಗದು ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಗೂಗಲ್ ಸಹಾಯ ಪಡೆಯುತ್ತಾರೆ.ಆಗೆಯೇ ಗೂಗಲ್ ನಮ್ಮ ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರ ನೀಡುವುದು ಮಾತ್ರವಲ್ಲದೆ ಹಣವನ್ನು ಸಂಪಾದಿಸುವ ದಾರಿಯು ತೋರಿಸುತ್ತದೆ. ಐಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ನಿಮಗೊಂದು ಬಿಗ್ ಆಫರ್ ನೀಡಿದೆ. ಗೂಗಲ್ ನೀಡಿರುವ ಚಾಲೆಂಜ್ ಒಂದರಲ್ಲಿ ನೀವು ಗೆದ್ದರೆ ಬರೋಬ್ಬರಿ 10.76 ಕೋಟಿ ಬಹುಮಾನವನ್ನು ನಿಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದಾಗಿದೆ.!ಹೌದು, ತನ್ನ ಬಳಕೆದಾರರ ಮಾಹಿತಿ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತೆಯನ್ನು ಮೇಲೆರಿಸುವ ಬಹುದೊಡ್ಡ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಕಂಪೆನಿ ಮುಂದಾಗಿದ್ದು, ಇದಕ್ಕಾಗಿ 10.76 ಕೋಟಿ ಹಣವನ್ನುಸ್ಪರ್ಧೆಯ ಮೂಲಕ ನೀಡುತ್ತಿದೆ.!

ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಗೂಗಲ್ ಒಡೆತನದ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡಬೇಕು. ಹೀಗೆ ಹ್ಯಾಕ್ ಮಾಡಿದ ಯಾರಿಗಾದರೂ ಕಂಪನಿಯು 1.5 ಮಿಲಿಯನ್ ಡಾಲರ್ ಅಥವಾ 10.76 ಕೋಟಿ ಹಣವನ್ನು ಪಾವತಿಸಲಿದೆ. ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ನಿರ್ಮಿತ ಭದ್ರತೆ ಹೊಂದಿರುವ ಚಿಪ್ ಅನ್ನು ಪ್ರಬಲ ಚಿಪ್‌ಸೆಟ್ಎಂದು ಗುರುತಿಸಲಾಗಿದ್ದು, ಇದನ್ನು ಮತ್ತಷ್ಟು ಶಕ್ತಿಯುತವಾಗಿರುವ ನಿಟ್ಟಿನಲ್ಲಿ ಗೂಗಲ್ ಇಂತಹದೊಂದು ಚಾಜೆಂಜ್ ಗೆದ್ದವರಿಗೆ ಭಾರೀ ಬಹುಮಾನವನ್ನು ಸಹ ಪ್ರಕಟಿಸಿದೆ.
ಗೂಗಲ್ ಪಿಕ್ಸೆಲ್ ಸಾಧನಗಳಲ್ಲಿ ಕಂಡುಬರುವ ಎಂಟರ್‌ಪ್ರೈಸ್-ಗ್ರೇಡ್ ಸೆಕ್ಯುರಿಟಿ ಚಿಪ್ ಸಾಧನ ಮತ್ತು ಆಪರೇಟಿಂಗ್ ಸಿಸ್ಟಂನಲ್ಲಿ ಸೂಕ್ಷ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ನಿರ್ಮಿಸಲಾಗಿದೆ. ಇದನ್ನು ಗ್ರಾಹಕರ ಸುರಕ್ಷತೆಯನ್ನು ಹೆಚ್ಚು ಖಾತ್ರಿಗೊಳಿಸುವ ಪ್ರಬಲ ಸಾಧನ ಎಂದು ಕರೆಯಲಾಗಿದೆ. ಆದ್ದರಿಂದ ಇದನ್ನು ಹ್ಯಾಕ್ ಮಾಡಲು ಅಸಾಧ್ಯ ಎನ್ನುತ್ತಿವೆ ವರದಿಗಳು. ಆದರೆ, ಇಂತಹ ಸಮಸ್ಯೆಗಳನ್ನು ಸುಲಭವಾಗಿ ಎದುರಿಸುವ ತಜ್ಞರು ನಮ್ಮ ಮಧ್ಯದಲ್ಲೇ ಇರುತ್ತಾರೆ. ಗೂಗಲ್ ತಂತ್ರಜ್ಞಾನ ಕೂಡ ಅಂತಿಮವಲ್ಲ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಆಂಡ್ರಾಯ್ಡ್ ಓಎಸ್ ಡೆವಲಪರ್ ಆವೃತ್ತಿಗಳಲ್ಲಿನ ನ್ಯೂನತೆಗಳನ್ನು ಹ್ಯಾಕ್ ಮಾಡುವ ಅಥವಾ ಎತ್ತಿ ತೋರಿಸುವ ವ್ಯಕ್ತಿಗಳಿಗೆ ಗೂಗಲ್ ಪ್ರತಿವರ್ಷ ಬಗ್ ಬೌಂಟಿ ಕಾರ್ಯಕ್ರಮದಡಿಯಲ್ಲಿ ಬಹುಮಾನ ನೀಡುತ್ತಿದೆ. ಗೂಗಲ್ ತನ್ನ ಬಗ್ ಬೌಂಟಿ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೂ 4 ಮಿಲಿಯನ್ ಡಾಲರ್‌ಗಳನ್ನು ಇಂತಹ ತಂತ್ರಜ್ಞರಿಗೆ ಪಾವತಿಸಿರುವುದಾಗಿ ತಿಳಿಸಿದೆ. ಭಾರತದ ಕೆಲ ಐಟಿ ತಂತ್ರಜ್ಞರು ಕೂಡ ಗೂಗಲ್ ನೂನ್ಯತೆಯನ್ನು ಎತ್ತಿ ತೋರಿಸಿ ಬಗ್ ಬೌಂಟಿ ಮೂಲಕ ಲಕ್ಷಾಂತಹ ಬಹುಮಾನ ಪಡೆದಿರುವುದನ್ನು ನಾವು ನೋಡಬಹುದು.

ವ್ಯಾಪಾರ ಹಾಗು ಉದ್ಯಮಗಳನ್ನು ನಡೆಸಲು ಬೇಕಿರುವ, ಅವಶ್ಯಕವಿರುವ ವೆಬ್ಸೈಟುಗಳು, ತಂತ್ರಾಂಶಗಳಲ್ಲಿ ಇರುವ ಅನೇಕ ಲೋಪ ದೋಷಗಳನ್ನು ಹುಡುಕಲು ಸಾಕಷ್ಟು ಖರ್ಚಾಗುತ್ತದೆ. ಹಲವು ತಂತ್ರಜ್ಞರ ಮೇಲೆ ಉದ್ಯಮಗಳು ಹಣ ಹೂಡಬೇಕಾಗುತ್ತದೆ. ಇದರಿಂದ ಖರ್ಚು ವಿಪರೀತ ಬರುತ್ತದೆ. ಕೆಲವೊಮ್ಮೆ ಅದೆಷ್ಟು ಖರ್ಚು ಮಾಡಿದರೂ ಎಲ್ಲ ಲೋಪ ದೋಷಗಳನ್ನು ಸರಿಪಡಿಸುವುದು ಎಷ್ಟೇ ತಜ್ಞರಿದ್ದರೂ ಸಾಧ್ಯವಾಗದ ಮಾತು ಎಂಬಂತಿರುತ್ತದೆ. ಹೀಗೆ ಇರುವಾಗ ಕಂಪೆನಿಗಳು “ಬಗ್ ಬೌಂಟಿ” ಎನ್ನುವ ಯೋಜನೆ ಮೊರೆ ಹೋಗುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರುಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಸಂಶೋಧನೆಯೊಂದು ಜಾಸ್ತಿ ಹಾಲು ಕುಡಿಯುವವರು ಆತಂಕ ಪಡುವಂತಹ ವಿಷಯವೊಂದನ್ನು ಹೊರಹಾಕಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿದ್ರೆ ಮೂಳೆಗಳು ದುರ್ಬಲವಾಗುತ್ತದೆಯಂತೆ. ಹೆಚ್ಚು ಹಾಲು ಕುಡಿಯುವ ಜನರು ಬಹುಬೇಗ ಸಾವನ್ನಪ್ಪುತ್ತಾರಂತೆ. 20 ವರ್ಷಗಳ ಕಾಲ 61 ಸಾವಿರ ಮಹಿಳೆಯರು…
ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಒಬ್ಬ ವ್ಯಕ್ತಿ ಗರಿಷ್ಠ ಎಷ್ಟುಆಹಾರ ಸೇವಿಸಬಲ್ಲ ಎಂಬುದನ್ನು ಹೋಟೆಲ್ನವರೇ ತಿಳಿಸಬೇಕು ಹೇಳಿದೆ.
ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೇ ತೂಕ ಕಡಿಮೆ ಇದ್ದರೂ ಕಷ್ಟ. ಜಾಹಿರಾತಿನಲ್ಲಿ ಬಂದ ಪುಡಿಯನ್ನೆಲ್ಲ ತಿಂದು ತೇಗಿದರೂ ಪ್ರಯೋಜನವಾಗಿಲ್ಲವೇ? ಅವೆಲ್ಲ ಏನೂ ಬೇಡ, ಸೂಕ್ತ ಆಹಾರ ಸೇವಿಸಿ ಸಾಕು. ತೂಕ ಕಳ್ಕೊಳೋ ಬಗ್ಗೆ ಎಲ್ಲರೂ ಮಾತಾಡ್ತಾರೆ, ಎಲ್ಲ ಪತ್ರಿಕೆಗಳಲ್ಲೂ ಅದಕ್ಕೆ ಸಂಬಂಧಪಟ್ಟ ಟಿಪ್ಸ್, ಲೇಖನ ದಿನಕ್ಕೊಂದರಂತೆ ಹರಿದು ಬರುತ್ತವೆ, ಇಂಟರ್ನೆಟ್ನಲ್ಲಿ ತೂಕ ಕಳೆದುಕೊಂಡವರ ಸಕ್ಸಸ್ ಸ್ಟೋರಿಗಳಿಗೂ ಕೊರತೆ ಇಲ್ಲ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಕಡ್ಡಿ, ಸಿಳ್ಳೆಕ್ಯಾತ, ಅಸ್ಥಿಪಂಜರ ಎಂದೆಲ್ಲ ಕರೆಸಿಕೊಂಡು,…
ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್ ರಸ್ತೆಯಲ್ಲಿರುವ ಕ್ಲಬ್ ಸಿಟ್ರಸ್ ಸಲೂನ್ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್ಗೆ ತೆರಳಿದ್ದರು. ಈ ವೇಳೆ…
ಸ್ವಾತಂತ್ರ್ಯಪಡೆದ 72 ವರ್ಷಗಳಾದರೂ ಬಲರಾಂಪುರ್ ಜಿಲ್ಲೆಯ ಗ್ರಾಮಕ್ಕೆ ವಿದ್ಯುತ್ತಲುಪಿಲ್ಲ. ಆದರೆ ವಿದ್ಯುತ್ ಬಿಲ್ಮಾತ್ರ ತಲುಪಿದೆ. ಈ ಗ್ರಾಮಸ್ಥರು ರಾತ್ರಿವೇಳೆ ಲ್ಯಾಂಟರ್ನ್ ಮತ್ತು ಧಿಬ್ರಿಗಳನ್ನು ಬಳಸುತ್ತಾರೆ.ಇದು ಬಿಜೆಪಿ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ರಾಮ್ವಿಚಾರ್ನೇತಮ್ಗೆ ಸೇರಿದ ಗ್ರಾಮವಾಗಿದೆ. ರಾಜ್ಯಸಭಾ ಸಂಸದ ರಾಮ್ವಿಚಾರ್ ನೇತಮ್ಅವರ ಮನೆ ಇಲ್ಲಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂದು ಪತ್ರಿ ಪಾರಿಗ್ರಾಮಸ್ಥರು ಹೇಳುತ್ತಾರೆ. ಇಲ್ಲಿಯವರೆಗೆ ವಿದ್ಯುತ್ ನೀಡುವ ಬಗ್ಗೆ ಕೇವಲ ಭರವಸೆ ದೊರೆತಿದೆ ಅಷ್ಟೇ, ಆದರೆ ವಿದ್ಯುತ್ಮಾತ್ರ ತಲುಪಿಲ್ಲ ಎಂದು ಅವರು…
ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು…